ಮತ್ತೆ ಪ್ರಧಾನಿಯನ್ನು ಹಾಡಿ ಹೊಗಳಿದ ಶಶಿ ತರೂರ್

ನವದೆಹಲಿ:

    ಬಹು ದಿನಗಳಿಂದ ಮಾನಸಿಕವಾಗಿ ಕಾಂಗ್ರೆಸ್ ನಿಂದ ದೂರ ಉಳಿದಿರುವ ಸಂಸದ ಶಶಿ ತರೂರ್ ಮತ್ತೊಮ್ಮೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೊಗಳುವ ಮೂಲಕ ಪಕ್ಷದ ವರಿಷ್ಠರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

   ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಶಶಿ ತರೂರ್, ಕಳೆದ ರಾತ್ರಿ ಇಂಡಿಯನ್ ಎಕ್ಸ್ ಪ್ರೆಸ್ ಆಹ್ವಾನದ ಮೇರೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಭಾಗವಹಿಸಿದ್ದ ರಾಮನಾಥ ಗೋಯೆಂಕಾ ಉಪನ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದೆ. ಅಲ್ಲಿ ಪ್ರಧಾನಿ “ಅಭಿವೃದ್ಧಿಗೆ ಭಾರತದ ರಚನಾತ್ಮಕ ಅಸಹನೆ ಮತ್ತು ವಸಾಹತುಶಾಹಿ ನಂತರದ ಮನಸ್ಥಿತಿಯ ಕುರಿತು ಮಾತನಾಡಿದರು. ಭಾರತ ಇನ್ನು ಮುಂದೆ ಕೇವಲ ‘ಉದಯೋನ್ಮುಖ ಮಾರುಕಟ್ಟೆ’ ಅಲ್ಲ, ಆದರೆ ಜಗತ್ತಿಗೆ ‘ಉದಯೋನ್ಮುಖ ಮಾದರಿ’ ಎಂದು ಪ್ರಧಾನಿ ಒತ್ತಿ ಹೇಳಿದರು.

    ಎಲ್ಲಾ ಸಂದರ್ಭದಲ್ಲೂ ಚುನಾವಣಾ ಮನಸ್ಥಿತಿಯಲ್ಲಿರುತ್ತಾರೆ ಎಂಬುದು ಸಾಮಾನ್ಯವಾಗಿ ನನ್ನ ವಿರುದ್ಧದ ಆರೋಪವಾಗಿದೆ ಎಂದು ಪ್ರಧಾನಿ ಹೇಳಿದ್ದಾರೆ. ಆದರೆ ಅವರು ನಿಜವಾಗಿಯೂ ಜನರ ಸಮಸ್ಯೆಗಳನ್ನು ಪರಿಹರಿಸಲು ‘ಭಾವನಾತ್ಮಕ ಮನಸ್ಥಿತಿ’ಯಲ್ಲಿರುತ್ತಾರೆ ಎಂದು ಶಶಿ ತರೂರ್ ಹೇಳಿದ್ದಾರೆ.

Recent Articles

spot_img

Related Stories

Share via
Copy link