ಯುವಪೀಳಿಗೆಗೆ ದೇವರಾಜು ಅರಸು ರವರ ಸಿದ್ಧಾಂತಗಳು ಹಾಗೂ ಆದರ್ಶ ಅತ್ಯವಶಕ- ಮಂಜುನಾಥ್.

ಕೊರಟಗೆರೆ 

   ಮಾಜಿ ಮುಖ್ಯಮಂತ್ರಿ ದಿವಾಂಗತ ಡಿ. ದೇವರಾಜ ಅರಸು ರವರ ಸಿದ್ಧಾಂತಗಳು ಮತ್ತು ಜನಪರ ಕಾರ್ಯಕ್ರಮಗಳು ಇಂದಿಗೂ ಪ್ರಸ್ತುತವಾಗಿವೆ. ಯುವ ಪೀಳಿಗೆ ಅರಸುರವರ ಆದರ್ಶಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಮಾತ್ರ ನಿಜವಾದ ಸಮಾನತೆಯ ಸಮಾಜ ನಿರ್ಮಾಣವಾಗಲು ಸಾಧ್ಯ ಎಂದು ತಾಹಶೀಲ್ದಾರ್ ಮಂಜುನಾಥ್ ತಿಳಿಸಿದರು.

   ಅವರು ಕೊರಟಗೆರೆ ಪಟ್ಟಣದ ತಾಲೂಕು ಕಛೇರಿ ಸಭಾಂಗಣದಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯಿತಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮತ್ತು ಪಟ್ಟಣ ಪಂಚಾಯಿತಿ ಇವರ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ ಹಿಂದುಳಿದ ವರ್ಗಗಳ ಪರಿವರ್ತನೆಯ ಹರಿಕಾರಕ ಡಿ.ದೇವರಾಜ ಅರಸು ರವರ 110 ನೇ ಜನ್ಮದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಮಾಜಿ ಮುಖ್ಯಮಂತ್ರಿ ದಿವಾಂಗತ ದೇವರಾಜ ಅರಸು ರವರ ಸುದೀಘ 8 ವರ್ಷಗಳ ಅಧಿಕಾರ ಅವದಿಯಲ್ಲಿ ಸಮಾಜದಲ್ಲಿ ಹಿಂದುಳಿದವರು, ದಲಿತರು, ಬಡವರು, ರೈತರು, ಕಾರ್ಮಿಕರು ಮೊದಲಾದ ದುರ್ಬಲ ವರ್ಗದವರ ಪರವಾಗಿ ನಿಂತು ಸರ್ವರಿಗೂ ಸಮಪಾಲು ಸಿಗಬೇಕೆಂಬ ಚಿಂತನೆಯಲ್ಲಿ ನಂಬಿಕೆ ಇಟ್ಟಿದ್ದ ಅರಸರು ಜನಸಂಖ್ಯೆಗೆ ಅನುಗುಣವಾಗಿ ರಾಜಕೀಯವೂ ಸೇರಿದಂತೆ ಎಲ್ಲಾ ಸಾಮಾಜಿಕ ನ್ಯಾಯ ನೀಡಿದವರು ಎಂದ ಅವರು ಅರಸು ರವರು ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ ಹೊಸ ಮಾದರಿಯ ಭಾಗವಾಗಿಯೇ ರೈತರಿಗಾಗಿ ಭೂಸುಧಾರಣೆ ಕಾನೂನು, ಮೀಸಲಾತಿ ನೀತಿ, ಮಲಹೊರುವ ಪದ್ದತಿ ನಿಷೇದ, ಜೀತಪದ್ಧತಿಯ ನಿರ್ಮೂಲನೆ, ಋಣ ಪರಿಹಾರದಂತಹ ದಿಟ್ಟ ನಿರ್ಧಾರಗಳನ್ನು ಕೈಗೊಂಡು ಅನುಷ್ಠಾನವನ್ನು ಯಶಸ್ವಿಯಾಗಿ ಜಾರಿಗೆ ತಂದಿದ್ದು ಇದರೊಂದಿಗೆ ನಿರುದ್ಯೋಗಿ ಪದವೀಧರರಿಗಾಗಿ ಉದ್ಯೋಗ ಭರವಸೆ ಯೋಜನೆ ಇಂದು ರಾಷ್ಟ್ರಮಟ್ಟದ ಯೋಜನೆ ಯಾಗಿದ್ದು ಅರಸುರವರ ಈ ಎಲ್ಲಾ ಜನಪರ ಯೋಜನೆಗಳು ಬೇರೆ ಬೇರೆ ರಾಜ್ಯಗಳಲ್ಲಿ ಅನಷ್ಠಾನಕ್ಕೆ ಮಾದರಿಯಾಗಿದೆ ಎಂದು ತಿಳಿಸಿದರು.

   ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅರ್ಥಶಾಸ್ತ್ರದ ಉಪನ್ಯಾಸಕಿ ಡಾ.ಡಿ.ಎಸ್.ದೀಪಾ ದೇವರಾಜು ಅರಸು ರವರ ಜೀವನ ಹಾಗೂ ಅವರು ನಡೆದು ಬಂದ ದಾರಿಯ ಬಗ್ಗೆ ಮಾತನಾಡಿ ಮಾಜಿ ಮುಖ್ಯಮಂತ್ರಿ ದಿವಾಂಗತ ಡಿ.ದೇವರಾಜ ಅರಸು ರವರು ಗ್ರಾಮೀಣ ಭಾಗದ ಬಡ ಕೃಷಿ ಕುಟುಂಬದಿಂದ ಬಂದು ಪದವಿ ಪಡೆದಿದ್ದ ಅವರು ಹಿಂದುಳಿದ ವರ್ಗಗಳ ನಾಯಕರಾಗಿ ನಂತರ ರಾಜಕೀಯ ಪ್ರವೇಶ ಮಾಡಿದ ಕೇವಲ ರಾಜಕಾರಣಿಯಾಗಿರದೆ ಹಿಂದುಳಿದ ವರ್ಗಗಳ ದಲಿತರ ಹಾಗೂ ಬಡವರು ಸೇರಿದಂತೆ ಎಲ್ಲಾ ವರ್ಗಗಳ ಪರಿರ್ವನೆಯ ಹರಿಕಾರ ಹಾಗೂ ದಾರ್ಶನಿಕರಾಗಿದ್ದರು.

  ಮುಖ್ಯಮಂತ್ರಿಯಾದ ಅರಸು ರವರು ತಾವಷ್ಟೇ ಅಧಿಕಾರ ಅನುಭವಿಸದೆ ಸಮಾಜದ ಕಟ್ಟ ಕಡೆಯ ಜನರಿಗೂ ಆಧಿಕಾರದ ಅವಕಾಸವನ್ನು ಕಲ್ಪಿಸಿದರು. ಮಾಜಿ ಪ್ರಧಾನಮಂತ್ರಿ ಇಂದಿರಾ ಗಾಂಧಿಯವರ ಸಮಾನಕ್ಕೆ ರಾಷ್ಟ್ರ ರಾಜಕಾರಣದಲ್ಲಿ ಕರ್ನಾಟಕದ ಕೀರ್ತಿಪತಾಕೆ ಹಾರಿಸಿ ಜಾತಿ ತರತಮ್ಯದಿಂದ ಆರ್ಥಿಕ ಅಸಮಾನತೆಯಿಂದ ಇದ್ದೂ ಇಲ್ಲದಂತೆದ್ದ ಹಿಂದುಳಿದ ವರ್ಗಗಳನ್ನು ಸಮಾಜದ ಮುಖ್ಯವಾಹಿನಿಗೆ ತಂದ ಮಹಾ ದಾರ್ಶಧನಿಕ ಎಂದು ತಿಳಿಸಿದರು.

  ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಚಿಕ್ಕರಂಗಯ್ಯ ಮಾತನಾಡಿ ದೇವರಾಜ ಅರಸುರವರು ತಮ್ಮ ವೈಯಕ್ತಿಕ ಬದುಕಿನಲ್ಲಿ ಹೇಗಿದ್ದರು ಎನ್ನುವುದಕ್ಕಿಂತಲೂ ಅವರು ಸಮಜದಲ್ಲಿ ಎಲ್ಲಾ ವರ್ಗಗಳ ಏಳಿಗೆಗಾಗಿ ಶ್ರಮಿಸಿದ ಅವರ ರಾಜಕೀಯ ಬದುಕು ಆದರ್ಶಪ್ರಾಯವಾಗಿ ಕಾಣಿಸುತ್ತದೆ ಎಂದಿನ ಪ್ರತಿಯೊಬ್ಬ ರಾಜಕಾರಣಿಯೂ ಅವರ ಆದರ್ಶ ಮಹತ್ವಪೂರ್ಣ ನೀತಿಗಳು ಕಲಿಯ ಬೇಕಾಗಿದೆ ಎಂದು ತಿಳಿಸಿದರು.

  ಕಾರ್ಯಕ್ರಮದಲ್ಲಿ ದೇವರಾಜು ಅರಸು ವಿದ್ಯಾರ್ಥಿನಿಲಯಗಳಲ್ಲಿ ವಿದ್ಯಾಭ್ಯಾಸ ಮಾಡಿ ಎಸ್.ಎಸ್.ಎಲ್.ಸಿ. ಮತ್ತು ಪಿಯು ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು ವೇದಿಕೆಯಲ್ಲಿ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಅಪೂರ್ವ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅನಂತರಾಜು, ಪ.ಪಂ.ಮುಖ್ಯಾಧಿಕಾರಿ ಉಮೇಶ್, ಬೆಸ್ಕಾಂ ಎಇಇ ಪ್ರಸ್ನನಕುಮಾರ್, ಕೃಷಿ ಸಕಾಯಕ ನಿದೇರ್ಶಕ ರುದ್ರಪ್ಪ, ಕ್ಷೇತ್ರಶಿಕ್ಷಾಣಧಿಕಾರಿ ಕಛೇರಿಯ ರುದ್ರಪ್ಪ, ಸಮಾಜ ಕಲ್ಯಾಣ ಇಲಾಖೆಯ ಮಂಗಳಮ್ಮ, ರವಿಕುಮಾರ್, ಅನಿತಾ ಲಕ್ಷ್ಮಿ ಸಿದ್ಧಗಂಗಪ್ಪ, ಶೃತಿ, ಗಂಗಮ್ಮ ಸೇರಿದಂತೆ ಇನ್ನಿತರರು ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Recent Articles

spot_img

Related Stories

Share via
Copy link