ಮಹಾಯುತಿಯಲ್ಲಿ ಬಿರುಕು: ಶರದ್ ಪವಾರ್ ಎನ್‌ಸಿಪಿ ಜತೆ ಶಿಂಧೆ ಶಿವಸೇನೆ ಮೈತ್ರಿ!

ನಾಸಿಕ್:

    ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಯೆಯೋಲಾದಲ್ಲಿ ಆಡಳಿತಾರೂಢ ಮಹಾಯುತಿ ಮೈತ್ರಿಕೂಟ ವಿಭಜನೆಯಾಗಿದ್ದು, ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಶಿವಸೇನೆಯು ಪ್ರತಿಪಕ್ಷದ ಭಾಗವಾಗಿರುವ ಎನ್‌ಸಿಪಿ(ಎಸ್‌ಪಿ) ಜೊತೆ ಕೈಜೋಡಿಸಲು ನಿರ್ಧರಿಸಿದೆ.ಈ ಹೊಸ ಮೈತ್ರಿಯು, ಭಾರತೀಯ ಜನತಾ ಪಕ್ಷ(ಬಿಜೆಪಿ) ಮತ್ತು ಅಜಿತ್ ಪವಾರ್ ಅವರ ಎನ್‌ಸಿಪಿಯ ವಿರುದ್ಧ ಸ್ಪರ್ಧಿಸಲಿದೆ.

    ಯೆಯೋಲಾ, ಸಚಿವ ಮತ್ತು ಎನ್‌ಸಿಪಿ ನಾಯಕ ಛಗನ್ ಭುಜಬಲ್ ಅವರ ತವರು ಕ್ಷೇತ್ರವಾಗಿದೆ. ಮಹಾಯುತಿಯಲ್ಲಿ ಬಿಜೆಪಿ, ಶಿವಸೇನೆ ಮತ್ತು ಎನ್ ಸಿಪಿ ಇದ್ದರೆ, ವಿರೋಧ ಪಕ್ಷವಾದ ಮಹಾ ವಿಕಾಸ್ ಅಘಾಡಿಯಲ್ಲಿ ಉದ್ಧವ್ ಠಾಕ್ರೆ ಅವರ ಶಿವಸೇನೆ(ಯುಬಿಟಿ), ಶರದ್ ಪವಾರ್ ಅವರ ಎನ್‌ಸಿಪಿ(ಎಸ್‌ಪಿ) ಮತ್ತು ಕಾಂಗ್ರೆಸ್ ಇವೆ.ಡಿಸೆಂಬರ್ 2 ರಂದು ಯೆಯೋಲಾ ಸೇರಿದಂತೆ 246 ಪುರಸಭೆಗಳು ಮತ್ತು 42 ನಗರ ಪಂಚಾಯತ್‌ಗಳಿಗೆ ಚುನಾವಣೆ ನಡೆಯಲಿದೆ.

Recent Articles

spot_img

Related Stories

Share via
Copy link