ಎಬಿವಿಪಿ ಕಾರ್ಯಕ್ರಮದಲ್ಲಿ ಭಾಗವಹಿಸಿದರಾ ಗೃಹ ಸಚಿವ? ಪರಮೇಶ್ವರ್‌ ಹೇಳಿದ್ದೇನು?

ಬೆಂಗಳೂರು:

   ತುಮಕೂರಿನಲ್ಲಿ  ಎಬಿವಿಪಿ ಕಾರ್ಯಕ್ರಮದಲ್ಲಿ ಗೃಹ ಸಚಿವ ಡಾ. ಜಿ ಪರಮೇಶ್ವರ್  ಭಾಗಿಯಾಗಿದ್ದಾರೆ ಎಂಬ ವರದಿಗಳ ಬಗ್ಗೆ ಖುದ್ದು ಸಚಿವರೇ ಸ್ಪಷ್ಟನೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ನಾನು ಯಾವುದೇ ಎಬಿವಿಪಿ ಕಾರ್ಯಕ್ರಮದಲ್ಲಿ ಭಾಗಿಯಾಗಿಲ್ಲ. ನಾನು ಬರುವ ದಾರಿಯಲ್ಲಿ ರಾಣಿ ಅಬ್ಬಕ್ಕ ಮೆರವಣಿಗೆ ಬರುತ್ತಿತ್ತು. ಸ್ಥಳೀಯ ಶಾಸಕ ಷಡಕ್ಷರಿ ಹಾಗೂ ನಾನು ಒಟ್ಟಿಗೆ ಇದ್ದೆವು. ಅವರು ಕರೆದು ಹೂವು ಹಾಕಿ ಅಂದರು. ರಾಣಿ ಅಬ್ಬಕ್ಕ ಮೆರವಣಿಗೆ ಆದ್ದರಿಂದ ಹೂವು ಹಾಕಿದೆ ಅಷ್ಟೆ ಎಂದರು.

     ನಾನು ಯಾವುದೇ ಎಬಿವಿಪಿ ಕಾರ್ಯಕ್ರಮದಲ್ಲಿ ಭಾಗಿಯಾಗಿಲ್ಲ. ಇದರ ಮೇಲೆ ಯಾರಾದರೂ ವಿವಾದ ಮಾಡಿದರೆ ಮಾಡಿಕೊಳ್ಳಲಿ, ನನಗೇನು ತೊಂದರೆ ಇಲ್ಲ. ನಾನು ಕಾಂಗ್ರೆಸ್ಸಿಗ, ಕಾಂಗ್ರೆಸ್ಸಿಗನಾಗಿಯೇ ನಾನು ಸಾಯುತ್ತೇನೆ. ನಮಗೂ ರಾಜಕೀಯ ವಿರೋಧಿಗಳು ಇರುತ್ತಾರೆ. ಅದು ಪಕ್ಷದ ಒಳಗೂ ಇರಬಹುದು, ಪಕ್ಷದ ಹೊರಗೂ ಇರಬಹುದು. ಪರಮೇಶ್ವರ್ ಏನು ಎಂಬುದು ಇಡೀ ರಾಜ್ಯದ ಜನರಿಗೆ ಗೊತ್ತಿದೆ. 35 ವರ್ಷಗಳಿಂದ ನನ್ನ ರಾಜಕೀಯ ಏನು ಎಂಬುದು ಗೊತ್ತಿದೆ. ಅದನ್ನು ಪದೇಪದೆ ಸಾಬೀತು ಮಾಡಬೇಕಾಗಿಲ್ಲ ಎಂದು ಪರಮೇಶ್ವರ್ ಹೇಳಿದರು.

Recent Articles

spot_img

Related Stories

Share via
Copy link