ಭಾರತ ‘ಎ’ ತಂಡದ ನಾಯಕನಾಗಿ ಅಯ್ಯರ್ ಆಯ್ಕೆ

ನವದೆಹಲಿ:

     ಭಾರತ ತಂಡದ ಬ್ಯಾಟ್ಸ್‌ಮನ್ ಶ್ರೇಯಸ್ ಅಯ್ಯರ್  ಅವರನ್ನು ಆಸ್ಟ್ರೇಲಿಯಾ ‘ಎ’ ತಂಡದೆದುರಿನ ಅನಧಿಕೃತ ಟೆಸ್ಟ್‌ ಪಂದ್ಯಗಳಿಗೆ ಭಾರತ ‘ಎ’ ತಂಡದ ನಾಯಕರನ್ನಾಗಿ ನೇಮಿಸಲಾಗಿದೆ. ಭಾರತ ‘ಎ’ ತಂಡವು ಸೆಪ್ಟೆಂಬರ್ 16 ರಿಂದ ಲಕ್ನೋದಲ್ಲಿ ಆಸ್ಟ್ರೇಲಿಯಾ ‘ಎ’ ವಿರುದ್ಧ ಎರಡು ಬಹುದಿನಗಳ ಪಂದ್ಯಗಳನ್ನು ಆಡಲಿದೆ. ದೇಶೀಯ ಕ್ರಿಕೆಟ್ ಮತ್ತು ಐಪಿಎಲ್ ಎರಡರಲ್ಲೂ ಕಡಿಮೆ ಅವಧಿಯ ಕ್ರಿಕೆಟ್‌ನಲ್ಲಿ ಅಭೂತಪೂರ್ವ ಪ್ರದರ್ಶನ ನೀಡಿದ್ದರೂ, ಭಾರತದ ಏಷ್ಯಾ ಕಪ್ ತಂಡದಿಂದ ಅವರನ್ನು ಕೈಬಿಡಲಾಗಿತ್ತು.

    ಅಯ್ಯರ್ ತಂಡವನ್ನು ಮುನ್ನಡೆಸಲಿದ್ದು, ಭಾರತದ ಆಟಗಾರರಾದ ದೇವದತ್ ಪಡಿಕ್ಕಲ್, ನಿತೀಶ್ ಕುಮಾರ್ ರೆಡ್ಡಿ, ಪ್ರಸಿದ್ಧ್ ಕೃಷ್ಣ ಮತ್ತು ಖಲೀಲ್ ಅಹ್ಮದ್ ಅವರ ಜತೆ ಧ್ರುವೆ ಜುರೆಲ್ ಉಪನಾಯಕರಾಗಿ ಆಡಲಿದ್ದಾರೆ. ಎರಡನೇ ಬಹು-ದಿನ ಪಂದ್ಯಕ್ಕೆ ಕೆಎಲ್ ರಾಹುಲ್ ಮತ್ತು ಮೊಹಮ್ಮದ್ ಸಿರಾಜ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗುವುದು. ಕಳೆದ ಇಂಗ್ಲೆಂಡ್‌ ಟೆಸ್ಟ್‌ ಸರಣಿಗೂ ಮುನ್ನ ನಡೆದಿದ್ದ ಇಂಗ್ಲೆಂಡ್ಸ್‌ ಲಯನ್ಸ್‌ ವಿರುದ್ಧದ ಅನಧಿಕೃತ ಟೆಸ್ಟ್‌ ಪಂದ್ಯಗಳಿಗೆ ಅಭಿಮನ್ಯು ಈಶ್ವರನ್ ನಾಯಕನಾಗಿದ್ದರು.

ಭಾರತ ಎ ತಂಡ

   ಶ್ರೇಯಸ್ ಅಯ್ಯರ್ (ನಾಯಕ), ಅಭಿಮನ್ಯು ಈಶ್ವರನ್, ಎನ್ ಜಗದೀಸನ್ (ವಿ.ಕೀ.), ಸಾಯಿ ಸುದರ್ಶನ್, ಧ್ರುವ್ ಜುರೆಲ್ (ಉಪನಾಯಕ), ದೇವದತ್ ಪಡಿಕ್ಕಲ್, ಹರ್ಷ್ ದುಬೆ, ಆಯುಷ್ ಬದೋನಿ, ನಿತೀಶ್ ಕುಮಾರ್ ರೆಡ್ಡಿ, ತನುಷ್ ಕೋಟ್ಯಾನ್, ಪ್ರಸಿದ್ಧ್ ಕೃಷ್ಣ, ಗುರ್ನೂರ್ ಬ್ರಾರ್, ಖಲೀಲ್ ಅಹ್ಮದ್, ಮಾನವ್ ಸುತಾರ್, ಯಶ್ ಠಾಕೂರ್.

Recent Articles

spot_img

Related Stories

Share via
Copy link