ಡಬ್ಲ್ಯುಪಿಎಲ್‌ ; ಮುಂಬೈ vs ಆರ್‌ಸಿಬಿ ಮೊದಲ ಮುಖಾಮುಖಿ

ಮುಂಬಯಿ

   4ನೇ ಆವೃತ್ತಿಯ ಮಹಿಳಾ ಪ್ರೀಮಿಯರ್‌ ಲೀಗ್‌  ಆಟಗಾರ್ತಿಯರ ಹರಾಜು ಪ್ರಕ್ರಿಯೆ ಮುಕ್ತಾಯ ಬೆನ್ನಲ್ಲೇ ಇದೀಗ ಪಂದ್ಯಾವಳಿಯ ವೇಳಾಪಟ್ಟಿಯನ್ನು  ಬಿಸಿಸಿಐ ಶನಿವಾರ ಪ್ರಕಟಿಸಿದೆ. ಜನವರಿ 9 ರಂದು ನವಿ ಮುಂಬೈನ ಡಾ. ಡಿ.ವೈ. ಪಾಟೀಲ್ ಕ್ರೀಡಾಂಗಣದಲ್ಲಿ ನಡೆಯುವ ಉದ್ಘಾಟನ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಸೆಣಸಾಟ ನಡೆಸಲಿದೆ.

   ಟೂರ್ನಿಯ ಮೊದಲ ಚರಣದ ಪಂದ್ಯಗಳು ಜನವರಿ 9 ರಿಂದ 17 ರವರೆಗೆ ನವಿ ಮುಂಬೈನಲ್ಲಿ ನಡೆಯಲಿದೆ. ನಂತರ ಎರಡನೇ ಚರಣದ ಜನವರಿ 19 ರಿಂದ ಫೆಬ್ರವರಿ 5 ರವರೆಗೆ ಬರೋಡಾದಲ್ಲಿ ನಡೆಯಲಿದೆ. ಫೈನಲ್ ಕೂಡ ಬರೋಡಾದಲ್ಲಿ ನಿಗದಿಯಾಗಿದೆ. ಲೀಗ್ ಹಂತದಲ್ಲಿ 20 ಪಂದ್ಯಗಳು ನಡೆಯಲಿದ್ದು, ಫೆಬ್ರವರಿ 3 ರಂದು ಎಲಿಮಿನೇಟರ್ ಮತ್ತು ಎರಡು ದಿನಗಳ ನಂತರ ಫೈನಲ್ ಪಂದ್ಯ ನಡೆಯಲಿದೆ. 

    ಮೆಗಾ ಹರಾಜಿನಲ್ಲಿ, 194 ಭಾರತೀಯ ಮತ್ತು 83 ವಿದೇಶಿ ಆಟಗಾರರು ಸೇರಿದಂತೆ 277 ಆಟಗಾರರು ಲಭ್ಯವಿದ್ದರು. ಈ ಪೈಕಿ ಒಟ್ಟು 67 ಮಂದಿ 5 ತಂಡಗಳಿಗೆ ಬಿಕರಿಯಾದರು. ಭಾರತದ ತಾರಾ ಆಲ್ರೌಂಡರ್‌ ದೀಪ್ತಿ ಶರ್ಮಾ 3.2 ಕೋಟಿ ರು.ಗೆ ಯು.ಪಿ.ವಾರಿಯರ್ಸ್‌ ತಂಡವನ್ನು ಸೇರಿಕೊಂಡರು. ಮುಂಬೈ ಇಂಡಿಯನ್ಸ್ ಹಾಲಿ ಚಾಂಪಿಯನ್ ಆಗಿದ್ದು, 2023 ರಲ್ಲಿ ಪ್ರಶಸ್ತಿಯನ್ನು ಗೆದ್ದಿದ್ದರೆ, 2024 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಟ್ರೋಫಿಯನ್ನು ತನ್ನದಾಗಿಸಿಕೊಂಡಿತ್ತು.

Recent Articles

spot_img

Related Stories

Share via
Copy link