ಚಿಂತಾಮಣಿ :
ತಾಲೂಕಿನ ಕುರಟಹಳ್ಳಿ ಸಮೀಪದ ಕಡಪ ಹೈವೇ ರಸ್ತೆಯಲ್ಲಿರುವ ಹಜರತ್ ಪೀರ್ ಸೈಯದ್ ಮೊಹಮ್ಮದ್ ಗೌಸ್-ಷಾ-ಖಾದ್ರಿರವರ ಗಂಧೋತ್ಸವ ಹಿಂದೂ ಮುಸ್ಲಿಂ ಬಾಂಧವರು ಒಟ್ಟಾಗಿ ಸೇರಿ ಸಡಗರ ಸಂಭ್ರಮದಿಂದ ಆಚರಿಸಿದರು.
ಚಿಂತಾಮಣಿ ನಗರ ವಾರ್ಡ್ ನಂಬರ್ 15ರ ಟಿಪ್ಪು ನಗರದ ಇನಾಯತ್ ಷಾ ಖಾದ್ರಿ ರವರ ಮನೆಯಿಂದ ಗಂಧವನ್ನು ಹೊತ್ತು ವಾರ್ಡಿನ ಪ್ರಮುಖ ಬೀದಿಗಳಿಂದ ಕುರಟಹಳ್ಳಿ ಗ್ರಾಮಕ್ಕೆ ಆಗಮಿಸಿ ಅಲ್ಲಿ ಗಂಧದ ಮೆರವಣಿಗೆ ನಡೆಸಿದ ನಂತರ ದರ್ಗಾಗೆ ಬಂದು ಫಕೀರರು ಹಾಗೂ ಭಕ್ತಾದಿಗಳು ಗಂಧವನ್ನು ಅರ್ಪಿಸಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಇನ್ನೂ ಇದೇ ವೇಳೆ ಗ್ರಾಮದ ಹಿರಿಯ ಮುಖಂಡರಿಗೆ ದರ್ಗಾ ಮುಖ್ಯಸ್ಥರಾದ ಆಯುಬ್ ಷಾ ಖಾದ್ರಿ ರವರಿಂದ ಶಾಲು ಹೊದಿಸಿ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಿದರು.ಗ್ರಾಮದ ಹಿರಿಯ ಮುಖಂಡರಾದ ಕೃಷ್ಣಮೂರ್ತಿ ರವರು ಈ ವೇಳೆ ಮಾತನಾಡಿ ಹಿಂದೂ ಮುಸ್ಲಿಂ ಬಾಂಧವರು ಒಟ್ಟಾಗಿ ಸೇರಿ ಯಾವುದೇ ಭೇದ ಭಾವವಿಲ್ಲದೆ ಗಂಧೋತ್ಸವ ಮಾಡುತ್ತಿರುವುದು ಸಂತೋಷದ ಸುದ್ದಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಅಯೂಬ್ ಷಾ ಖಾದ್ರಿ,ಅಲಿ ಭೈ,ಮಹಬೂಬ್ ಪಾಷಾ, ಮೊಹಮ್ಮದ್ ಯೂಸುಫ್, ಬಾಬಾ ಷಾ ಖಾದ್ರಿ, ಅಲ್ಲಾ ಬಕಾಶ್ ಖಾದ್ರಿ, ಸಂಜೆಪಲ್ಲಿ ಸೀನಪ್ಪ, ತಮ್ಮರೆಡ್ಡಿ ಗ್ರಾಮ ಪಂಚಾಯತಿ ಸದಸ್ಯರಾದ ಕೃಷ್ಣಪ್ಪ, ಆರ್ ಟಿ ಎಸ್ ಇನಾಯತ್, ಸಮೀಉಲ್ಲಾ, ಚಂದ್ ಪಾಷಾ, ಮುಬಾರಕ್ ಪಾಷಾ ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಭಕ್ತಾದಿಗಳು ಭಾಗವಹಿಸಿದ್ದರು.








