ಶಿರಸಿ:
ಆ.29ರಂದು ಮಾಜಿ ಮುಖ್ಯಂತ್ರಿ ದಿ.ರಾಮಕೃಷ್ಣ ಹೆಗಡೆ ಅವರ ಜನ್ಮ ಶತಮಾನೋತ್ಸವ ನಿಮಿತ್ತ ನಗರದ ಯಲ್ಲಾಪುರ ವೃತ್ತದಲ್ಲಿರುವ ರಾಮಕೃಷ್ಣ ಹೆಗಡೆ ಅವರ ಪ್ರತಿಮೆಯ ಬಳಿ ಅವರ ಅಭಿಮಾನಿ ಬಳಗದ ವತಿಯಿಂದ ಶುಕ್ರವಾರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು .ಶಾಸಕ ಆರ್ ವಿ ದೇಶಪಾಂಡೆ ಅವರು ರಾಮಕೃಷ್ಣ ಹೆಗಡೆ ಅವರ ಪ್ರತಿಮೆಗೆ ಮಾಲಾರ್ಪಣೆ ಸಲ್ಲಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ವೆಂಕಟೇಶ ಹೆಗಡೆ ಹೊಸಬಾಳೆ ,ಕೆಪಿಸಿಸಿ ಸದಸ್ಯ ದೀಪಕ್ ಹೆಗಡೆ ದೊಡ್ಡೂರು, ಜಿಲ್ಲಾ ಗ್ಯಾರಂಟಿ ಯೋಜನೆಯ ಅಧ್ಯಕ್ಷೆ ಸತೀಶ ನಾಯ್ಕ, ಜ್ಯೋತಿ ಪಾಟೀಲ, ಗೀತಾ ಶೆಟ್ಟಿ, ಗಣೇಶ ದಾವಣಗೆರೆ ಮತ್ತು ಅವರ ಅಭಿಮಾನಿ ಬಳಗ ಮುಂತಾದವರು ಉಪಸ್ಥಿತರಿದ್ದರು.








