ಷರತ್ತು ಉಲ್ಲಂಘನೆ ; ಅಭಿಮಾನ್ ಸ್ಟುಡಿಯೋ ಭೂಮಿ ಮರು ವಶಕ್ಕೆ ಸಚಿವರ ಸೂಚನೆ

ಬೆಂಗಳೂರು: 

    ಷರತ್ತು ಉಲ್ಲಂಘನೆ ಮಾಡಿದ ಹಿನ್ನೆಲೆಯಲ್ಲಿ ಅಭಿಮಾನ್ ಸ್ಟುಡಿಯೋ  ಭೂಮಿ ಮರು ವಶಕ್ಕೆ ಸೂಚನೆ ನೀಡಲಾಗಿದೆ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಭಿಮಾನ್ ಸ್ಟುಡಿಯೋಗೆ ಕೆಂಗೇರಿ ಹೋಬಳಿ ಸರ್ವೆ ನಂ.26ರಲ್ಲಿ 20 ಎಕರೆ ಜಮೀನು ಮಂಜೂರು ಮಾಡಲಾಗಿತ್ತು. 1970ರಲ್ಲಿ ಕೆಲವು ಷರತ್ತುಗಳನ್ನು ಹಾಕಿ 6 ಸಾವಿರಕ್ಕೆ 20 ಎಕರೆ ಜಮೀನು ನೀಡಲಾಗಿತ್ತು ಎಂದು ಹೇಳಿದರು.

   ಭೂಮಿಯನ್ನು ಅಭಿಮಾನ್ ಸ್ಟುಡಿಯೋ ಕೆಲಸಕ್ಕಾಗಿ ಬಳಕೆ ಮಾಡಬೇಕೆಂಬ ಷರತ್ತು ವಿಧಿಸಲಾಗಿತ್ತು. ಆರ್ಥಿಕ ಸಮಸ್ಯೆ ಕಾರಣ ನೀಡಿ ಮಾರಾಟಕ್ಕೆ ಅವಕಾಶ ಕೇಳಿದ್ದರು. 10 ಎಕರೆ ಜಮೀನು ಮಾರಾಟಕ್ಕೆ ಅವಕಾಶ ಕೇಳಿದ್ದರು. ಆದರೇ ಎಲ್ಲಾ ಷರತ್ತುಗಳನ್ನು ಉಲ್ಲಂಘನೆ ಮಾಡಿದ್ದಾರೆ. 14.37 ಕೋಟಿಗೆ 1 ಎಕರೆ ಜಮೀನು ಮಾರಾಟಕ್ಕೆ ಮುಂದಾಗಿದ್ದಾರೆ. ಷರತ್ತು ಉಲ್ಲಂಘನೆ ಆಗಿದ್ದರಿಂದ ಭೂಮಿ ಮರು ವಶಕ್ಕೆ ಸೂಚನೆ ನೀಡಲಾಗಿದೆ ಎಂದರು.

   ಸ್ಟುಡಿಯೋ ಜಾಗವನ್ನು ಕಂದಾಯ ಇಲಾಖೆಯವರು ವಶಕ್ಕೆ ಪಡೆದು, ಅರಣ್ಯ ಇಲಾಖೆಗೆ ಹಸ್ತಾಂತರ ಮಾಡಬೇಕು ಎಂದು ಪ್ರಸ್ತಾವನೆ ಕಳುಹಿಸಿದ್ದೇವೆ. ಕಂದಾಯ ಇಲಾಖೆಯಿಂದ ಜಾಗ ವಶಕ್ಕೆ ಪಡೆಯುವ ಕೆಲಸ ನಡೆಯುತ್ತಿದೆ. ನಂತರ ಆ ಭೂಮಿಯಲ್ಲಿ ಟ್ರೀ ಪಾರ್ಕ್‌ ಮಾಡುವ ಉದ್ದೇಶವಿದೆ ಎಂದು ಸಚಿವರು ಹೇಳಿದರು.

   ಕೋರ್ಟ್‌ನಲ್ಲಿ ಕೂಡ ಅಭಿಮಾನ್ ಸ್ಟುಡಿಯೋ ಜಾಗದ ವಿಚಾರವಿದೆ. ವಿಷ್ಣು ಸೇನಾ ಸಮಿತಿ ಅಧ್ಯಕ್ಷರು ಸ್ಮಾರಕ ನಿರ್ಮಾಣಕ್ಕೆ ಜಾಗ ಕೇಳಿದ್ದಾರೆ. ಈ ವಿಚಾರವನ್ನು ಸಿಎಂ ಸಿದ್ಧರಾಮಯ್ಯ ಬಳಿ ಚರ್ಚೆ ಮಾಡುತ್ತೇನೆ ಎಂಬುದಾಗಿ ತಿಳಿಸಿದರು.

Recent Articles

spot_img

Related Stories

Share via
Copy link