ಹೈದರಾಬಾದ್:
ಬಾಲಾಪರಾಧಿ ಗೃಹದಲ್ಲಿ ಆರು ಬಾಲಕರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಮೇಲ್ವಿಚಾರಕನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ದಸರಾ ರಜೆ ಹಿನ್ನಲೆ ಮನೆಗೆ ಹೋಗಿದ್ದ ಬಾಲಕ ಹಿಂದಿರುಗಿ ಹೋಗಲು ಹಿಂದೇಟು ಹಾಕಿ ಹಠ ಹಿಡಿದಿದ್ದು, ಈ ಕುರಿತು ಪೋಷಕರು ಪ್ರಶ್ನಿಸಿದಾಗ ಅಸಹಜ ರೀತಿಯಲ್ಲಿ ಲೈಂಗಿಕ ದೌರ್ಜನ್ಯ ಎಸಗಿರುವುದು ಬೆಳಕಿಗೆ ಬಂದಿದೆ. ಈ ವಿಷಯವನ್ನು ಯಾರಿಗೂ ತಿಳಿಸಿದಂತೆ ಪ್ರಾಣ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದ್ದು, ಘಟನೆ ಹೆತ್ತವರ ಗಮನಕ್ಕೆ ಬಂದ ಹಿನ್ನಲೆ ಪೊಲೀಸರಿಗೆ ದೂರು ನೀಡಲಾಗಿದೆ.
ಸೈದಾಬಾದ್ನಲ್ಲಿರುವ ಬಾಲಾಪರಾಧಿ ಗೃಹದಲ್ಲಿ ಈ ದುಷ್ಕೃತ್ಯ ನಡೆದಿದ್ದು, ಅಧಿಕಾರಿಗಳು ಹಂಚಿಕೊಂಡ ಮಾಹಿತಿ ಪ್ರಕಾರ ದೌಜರ್ನ್ಯಕ್ಕೆ ಒಳಗಾದ ಸಂತ್ರಸ್ತ ಬಾಲಕ ದಸರಾ ರಜೆ ಹಿನ್ನಲೆ ಮನೆಗೆ ತೆರಳಿದ್ದು, ಅಲ್ಲಿಂದ ಬಾಲಾಪರಾಧಿ ಗೃಹಕ್ಕೆ ತೆರಳಲು ನಿರಾಕಾರಿಸಿದ್ದಾನೆ. ಬಾಲಕನ ವರ್ತನೆ ಕಂಡು ಚಿಂತೆಗೀಡಾದ ತಾಯಿ ಇದಕ್ಕೆ ಕಾರಣ ತಿಳಿದುಕೊಳ್ಳಲು ಮುಂದಾಗಿದ್ದು, ಏನಾಯಿತು ಎಂದು ಮಗನನ್ನು ಪ್ರಶ್ನಿಸಿದ್ದಾಳೆ. ಆಗ ಅಮ್ಮನ ಬಳಿ ತನಗಾದ ಲೈಂಗಿಕ ಕಿರುಕುಳದ ಬಗ್ಗೆ ಬಾಯ್ಬಿಟ್ಟಿದ್ದು, ಅಲ್ಲಿಗೆ ಪುನ ಹೋಗದಂತೆ ತಿಳಿಸಿದ್ದಾನೆ. ವಿಷಯ ತಿಳಿಯುತ್ತಿದಂತೆ ಬಾಲಕನ ತಾಯಿ ಪೊಲೀಸ್ ಠಾಣೆ ಮೇಟ್ಟಿಲೇರಿದ್ದು, ಬಾಲಾಪರಾಧಿ ಗೃಹದ ಮೇಲ್ವಿಚಾರಕನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಇನ್ನು ದೂರಿನ ಆಧಾರದ ಮೇಲೆ ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದು, ತನಿಖೆಯನ್ನು ಆರಂಭಿಸಿದ ಪೊಲೀಸರಿಗೆ ಮತ್ತೊಂದು ಆಘಾತಕಾರಿ ವಿಚಾರ ಬೆಳಕಿಗೆ ಬಂದಿದೆ. ಬಂಧಿತ ಆರೋಪಿ ಮೇಲ್ವಿಚಾರಕ ಇನ್ನೂ ಐದು ಹುಡುಗರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ತಿಳಿದುಬಂದಿದ್ದು, ಇದರ ಬಗ್ಗೆ ಪ್ರತಿಕ್ರಿಯಿಸಿದ ಸೈದಾಬಾದ್ ಪೊಲೀಸರು, “10 ವರ್ಷದ ಬಲಕನ ಮೇಲೆ 27 ವರ್ಷದ ಬಾಲಾಪರಾಧಿ ಗೃಹ ಮೇಲ್ವಿಚಾರಕನು ಹಲವಾರು ದಿನಗಳಿಂದ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ” ಎಂದು ಹೇಳಿದ್ದಾರೆ. “ಹುಡುಗ ದಸರಾ ರಜೆಗಾಗಿ ಮನೆಗೆ ಹೋಗಿದ್ದು, ನಂತರ ಬಾಲಾಪರಾಧಿ ಗೃಹಕ್ಕೆ ಹಿಂತಿರುಗಲು ಹೆದರುತ್ತಿದ್ದ. ನಂತರ ಅವನ ತಾಯಿ ಬಳಿ ಈ ವಿಷಯದ ಬಗ್ಗೆ ಹೇಳಿದ್ದು, ಸಂತ್ರಸ್ತ ಬಾಲಕನ ತಾಯಿ ನಮಗೆ ದೂರು ನೀಡಿದ್ದಾರೆ” ಎಂದು ಪೊಲೀಸರು ತಿಳಿಸಿದ್ದಾರೆ.
ಈ ಹಿಂದೆಯೂ ಇಂತಹ ಸಾಕಷ್ಟು ಘಟನೆಗಳು ನಡೆದಿದ್ದು, ಅಲ್ಲಿನ ಭದ್ರತೆ ಬಗ್ಗೆ ಸಾಕಷ್ಟು ಆರೋಪಗಳು ಕೇಳಿ ಬಂದಿದೆ. ಬಾಲಾಪರಾಧಿ ಮಕ್ಕಳ ಭವಿಷ್ಯವನ್ನು ರೂಪಿಸಬೇಕಾದ, ಮನಃ ಪರಿವರ್ತನೆಗೆ ಆದ್ಯತೆ ನೀಡಬೇಕಾದ ಸ್ಥಳದಲ್ಲಿ ಇಂತಹ ಹೇಯ ಕೃತ್ಯ ನಡೆದಿರುವುದು ಖಂಡನೀಯವಾಗಿದೆ.








