ರಾಜಸ್ಥಾನ: ಥಾರ್ ಕಾರು, ಬೈಕ್, ಗನ್ ಗಳ ಜೊತೆಗೆ ಭಯಾನಕ ಗ್ಯಾಂಗ್ ವಾರ್!

ಜೈಪುರ: 

     ಥಾರ್ ಕಾರು, ಬೈಕ್, ಗನ್ ಗಳ ಜೊತೆಗೆ ಭಯಾಂಕರ ಗ್ಯಾಂಗ್ ವಾರ್ ನಡೆದಿರುವ ಘಟನೆ ರಾಜಸ್ಥಾನದಲ್ಲಿ ನಡೆದಿದೆ.ರಾಜಸ್ಥಾನದ ಬನ್ಸೂರ್‌ನಲ್ಲಿ ಥಾರ್, ಮಾರುತಿ ಸ್ವಿಫ್ಟ್‌ನಲ್ಲಿದ್ದ ಕೆಲವರು ಮೂವರು ಬೈಕ್ ಸವಾರರಿಗೆ ಡಿಕ್ಕಿ ಹೊಡೆಸಿದ್ದಾರೆ. ನಂತರ ಹ್ಯಾಂಡ್‌ಗನ್‌ಗಳನ್ನು ಹೊರತೆಗೆದು ಗುಂಡಿನ ಚಕಮಕಿ ನಡೆಸಿದ್ದಾರೆ. ಇಡೀ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ.

    ಎರಡೂ ಗುಂಪುಗಳು ಮೊದಲಿನಿಂದಲೂ ಪರಸ್ಪರ ಪರಿಚಿತರಾಗಿದ್ದು, ವಿರೋಧಿಗಳಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಸ್ವಿಫ್ಟ್ ಮತ್ತು ಥಾರ್ ರಸ್ತೆಯ ಬದಿಯಲ್ಲಿ ನಿಂತಿದ್ದ ಬೈಕ್ ಗಳಿಗೆ ಡಿಕ್ಕಿ ಹೊಡೆದಿದೆ. ನಂತರ ಪ್ರಯಾಣಿಕರು ಬೈಕರ್‌ಗಳ ಮೇಲೆ ಹಲವು ಬಾರಿ ಗುಂಡಿನ ದಾಳಿ ನಡೆಸಿದ್ದಾರೆ. ಪ್ರತಿಯಾಗಿ ಬೈಕರ್ ಗಳು ಕೂಡಾ ಬಂದೂಕುಗಳನ್ನು ಹೊರತೆಗೆದು ಗುಂಡು ಹಾರಿಸಿದ್ದಾರೆ. 

    ಬೈಕರ್ ಗಳ ಮೇಲೆ ಥಾರ್ ಕಾರು ಹರಿಸಲು ಪ್ರಯತ್ನಿಸುವುದು ವಿಡಿಯೋದಲ್ಲಿದೆ. ಆದಾಗ್ಯೂ, ಮಾರುತಿ ಸ್ವಿಪ್ಟ್ ದಿಢೀರನೆ ಹಿಂತೆಗೆದುಕೊಂಡು ಬೈಕ್ ಸವಾರರ ಮೇಲೆ ಹರಿಸಲು ಪ್ರಯತ್ನಿಸುವುದು ಕಂಡುಬಂದಿದೆ. ಅಲ್ಲಿಂದ ಬೈಕ್ ಸವಾರರು ಪರಾರಿಯಾಗುವ ಮುನ್ನಾ ದಾಳಿಕೋರರು ಬೈಕ್ ನ್ನು ಚಿಂದಿ ಚಿಂದಿಯನ್ನಾಗಿ ಮಾಡಲು ಪ್ರಯತ್ನಿಸಿದ್ದಾರೆ.  ಗುಂಡಿನ ಚಕಮಕಿಯಿಂದ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಸಿಸಿಟಿವಿಯ ದೃಶ್ಯಾವಳಿಗಳನ್ನು ಪರಿಶೀಲಿಸಿರುವ ಪೊಲೀಸರು, ಆದಷ್ಟು ಬೇಗ ಆರೋಪಿಗಳನ್ನು ಬಂಧಿಸಲಾಗುವುದು ಎಂದು ತಿಳಿಸಿದ್ದಾರೆ.

Recent Articles

spot_img

Related Stories

Share via
Copy link