ನವದೆಹಲಿ :
ಬಾಂಗ್ಲಾದೇಶ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್ 20 ಓವರ್ಗಳಲ್ಲಿ 165 ರನ್ ಕಲೆಹಾಕಿದ್ದರು. ಈ ಗುರಿ ಬೆನ್ನತ್ತಿದ ಬಾಂಗ್ಲಾದೇಶ್ ತಂಡವು 129 ರನ್ಗೆ 9 ವಿಕೆಟ್ ಕಳೆದುಕೊಂಡಿತು.
ಈ ಹಂತದಲ್ಲಿ ಕಣಕ್ಕಿಳಿದ ತಸ್ಕಿನ್ ಅಹ್ಮದ್ 20ನೇ ಓವರ್ನ 4ನೇ ಎಸೆತದಲ್ಲಿ ಭರ್ಜರಿ ಸಿಕ್ಸ್ ಸಿಡಿಸಿದ್ದರು. ಈ ಸಿಕ್ಸ್ ಹೊರತಾಗಿಯೂ ತಸ್ಕಿನ್ ಪೆವಿಲಿಯನ್ ಕಡೆ ಹೆಜ್ಜೆ ಹಾಕಬೇಕಾಯಿತು. ಅಂದರೆ ಬ್ಯಾಟ್ ಬೀಸುವಾಗ ತಸ್ಕಿನ್ ಅವರ ಕಾಲು ವಿಕೆಟ್ಗೆ ತಗುಲಿದೆ. ಹೀಗಾಗಿ ಅಂಪೈರ್ ಹಿಟ್ ವಿಕೆಟ್ ಎಂದು ಘೋಷಿಸಿದ್ದಾರೆ.
ಇದೀಗ ಸಿಕ್ಸ್ ಸಿಡಿಸಿ ಹಿಟ್ ವಿಕೆಟ್ ಆಗಿ ಹೊರ ನಡೆದಿರುವ ತಸ್ಕಿನ್ ಅಹ್ಮದ್ ಅವರ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಇನ್ನು ಈ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ನೀಡಿ 165 ರನ್ಗಳ ಗುರಿಯನ್ನು ಬೆನ್ನತ್ತಿದ ಬಾಂಗ್ಲಾದೇಶ್ ತಂಡವು 19.4 ಓವರ್ಗಳಲ್ಲಿ 149 ರನ್ಗಳಿಸಿ ಆಲೌಟ್ ಆಗಿದೆ. ಈ ಮೂಲಕ ವೆಸ್ಟ್ ಇಂಡೀಸ್ ತಂಡವು ಮೊದಲ ಪಂದ್ಯದಲ್ಲಿ 16 ರನ್ಗಳ ಜಯ ಸಾಧಿಸಿದೆ.








