BT ಶ್ರೀಧರ್‌ ಕರ್ನಾಟಕದ ರೀಜನಲ್ ಆಫೀಸರ್ ಆಗಿ ನೇಮಕ

ಬೆಂಗಳೂರು :

    ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ  ಪ್ರಾಧಿಕಾರದ ಯೋಜನಾ ನಿರ್ದೇಶಕರಾಗಿದ್ದ ಬಿಟಿ ಶ್ರೀಧರ್  ಅವರು ರಾಷ್ಟ್ರೀಯ ಹೆದ್ದಾರಿಗಳ ಕರ್ನಾಟಕದ ರೀಜನಲ್ ಆಫೀಸರ್ ಆಗಿ ನೇಮಕಗೊಂಡಿದ್ದಾರೆ. ಕೇಂದ್ರ ಭೂ ಸಾರಿಗೆ ಇಲಾಖೆ ಶ್ರೀಧರ್‌ ಅವರನ್ನು ರೀಜನಲ್ ಆಫೀಸರ್ ನೇಮಕಗೊಳಿಸಿ ಆದೇಶ ಹೊರಡಿಸಿದೆ. ಕರ್ನಾಟಕ ಮಾತ್ರವಲ್ಲದೇ ಕೇರಳದ ರಾಷ್ಟ್ರೀಯ ಹೆದ್ದಾರಿಗಳ ಜವಾಬ್ದಾರಿಯನ್ನು ಶ್ರೀಧರ್‌ ಯಶಸ್ವಿಯಾಗಿ ನಿಭಾಯಿಸುತ್ತಿದ್ದಾರೆ.

    ಹೈವೇ ನಿರ್ಮಾಣಗಳಲ್ಲಿ ಅಪಾರ ಅನುಭವವನ್ನು ಹೊಂದಿರುವ ಬಿಟಿ ಶ್ರೀಧರ್‌ ರಾಜ್ಯದ ಹಲವು ಮುಖ್ಯ ಹೆದ್ದಾರಿ ಯೋಜನೆಗಳಿಗೆ ತಮ್ಮ ಕೊಡುಗೆ ನೀಡಿದ್ದಾರೆ. ಇದೀಗ ಇವರನ್ನು ಪ್ರಾದೇಶಿಕ ಅಧಿಕಾರಿಯಾಗಿ ನೇಮಿಸಿರುವುದರಿಂದ ನೆನೆಗುದಿಗೆಗೆ ಬಿದ್ದಿರುವ ರಾಷ್ಟ್ರೀಯ ಹೆದ್ದಾರಿ ಯೋಜನೆಗಳು ಚುರುಕುಗೊಳ್ಳಲಿವೆ. ರೀಜನಲ್ ಆಫೀಸರ್ ಆಗಿ ನೇಮಕಗೊಂಡಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದು, ನನ್ನ ಪತಿ ಬಿ ಟಿ ಶ್ರೀಧರ ಕೇರಳ ಮತ್ತು ಕರ್ನಾಟಕ ರಾಜ್ಯದ ಮುಖ್ಯ ಅಭಿಯಂತರರಾಗಿ ಸೇವೆ ಸಲ್ಲಿಸಲು ಆಯ್ಕೆಗೊಂಡಿದ್ದಾರೆ. ಇಂಥ ಅವಕಾಶ ಕಲ್ಪಿಸಿದ ಭಗವಂತನಿಗೆ ಕೋಟಿ ನಮನಗಳು ಎಂದು ಅವರು ಹೇಳಿದರು.

    ಮಾಜಿ ಸಂಸದ ಹಾಗೂ ಬಿಜೆಪಿ ನಾಯಕ ಪ್ರತಾಪ್‌ ಸಿಂಹ ಸಹ ಸಂತಸ ವ್ಯಕ್ತಪಡಿಸಿದ್ದು, ನಮ್ಮ ಮೈಸೂರು-ಬೆಂಗಳೂರು ಹೈವೇ ನಿರ್ಮಾಣದ ಹಿಂದಿನ ಶಕ್ತಿಯಾಗಿದ್ದ ನಮ್ಮ ಮೈಸೂರಿನವರೇ ಆದ ಬಿಟಿ ಶ್ರೀಧರ್ ಇನ್ನು ಮುಂದೆ  ಕರ್ನಾಟಕದ ರೀಜನಲ್ ಆಫೀಸರ್ ಎಂದು ತಮ್ಮ ಸಾಮಾಜಿ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.

Recent Articles

spot_img

Related Stories

Share via
Copy link