ಪ್ರಾಧ್ಯಾಪಕರಿಗೆ ಚಾಕುವಿನಿಂದ ಇರಿದ ಎಂಟೆಕ್ ವಿದ್ಯಾರ್ಥಿ

ನುಜಿವಿಡು

     ಪ್ರಾಯೋಗಿಕ ಪರೀಕ್ಷೆಗಳಿಗೆ ಹಾಜರಾಗಲು ಅನುಮತಿ ನಿರಾಕರಿಸಿದ ನಂತರ ಐಐಐಟಿ ನುಜ್ವಿಡ್‌ನ ಎಂಟೆಕ್ ಪ್ರಥಮ ವರ್ಷದ ವಿದ್ಯಾರ್ಥಿಯೊಬ್ಬ ಪ್ರಾಧ್ಯಾಪಕರ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ.ಸೋಮವಾರ ಈ ಘಟನೆ ನಡೆದಿದ್ದು, ವಿನಯ್ ಎಂದು ಗುರುತಿಸಲಾದ ವಿದ್ಯಾರ್ಥಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿದ್ದರಿಂದ ತರಗತಿಗಳಿಗೆ ಗೈರಾಗಿದ್ದನು. ಹೀಗಾಗಿ, ಕೇವಲ ಶೇ 25ರಷ್ಟು ಹಾಜರಾತಿ ಮಾತ್ರ ಹೊಂದಿದ್ದ ಎಂದು ಅಧಿಕಾರಿ ತಿಳಿಸಿದ್ದಾರೆ.

    ‘ಪ್ರಾಯೋಗಿಕ ಪರೀಕ್ಷೆಗಳಿಗೆ ಪ್ರವೇಶ ನಿರಾಕರಿಸಿದ ನಂತರ ಐಐಐಟಿ ನುಜ್ವಿಡ್‌ನ ಪ್ರಥಮ ವರ್ಷದ ಎಂಟೆಕ್ ವಿದ್ಯಾರ್ಥಿಯೊಬ್ಬ ಸಾರಿಗೆ ವಿಭಾಗದ ಪ್ರಾಧ್ಯಾಪಕರೊಬ್ಬರಿಗೆ ಕ್ಯಾಂಪಸ್‌ನೊಳಗೆ ಇರಿದಿದ್ದಾನೆ’ ಎಂದು ಡಿಎಸ್‌ಪಿ ಕೆವಿವಿಎನ್‌ವಿ ಪ್ರಸಾದ್ ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.

    ಕ್ಯಾಂಪಸ್‌ನಲ್ಲಿರುವ ಹಾಸ್ಟೆಲ್‌ನಲ್ಲಿ ತಂಗಿದ್ದ ವಿನಯ್ ಎರಡು ಚಾಕುಗಳನ್ನು ಹಿಡಿದುಕೊಂಡು ಪ್ರೊಫೆಸರ್ ರಾಜು ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಅವರು ಹೇಳಿದರು. ಗಾಯಗೊಂಡ ಪ್ರಾಧ್ಯಾಪಕರನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು, ವಿನಯ್‌ನನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ನಂತರ ವಿದ್ಯಾರ್ಥಿಯನ್ನು ಬಂಧಿಸಿ, ರಿಮಾಂಡ್ ಮಾಡಲಾಗಿದೆ ಎಂದು ಡಿಎಸ್ಪಿ ಹೇಳಿದರು.

Recent Articles

spot_img

Related Stories

Share via
Copy link