ಕಠ್ಮಂಡು:
ನೇಪಾಳದ ವಿದೇಶಾಂಗ ಸಚಿವ ಮತ್ತು ನಾಲ್ಕು ಬಾರಿ ಪ್ರಧಾನಿಯಾಗಿದ್ದ ಶೇರ್ ಬಹದ್ದೂರ್ ದೇವುಬಾ ಅವರ ಪತ್ನಿ ಡಾ. ಅರ್ಜು ರಾಣಾ ದೇವುಬಾ ಅವರ ಮೇಲೆ ಮಂಗಳವಾರ ಕಠ್ಮಂಡುವಿನಲ್ಲಿ ಜೆನ್ ಝಿಗಳು ಹಿಂಸಾತ್ಮಕ ಗುಂಪೊಂದು ದಾಳಿ ನಡೆಸಿ ಕ್ರೂರವಾಗಿ ಹಲ್ಲೆ ನಡೆಸಿತು. ಈ ದಾಳಿಯ ವಿಡಿಯೋ ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಪ್ರತಿಭಟನಾಕಾರರು ಸಚಿವರ ಮನೆಗೆ ಬಲವಂತವಾಗಿ ನುಗ್ಗಿದ ನಂತರ ಅವರನ್ನು ಒದೆಯುವುದು, ಹೊಡೆಯುವುದು ಮತ್ತು ಹಲ್ಲೆ ನಡೆಸುವುದನ್ನು ವಿಡಿಯೋದಲ್ಲಿ ಕಾಣಬಹುದು.
ಪ್ರತಿಭಟನಾಕಾರರ ಮತ್ತೊಂದು ಗುಂಪು ಅವರ ಮೇಲೆ ಹಲ್ಲೆ ನಡೆಸುತ್ತಿದೆ. ಅವರು ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಆದರೆ ಭ್ರಷ್ಟಾಚಾರ, ಸ್ವಜನಪಕ್ಷಪಾತ ಮತ್ತು ಇತ್ತೀಚಿನ ಸಾಮಾಜಿಕ ಮಾಧ್ಯಮ ನಿಷೇಧದ ವಿರುದ್ಧ ನೇಪಾಳದಲ್ಲಿ ಪ್ರತಿಭಟನೆ ಭುಗಿಲೆದ್ದಿದೆ. ನೇಪಾಳ ರಾಜಧಾನಿ ಕಠ್ಮಂಡುವಿನ ಡಲ್ಲು ಪ್ರದೇಶದಲ್ಲಿರುವ ಜಲನಾಥ್ ಖನಾಲ್ ಮನೆಗೆ ಮಂಗಳವಾರ (ಸೆಪ್ಟೆಂಬರ್ 9) ಪ್ರತಿಭಟನಾಕಾರರು ಮುತ್ತಿಗೆ ಹಾಕಿ ಬೆಂಕಿ ಹಚ್ಚಿದ್ದರು. ಗಾಯಗೊಂಡ ರಾಜಲಕ್ಷ್ಮೀ ಚಿತ್ರಾಕರ್ ಅವರನ್ನು ಕೂಡಲೇ ಕೀರ್ತಿಪುರ ಬರ್ನ್ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿಧನರಾದರು ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಒಲಿ ಸರ್ಕಾರದ ವಿತ್ತ ಸಚಿವ ಬಿಷ್ಣು ಪ್ರಸಾದ್ ಪೌಡೆಲ್ ಅವರನ್ನು ಪ್ರತಿಭಟನಾಕಾರರು ಬೀದಿಯಲ್ಲಿ ಅಟ್ಟಾಡಿಸಿಕೊಂಡು ಹೋಗುವ ವಿಡಿಯೊ ವೈರಲ್ ಆಗಿದೆ. ಅವರನ್ನು ಕಿಕ್ ಮಾಡುವ, ಎಳೆದಾಡುವ ದೃಶ್ಯ ಇಂಟರ್‌ನೆಟ್‌ನಲ್ಲಿ ಹರಿದಾಡುತ್ತಿದೆ. ಈಗಾಗಲೇ ಹಿಂಸಾತ್ಮಕ ಪ್ರತಿಭಟನೆಗೆ 21 ಮಂದಿ ಅಸುನೀಗಿದ್ದಾರೆ. ನೇಪಾಳದ ಮಾಜಿ ಪ್ರಧಾನಿಗಳಾದ ಪುಷ್ಪ ಕಮಲ್ ದಾಹಲ್ ಮತ್ತು ಶೇರ್ ಬಹಾದ್ದೂರ್ ದೌಬ, ಸಚಿವ ದೀಪಕ್ ಖದ್ಕ ಅವರ ನಿವಾಸವನ್ನೂ ಪ್ರತಿಭಟನಾಕಾರರು ಹಾನಿಗೊಳಿಸಿದ್ದಾರೆ. ಜತೆಗೆ ನೇಪಾಳ ಸಂಸತ್ತಿನ ಕಟ್ಟಡಕ್ಕೂ ಬೆಂಕಿ ಹಚ್ಚಿದ್ದಾರೆ.
ನೇಪಾಳದಲ್ಲಿ ವ್ಯಾಪಕವಾಗಿ ಬಳಸಲಾಗುವ ಸುಮಾರು 26ಕ್ಕೂ ಅಧಿಕ ಸೋಶಿಯಲ್ ಮೀಡಿಯಾಗಳ ಕಂಪನಿಗಳಿಗೆ ಅಧಿಕೃತವಾಗಿ ತಮ್ಮ ಕಂಪನಿಗಳನ್ನು ನೋಂದಾಯಿಸಲು ಪದೇ ಪದೆ ನೋಟಿಸ್ ನೀಡಲಾಗುತ್ತಿದ್ದರೂ ನೋಂದಾಯಿಸಲು ವಿಫಲವಾದ ಕಂಪನಿಗಳನ್ನು ಕಳೆದ ವಾರದಿಂದ ನಿರ್ಬಂಧಿಸಲಾಗಿದೆ.
