ನವರಾತ್ರಿ ಸಂಪೂರ್ಣ ಸ್ವದೇಶಿಮಯವಾಗಿರಲಿ : ದೇಶವಾಸಿಗಳಿಗೆ ಮೋದಿ ಕರೆ

ನವದೆಹಲಿ :

    ಪ್ರಧಾನಿ ನರೇಂದ್ರ ಮೋದಿ ಅವರು ನವರಾತ್ರಿ ಸಂದೇಶವಾಗಿ ದೇಶದ ಜನರಿಗೆ ಸ್ವದೇಶೀ ವಸ್ತುಗಳನ್ನು ಖರೀದಿಸುವಂತೆ ಕರೆ ನೀಡಿದ್ದಾರೆ. ಭಾನುವಾರ ದೇಶವನ್ನುದ್ದೇಶಿಸಿ ಮಾತನಾಡುವಾಗ ಸ್ವದೇಶೀ ವಸ್ತುಗಳನ್ನು ಜನರು ಹೆಮ್ಮೆಯಿಂದ ಖರೀದಿಸಬೇಕು ಮತ್ತು ಮಾರಾಟ ಮಾಡಬೇಕು ಎಂದು ಹೇಳಿದ್ದಾರೆ.

   ನಮ್ಮ ಎಂಎಸ್​ಎಂಇಗಳು ಭಾರತವನ್ನು ಸ್ವಾವಲಂಬನೆಯ ಹಾದಿಯಲ್ಲಿ ಕರೆದೊಯ್ಯುವ ಗುರುತರ ಜವಾಬ್ದಾರಿ ಹೊಂದಿವೆ ಎಂದು ನರೇಂದ್ರ ಮೋದಿ ಹೇಳಿದ್ದಾರೆ. ಇಂದು ನವರಾತ್ರಿಗೆ ಶುಭ ಕೋರಿದ ಮೋದಿ ಜಿಎಸ್‌ಟಿ ಉಳಿತಾಯ ಉತ್ಸವದ ಜೊತೆಗೆ ಈ ವರ್ಷದ ನವರಾತ್ರಿ ವಿಶೇಷ ಮಹತ್ವವನ್ನು ಹೊಂದಿದೆ ಎಂದು ಹೇಳಿದ್ದಾರೆ.

   ಹಬ್ಬಗಳು ನಮ್ಮ ಸಂಸ್ಕೃತಿಯನ್ನು ಉತ್ತೇಜಿಸುವುದರ ಜೊತೆಗೆ ಸ್ವದೇಶಿ ಉತ್ಪನ್ನಗಳ ಮಾರಾಟ ಹೆಚ್ಚಾಗುತ್ತದೆ. ಅಭಿವೃದ್ಧಿ ಹೊಂದಿದ ಮತ್ತು ಸ್ವಾವಲಂಬಿ ಭಾರತದ ದೃಷ್ಟಿಕೋನಕ್ಕೆ ನಾಗರಿಕರು ಸಾಮೂಹಿಕವಾಗಿ ಕೊಡುಗೆ ನೀಡಬೇಕೆಂದು ಪ್ರಧಾನಿ ಒತ್ತಾಯಿಸಿದರು. ಹಬ್ಬದ ಸಂದರ್ಭವನ್ನು ವಿಶಾಲವಾದ ರಾಷ್ಟ್ರೀಯ ಗುರಿಯೊಂದಿಗೆ ಜೋಡಿಸಿದ ಅವರು, ಏಕತೆ ಮತ್ತು ಹಂಚಿಕೆಯ ಸಂಕಲ್ಪದ ಮೂಲಕ ದೇಶದ ಆರ್ಥಿಕ ಮತ್ತು ಸಾಮಾಜಿಕ ರಚನೆಯನ್ನು ಬಲಪಡಿಸುವತ್ತ ಜನರು ತಮ್ಮ ಪ್ರಯತ್ನಗಳನ್ನು ಹರಿಸಬೇಕೆಂದು ಕರೆ ನೀಡಿದರು.

   ಇವತ್ತು ಗೊತ್ತಿದ್ದೋ ಗೊತ್ತಿಲ್ಲದೆಯೋ ಹಲವು ವಿದೇಶೀ ಉತ್ಪನ್ನಗಳು ನಮ್ಮ ನಿತ್ಯ ಜೀವನದ ಭಾಗಗಳಾಗಿವೆ. ಜನರು ಸ್ಥಳೀಯ ಉದ್ದಿಮೆಗಳನ್ನು ಬೆಂಬಲಿಸಬೇಕು. ಮೇಡ್ ಇನ್ ಇಂಡಿಯಾ ಉತ್ಪನ್ನಗಳ ಹಿಂದೆ ದೇಶದ ಯುವಜನರ ಶ್ರಮ ಇರುತ್ತದೆ. ಜನರು ಈ ಉತ್ಪನ್ನಗಳನ್ನು ಖರೀದಿಸಬೇಕು. ಪ್ರತಿಯೊಂದು ಮನೆಯೂ ಸ್ವದೇಶೀಯತೆಗೆ ಸಂಕೇತವಾಗಿರಬೇಕು. ಪ್ರತಿಯೊಂದು ಅಂಗಡಿಯೂ ಸ್ವದೇಶೀ ಎಂದು ಗರ್ವದಿಂದ ಹೇಳಬೇಕು’ ಎಂದು ಪ್ರಧಾನಿಗಳು ಹೇಳಿದ್ದಾರೆ. 

  ‘ಸ್ವಾವಲಂಬನೆಯ ಮಂತ್ರವು ದೇಶದ ಸ್ವಾತಂತ್ರ್ಯವನ್ನು ಹೇಗೆ ಬಲಪಡಿಸಿದೆಯೋ, ಅದೇ ರೀತಿ ಸ್ವಾವಲಂಬನೆಯ ಮಂತ್ರದಿಂದಲೇ ದೇಶದ ಅಭಿವೃದ್ಧಿಗೆ ಪುಷ್ಟಿ ಸಿಗುತ್ತದೆ’ ಎಂದು ಮೋದಿ ಅಭಿಪ್ರಾಯ ಪಟ್ಟಿದ್ದಾರೆ.

Recent Articles

spot_img

Related Stories

Share via
Copy link