ಜೈಲಿನಲ್ಲಿ ಕೈದಿಗಳ ಪಾರ್ಟಿ ವಿಡಿಯೋ ವೈರಲ್ ಪ್ರಕರಣ; ವಿಚಾರಣೆ ವೇಳೆ ವಿಜಯಲಕ್ಷ್ಮಿ ಹೆಸರು ಹೇಳಿದ ಧನ್ವೀರ್!

ಬೆಂಗಳೂರು

     ಜೈಲಿನಲ್ಲಿ ಕೈದಿಗಳ ಗುಂಡು ಪಾರ್ಟಿಯ ವಿಡಿಯೋ ವೈರಲ್ ಪ್ರಕರಣದಲ್ಲಿ ನಟಿ ದರ್ಶನ್‌ ಪತ್ನಿ ವಿಜಯಲಕ್ಷ್ಮೀಗೆ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ. ಇತ್ತೀಚೆಗೆ ಸಿಸಿಬಿ ಪೊಲೀಸರು ನಟ ಧನ್ವೀರ್ ಗೌಡರನ್ನು ಕರೆಸಿ ವಿಚಾರಣೆ ನಡೆಸಿದ್ದರು. ಅವರ ಫೋನ್‌ನಲ್ಲಿ ಯಾವುದೇ ದಾಖಲೆ ಸಿಕ್ಕಿರಲಿಲ್ಲ ಎನ್ನಲಾಗಿತ್ತು. ಆದರೆ, ಮತ್ತೊಮ್ಮೆ ವಿಚಾರಣೆಗೆ ಕರೆದಾಗ ವಿಜಯಲಕ್ಷ್ಮೀ ಹೆಸರನ್ನು ಧನ್ವೀರ್ ಹೇಳಿದ್ದಾರೆ ಎಂದು ತಿಳಿದುಬಂದಿದೆ.

    ಎರಡನೇ ನೊಟೀಸ್ ವೇಳೆ ವಿಜಯಲಕ್ಷ್ಮೀ ಹೆಸರನ್ನು ಧನ್ವೀರ್ ಬಾಯಿ ಬಿಟ್ಟಿದ್ದಾರೆ. ಲಾಯರ್‌ನಿಂದ ನನಗೆ ವಿಡಿಯೋ ಬಂತು, ನಾನು ವಿಜಯಲಕ್ಷ್ಮೀಗೆ ಕಳುಹಿಸಿದ್ದೆ. ನಾನು ವಿಡಿಯೋ ವೈರಲ್ ಮಾಡಿಲ್ಲ, ಅದು ಹೇಗೆ ವೈರಲ್ ಆಯ್ತೋ ಗೊತ್ತಿಲ್ಲ ಎಂದಿದ್ದಾರೆ. ಈ ಬಗ್ಗೆ ಹಿರಿಯ ಅಧಿಕಾರಿಗಳ ಗಮನಕ್ಕೆ ತನಿಖಾಧಿಕಾರಿ ತಂದಿದ್ದಾರೆ. 

    ಇನ್ನು ವಿಜಯಲಕ್ಷ್ಮೀಯನ್ನು ವಿಚಾರಣೆಗೆ ಕರೆಯೋ ಬಗ್ಗೆ ಚರ್ಚೆ ನಡೆದಿದ್ದು, ಧನ್ವೀರ್ ಸಂಪೂರ್ಣ ಸತ್ಯ ಬಾಯಿಬಿಟ್ಟಿಲ್ಲ ಎಂದರೆ ಕರೆಸಿ ಎಂದು ಹಿರಿಯ ಅಧಿಕಾರಿಗಳು ಸೂಚಿಸಿದ್ದಾರೆ. ಹೀಗಾಗಿ ಕೇಸ್‌ನಲ್ಲಿ ವಿಜಯಲಕ್ಷ್ಮೀಗೆ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ. 

    ವಿಡಿಯೋ ಅಪ್‌ಲೋಡ್ ಮಾಡಿದ ಅಕೌಂಟ್‌ಗಳ ಪತ್ತೆಗೆ ಖಾಕಿ ಮುಂದಾಗಿದ್ದು, ಮೆಟಾಗೆ ಈ‌ಗಾಗಲೇ ಪರಪ್ಪನ ಅಗ್ರಹಾರ ಪೊಲೀಸರು ಪತ್ರ ಬರೆದಿದ್ದಾರೆ ಎನ್ನಲಾಗಿದೆ. ರಾಜಾತಿಥ್ಯದ ವಿಡಿಯೋ ಅಟ್ಯಾಚ್ ಮಾಡಿ ಪೊಲೀಸರು (ಇ-ಮೇಲ್ ಮೂಲಕ) ಪತ್ರ ಬರೆದಿದ್ದು, ಈ ವಿಡಿಯೋ ಎಷ್ಟು ಅಕೌಂಟ್‌ಗಳಲ್ಲಿ ಪೋಸ್ಟ್ ಆಗಿದೆ ಎಂದು ಮಾಹಿತಿ ಕೇಳಿದ್ದಾರೆ. 

     ಈಗಾಗಲೇ ವಿಡಿಯೋ ಮಾಡಿರುವ ಕೈದಿಯ ವಿಚಾರಣೆ ನಡೆದಿದ್ದು, ವಿಚಾರಣೆ ವೇಳೆ ವಿಡಿಯೋ ಚಿತ್ರೀಕರಿಸಿದ್ದ ಮೊಬೈಲ್ ಇಲ್ಲ ಅಂತ ಕೈದಿ ಹೇಳಿದ್ದಾನೆ. 2023ರಲ್ಲಿ ಜೈಲಿನ ಮೇಲೆ ನಿಮ್ಮ ಪೊಲೀಸರೇ ದಾಳಿ ಮಾಡಿದ್ದರು. ಆಗ ಫೋನ್ ಸೀಜ್‌ ಮಾಡಿದ್ದಾರೆ. ಆದರೆ ವಿಡಿಯೋ ಹೇಗೆ ವೈರಲ್ ಆಯ್ತೋ ಗೊತ್ತಿಲ್ಲ ಎಂದು ಕೈದಿ ಹೇಳಿದ್ದಾನೆ. ಸದ್ಯ ಈ ಬಗ್ಗೆ ಪರಪ್ಪನ ಅಗ್ರಹಾರ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. 

Recent Articles

spot_img

Related Stories

Share via
Copy link