ಫ್ಲೋರಿಡಾ : ಛೇ…ಇವಳೆಂತಾ ತಾಯಿ …..!

ಫ್ಲೋರಿಡಾ:

     ತನಗಿಂತ ಸುಮಾರು ಎರಡು ಪಟ್ಟು ಚಿಕ್ಕ ವಯಸ್ಸಿನ ಮಲಮಗನ  ಜೊತೆಗೆ 35 ವರ್ಷದ ಮಹಿಳೆಯೊಬ್ಬಳು ಲೈಂಗಿಕ ಕ್ರಿಯೆ  ನಡೆಸಿ ಗಂಡನ ಕೈಯಲ್ಲಿ ಸಿಕ್ಕಿಬಿದ್ದ ಅಘಾತಕಾರಿ ಘಟನೆ ದೂರದ ನಾಡದ ಅಮೆರಿಕದಲ್ಲಿ ನಡೆದಿದೆ. ಅಮೆರಿಕದ ಫ್ಲೋರಿಡಾದಲ್ಲಿ ಈ ಅಹಿತಕರ ಘಟನೆ ನಡೆದಿದ್ದು, ಅಲೆಕ್ಸಿಸ್ ವಾನ್ ಯೇಟ್ಸ್ ಎಂಬ ವಿವಾಹಿತ ಮಹಿಳೆ ತನ್ನ ಗಂಡನ ಮೊದಲ ಹೆಂಡ್ತಿಯ ಮಗನನ್ನು ತನ್ನ ಕಾಮತೃಷೆಯನ್ನು ತೀರಿಸಿಕೊಳ್ಳಲು ಬಳಸಿಕೊಂಡಿದ್ದಾಳೆ.

    ಈ ಕುರಿತು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದ್ದು, ಪ್ಲೋರಿಡಾದಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿರುವ ಯೇಟ್ಸ್ ತನ್ನ ಹದಿನೈದು ವರ್ಷದ ಮಲಮಗನನ್ನು ಲೈಂಗಿಕ ಕ್ರಿಯೆಗೆ ಬಳಸಿಕೊಂಡಿದ್ದಾಳೆ. ಯೇಟ್ಸ್ ಮಾಡಿರುವ ಈ ಕೆಲಸ ತಾಯಿಯ ಸ್ಥಾನಕ್ಕೆ ಧಕ್ಕೆ ತರುವಂತಿದ್ದು, ಮಕ್ಕಳ ಭವಿಷ್ಯ ರೂಪಿಸಬೇಕಿದ್ದ ಅಮ್ಮನೇ ಇಂತಹ ದುಷ್ಕೃತ್ಯ ಎಸಗಿರುವುದು ಸಂಬಂಧಗಳ ಮೇಲಿನ ನಂಬಿಕೆ – ಗೌರವವನ್ನೇ ಅನುಮಾನದ ದೃಷ್ಟಿಯಲ್ಲಿ ನೋಡುವಂತೆ ಮಾಡಿದೆ.

   ಕಳೆದ ಜುಲೈನಲ್ಲಿ ಈ ಘಟನೆ ನಡೆದಿದ್ದು, ಅಲೆಕ್ಸಿಸ್ ವಾಘನ್ ಯೇಟ್ಸ್ ತನ್ನ ಇಬ್ಬರು ಚಿಕ್ಕ ಮಕ್ಕಳನ್ನು ಮಲಗಿಸಿ ನಂತರ , ಆ ದಿನ ರಾತ್ರಿ ತನ್ನ ಮಲಮಗನೊಂದಿಗೆ ಲಿವಿಂಗ್ ರೂಮಿನಲ್ಲಿ ಸಮಯ ಕಳೆಯಲು ಬಂದಿದ್ದಾಳೆ. ಈ ವೇಳೆ ಅವರಿಬ್ಬರು THC ವೇಪ್ ಎಂಬ ವಿದೇಶಿ ಅಮಲು ಪದಾರ್ಥವನ್ನು ಸೇವಿಸಿದ್ದು, ವಿಡಿಯೋ ಗೇಮಿಂಗ್ ಗಳನ್ನು ಆಡಿದ್ದಾರೆ. ತದನಂತರ ಯೇಟ್ಸ್ ತನ್ನ ಮಲಮಗನನ್ನು ತನ್ನತ್ತ ಸೆಳೆಯಲು ಕಾಮ ಪ್ರಚೋದಿತ ಚಿತ್ರಗಳನ್ನು ತೋರಿಸಲು ಮುಂದಾಗಿದ್ದು, ಹಾರರ್ ಚಲನಚಿತ್ರವನ್ನು ಆನ್ ಮಾಡಿದ್ದಾಳೆ. ಸಮಯ ಸರಿಯುತ್ತಿದ್ದಂತೆ ಅವರಿಬ್ಬರ ನಡುವೆ ದೈಹಿಕ ಚಟುವಟಿಕೆಯಲ್ಲಿ ತೊಡಗಿದ್ದಾರೆ.

