ಶಿಮ್ಲಾದಲ್ಲಿ ಪಂಚಾಯತ್ ಮುಖ್ಯಸ್ಥನಿಂದ ಬಾಲಕಿ ಮೇಲೆ ಅತ್ಯಾಚಾರ!

ಶಿಮ್ಲಾ:

    ಶಿಮ್ಲಾದಲ್ಲಿ ಮಾಟ-ಮಂತ್ರದ ನೆಪದಲ್ಲಿ 13 ವರ್ಷದ ಬಾಲಕಿಯ ಮೇಲೆ ತಾಂತ್ರಿಕ ಪಂಚಾಯತ್ ಮುಖ್ಯಸ್ಥರೊಬ್ಬರು ಅತ್ಯಾಚಾರ ಎಸಗಿದ್ದಾರೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.

   ದೂರಿನ ಪ್ರಕಾರ, ಕಿಶೋರಿ ಲಾಲ್ ಎಂದು ಗುರುತಿಸಲಾದ ಆರೋಪಿಯು, ಅಕ್ಟೋಬರ್ 15 ಮತ್ತು 17 ರಂದು ಬಾಲಕಿಯನ್ನು ತನ್ನ ಮನೆಗೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದಾನೆ.

   ಆರೋಪಿಯ ವಿರುದ್ಧ ಬಿಎನ್‌ಎಸ್ ಸೆಕ್ಷನ್ 65 ಮತ್ತು ಪೋಕ್ಸೊ ಕಾಯ್ದೆಯ ಸೆಕ್ಷನ್‌ಗಳ ಅಡಿಯಲ್ಲಿ ಅತ್ಯಾಚಾರದ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸೆಪ್ಟೆಂಬರ್ 21 ರಂದು ಸಂತ್ರಸ್ತೆ ಬಾಲಕಿ ಶಾಲೆಗೆ ಹೋಗುತ್ತಿದ್ದಾಗ ಕಿಶೋರಿ ಲಾಲ್ ಆಕೆಯನ್ನು ತಡೆದು ಆಕೆ ಧರಿಸಿದ್ದ ‘ರುದ್ರಾಕ್ಷ ಮಾಲೆ’ ಬಗ್ಗೆ ಕೇಳಿದ್ದಾನೆ. ಕಿಶೋರಿ ಲಾಲ್ ಹಾರವನ್ನು ಮುಟ್ಟಿದಾಗ ಹುಡುಗಿ ‘ಆಘಾತ’ ಅನುಭವಿಸಿದಳು ಎಂದು ದೂರಿನಲ್ಲಿ ತಿಳಿಸಲಾಗಿದೆ.

ಆರೋಪಿಯು ತನಗೆ ‘ಮಾಟ-ಮಂತ್ರ’ ಗೊತ್ತಿದ್ದು, ಆ ಹಾರವನ್ನು ಮಂತ್ರಗಳಿಂದ ಪವಿತ್ರಗೊಳಿಸಬೇಕು. ಇಲ್ಲದಿದ್ದರೆ ನಿಮ್ಮ ಕುಟುಂಬ ಸದಸ್ಯರು ಸಾಯುತ್ತಾರೆ ಎಂದು ಹೇಳಿದ್ದಾನೆ.ಬಳಿಕ ಕುತಂತ್ರದಿಂದ, ಬಾಲಕಿಯನ್ನು ತನ್ನ ಮನೆಗೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ.ಅಕ್ಟೋಬರ್ 17 ರಂದು ಮತ್ತೆ ಬಾಲಕಿಯನ್ನು ತನ್ನ ಮನೆಗೆ ಕರೆದೊಯ್ದು ಮತ್ತೆ ಅದೇ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

Recent Articles

spot_img

Related Stories

Share via
Copy link