ವೆಸ್ಟ್ ಇಂಡೀಸ್ ಟೆಸ್ಟ್ ಸರಣಿಗೆ ಲಭ್ಯವಿರುವುದಾಗಿ ಬಿಸಿಸಿಐಗೆ ಮಾಹಿತಿ ನೀಡಿದ ಬುಮ್ರಾ

ನವದೆಹಲಿ:

    ಬಹುನಿರೀಕ್ಷಿತ ವೆಸ್ಟ್‌ ಇಂಡೀಸ್‌ ವಿರುದ್ಧದ ತವರಿನ ಟೆಸ್ಟ್‌  ಸರಣಿಗೆ ಭಾರತ ತಂಡ ಇಂದು ಪ್ರಕಟಗೊಳ್ಳುವ ಸಾಧ್ಯತೆ ಇದೆ. ಇದಕ್ಕೂ ಮುನ್ನವೇ ಭಾರತದ ವೇಗಿ ಜಸ್‌ಪ್ರೀತ್‌ ಬುಮ್ರಾ  ಅವರು ಈ ಸರಣಿಗೆ ಲಭ್ಯವಿರುವುದಾಗಿ ಬಿಸಿಸಿಐಗೆ ತಿಳಿಸಿದ್ದಾರೆ ಎಂದು ವರದಿಯಾಗಿದೆ. ಪ್ರಸ್ತುತ ಯುಎಇಯಲ್ಲಿ ಭಾರತದ ಏಷ್ಯಾ ಕಪ್ ತಂಡದ ಭಾಗವಾಗಿರುವ ಬುಮ್ರಾ ಅವರಿಗೆ ಕಾರ್ಯದೊತ್ತಡ ಕಡಿಮೆ ಮಾಡುವ ನಿಟ್ಟಿನಲ್ಲಿ ವಿಂಡೀಸ್‌ ಸರಣಿಗೆ ವಿಶ್ರಾಂತಿ ನೀಡಲು ಆಯ್ಕೆ ಸಮಿತಿ ಚಿಂತಿಸಿತ್ತು. ಆದರೆ ಬುಮ್ರಾ ಸರಣಿ ಆಡುವುದಾಗಿ ತಿಳಿಸಿದ್ದಾರೆ ಎನ್ನಲಾಗಿದೆ.

   ಈ ವರ್ಷದ ಆರಂಭದಲ್ಲಿ, ಬಾರ್ಡರ್-ಗವಾಸ್ಕರ್ ಟ್ರೋಫಿಯ ಐದನೇ ಮತ್ತು ಅಂತಿಮ ಟೆಸ್ಟ್ ಪಂದ್ಯದ ಮಧ್ಯದಲ್ಲಿ ಬುಮ್ರಾ ಬೆನ್ನಿಗೆ ಗಾಯವಾದ ನಂತರ, ಭಾರತೀಯ ತಂಡದ ಆಡಳಿತವು ತಮ್ಮ ವೇಗದ ಬೌಲರ್‌ಗಳ ಬಗ್ಗೆ ಜಾಗರೂಕರಾಗಿದ್ದು, ಇಂಗ್ಲೆಂಡ್ ಪ್ರವಾಸದ ಐದು ಟೆಸ್ಟ್‌ಗಳಲ್ಲಿ ಮೂರರಲ್ಲಿ ಮಾತ್ರ ಆಡಿಸಿತ್ತು. ಅಲ್ಲದೆ ಏಷ್ಯಾಕಪ್‌ನಲ್ಲಿಯೂ ಒಂದು ಪಂದ್ಯಕ್ಕೆ ವಿಶ್ರಾಂತಿ ನೀಡಲಾಗಿತ್ತು.

   ಬುಧವಾರ  ನಡೆಯುವ ಬಾಂಗ್ಲಾದೇಶ ವಿರುದ್ಧದ 2025 ರ ಏಷ್ಯಾ ಕಪ್‌ನ ಸೂಪರ್ ಫೋರ್ ಪಂದ್ಯಕ್ಕೆ ಬುಮ್ರಾಗೆ ವಿಶ್ರಾಂತಿ ನೀಡುವ ಸಾಧ್ಯತೆಯನ್ನು ಭಾರತದ ಸಹಾಯಕ ಕೋಚ್ ರಯಾನ್ ಟೆನ್ ಡೋಸ್ಚೇಟ್ ತಳ್ಳಿಹಾಕಿದಾರೆ.

  “ಬುಮ್ರಾಗೆ ವಿಶ್ರಾಂತಿ ನೀಡುವ ಸಾಧ್ಯತೆ ಕಡಿಮೆ. ಅವರು ವೆಸ್ಟ್ ಇಂಡೀಸ್ ಟೆಸ್ಟ್ ಪಂದ್ಯಗಳನ್ನು ಆಡಲು ಸಜ್ಜಾಗಿದ್ದಾರೆ. ನಮಗೆ ಪ್ರಮುಖ ಪಂದ್ಯಗಳು ಬರಲಿವೆ, ಮತ್ತು ಅವರು ಆಟವಾಡುವುದನ್ನು ಮುಂದುವರಿಸುವುದು ಮತ್ತು ಹೆಚ್ಚಿನ ಪಂದ್ಯ ಸಮಯವನ್ನು ಪಡೆಯುವುದು ಒಳ್ಳೆಯದು” ಎಂದು ಡೋಸ್ಚೇಟ್ ಸುದ್ದಿಗಾರರಿಗೆ ತಿಳಿಸಿದರು.

Recent Articles

spot_img

Related Stories

Share via
Copy link