   ಇದೇ ವೇಳೆ ಯೇಟ್ ಪತಿ ಅನೀರಿಕ್ಷಿತವಾಗಿ ಮನೆಗೆ ಹಿಂದಿರುಗಿದ್ದು, ತನ್ನ ಹೆಂಡತಿ ಮಗನೊಂದಿಗೆ ಅರೆಬೆತ್ತಲೆಯಾಗಿರುವುದನ್ನು ಕಂಡು ದಂಗಾಗಿದ್ದಾರೆ. ಅಲ್ಲದೇ ಅವರನ್ನು ಕಂಡು ಕೋಪಗೊಂಡಿದ್ದು, ತಕ್ಷಣವೇ ಮಗನನ್ನು ಕರೆದುಕೊಂಡು ಮನೆಯಿಂದ ಹೊರನಡೆದಿದ್ದಾರೆ. 

   ಮಲತಾಯಿಯ ವರ್ತನೆಯಿಂದ ಅಘಾತಕ್ಕೀಡಾದ ಮಗ ತನ್ನ ತಂದೆಯ ಬಳಿ ನೀನು ನನ್ನ ಜೀವನವನ್ನು ಹಾಳು ಮಾಡಿದೆ ಎಂದು ತನ್ನ ದುಖವನ್ನು ಹೊರಹಾಕಿದ್ದು, ಘಟನೆಯ ಸಂಪೂರ್ಣ ಮಾಹಿತಿಯನ್ನು ಹಂಚಿಕೊಂಡಿದ್ದಾನೆ. ನಾನು ಟಿವಿ ನೋಡುತ್ತಿದ್ದಾಗ ನನ್ನ ಸನಿಹ ಬಂದು ಕುಳಿತ ಯೇಟ್ಸ್ ನನ್ನೊಂದಿಗೆ ಅನುಚಿತವಾಗಿ ನಡೆದುಕೊಳ್ಳಲು ಶುರು ಮಾಡಿದ್ದಳು. ಅಲ್ಲದೇ ತಾನು ದೈಹಿಕ ಸಂಪರ್ಕ ಹೊಂದದೇ ಎರಡು ವಾರಗಳು ಕಳೆದಿದ್ದು, ನನ್ನ ಮನಸ್ಸು ಲೈಂಗಿಕ ಕ್ರಿಯೆಯನ್ನು ಬಯಸುತ್ತಿದೆ ಎಂದು ಯೇಟ್ಸ್ ತನ್ನನ್ನು ಪ್ರಚೋದಿಸಿದ್ದುದರ ಬಗ್ಗೆ ತನ್ನ ತಂದೆಯ ಬಳಿ ಹೇಳಿಕೊಂಡಿದ್ದಾನೆ. ಅಲ್ಲದೇ ಇದನ್ನು ನಿರಾಕಾರಿಸಿದ್ದಕ್ಕೆ ಬೆಲ್ಟ್ ನಿಂದ ಹಲ್ಲೆ ಮಾಡಿದ್ದಾಗಿಯೂ ತಿಳಿಸಿದ ಮಗ, ತನ್ನ ದುಖವನ್ನು ಹೊರಹಾಕಿದ್ದಾನೆ.

   ಇನ್ನು ಘಟನೆ ಬಳಿಕ ಸಂತ್ರಸ್ತ ಬಾಲಕನ್ನು ಆತನ ಅಜ್ಜ-ಅಜ್ಜಿಯ ಮನೆಗೆ ಬಿಟ್ಟು ಬಂದಿದ್ದು, ಇತ್ತ ಯೇಟ್ಸ್ ವಿರುದ್ದ ಪ್ರಕರಣ ದಾಖಲಾಗಿ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಅಲ್ಲದೇ ಯೇಟ್ಸ್ ನ ಪರವಾನಗಿಯನ್ನು ರದ್ದು ಮಾಡಲಾಗಿದೆ.

Recent Articles

spot_img

Related Stories

Share via
Copy link