ಎರಡು ಬಾರಿ ಅಧಿಕಾರ ಹೋದಾಗ ಯಾವುದೇ ಮಠಾಧೀಶರ ನೆರವು ಕೇಳಿರಲಿಲ್ಲ: ಡಿಕೆಶಿಗೆ ಕುಮಾರಸ್ವಾಮಿ ಟಾಂಗ್

ಬೆಂಗಳೂರು:

   ನಾನು ಎರಡು ಬಾರಿ ಮುಖ್ಯಮಂತ್ರಿಯಾಗಿದ್ದೆ, ಅಧಿಕಾರ ಹೋದಾಗ ನಾನು ಮಠಾಧೀಶರ ನೆರವು ಕೇಳಿಲ್ಲ ಎಂದು ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಹೇಳಿದರು.

   ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಕ್ಕಲಿಗ ಸ್ವಾಮೀಜಿಗಳ ಬೆಂಬಲ ವಿಚಾರವಾಗಿ ಪ್ರತಿಕ್ರಿಯಿಸಿದರು. ನಾನು ಎರಡು ಬಾರಿ ಸಿಎಂ ಆದೆ. ಅಧಿಕಾರ ಹೋದಾಗ ನಾನು ಮಠಾಧೀಶರ ನೆರವು ಕೇಳಿಲ್ಲ. ಒಕ್ಕಲಿಗ ಸಮಾಜ, ಇನ್ನೊಂದು ಸಮಾಜದ ಬಗ್ಗೆ ಹೇಳಲ್ಲ. ನಾನು ಹೇಳೋದು ಸಮಾಜದಲ್ಲಿ ಈ ರೀತಿ ಜಾತಿ ವಿಚಾರ ಹೇಳಿಕೊಂಡು, ಧಾರ್ಮಿಕ ಕ್ಷೇತ್ರಗಳನ್ನು ದುರುಪಯೋಗ ಮಾಡಿಕೊಳ್ಳುವುದು ಯಾವುದೇ ರಾಜಕಾರಣಿಗಳಿಗೆ ಶೋಭೆ ತರಲ್ಲ ಎಂದರು.

   ಸ್ವಾಮೀಜಿಗಳು ಸೇರಿ ಎಲ್ಲರಿಗೂ ಹೇಳುತ್ತೇನೆ. ಇಲ್ಲಿ ಪ್ರಶ್ನೆ ರಾಜ್ಯ ನೆಮ್ಮದಿಯಿಂದ ಇರಬೇಕು. ಜಾತಿ ರಾಜಕಾರಣ ಮಾಡುವುದಿಲ್ಲ ಎಂದು ಹೇಳಿ, ಈಗ ಬೃಹದಾಕಾರದ ಜಾತಿ ರಾಜಕಾರಣ ಮಾಡಲಾಗುತ್ತಿದೆ. ಇದರಿಂದ ನಷ್ಟ ಅವ್ರಿಗೆ ಅಲ್ಲ. ರಾಜ್ಯಕ್ಕೆ ನಷ್ಟ ಆಗುತ್ತದೆ. ರಾಜ್ಯದಲ್ಲಿ ಸಮಾಜಗಳ ನಡುವೆ ಸಂಘರ್ಷಕ್ಕೆ ಎಡೆಮಾಡಿಕೊಟ್ಟಿದೆ. ಇದರ ಅವಶ್ಯಕತೆ ಇಲ್ಲ. ಕಾಂಗ್ರೆಸ್ ಪಕ್ಷಕ್ಕೆ ಮುಜುಗರ ಅಲ್ಲ. ಕರ್ನಾಟಕದ ಜನತೆಗೆ ಮುಜುಗರ” ಎಂದು ವಾಗ್ದಾಳಿ ನಡೆಸಿದರು.

   ಜವಾಬ್ದಾರಿಯುತ ವ್ಯಕ್ತಿ ಅದಕ್ಕೆ ಉತ್ತರ ನೀಡಬೇಕು. ಸಿಎಂ ಡಿಸಿಎಂ ನಡುವೆ ಬ್ರೇಕ್ ಫಾಸ್ಟ್ ಮೀಟಿಂಗ್ ನಡೆಯುತ್ತಿದೆ. ಡ್ರಾಮಾ ನಡೆಯುತ್ತಿದೆ. ಡ್ರಾಮಾದ ಫಲಿತಾಂಶಕ್ಕೆ ನಾವು ಕಾಯ್ತಾ ಇದ್ದೇವೆ. ಯಾವ ಸರ್ಕಾರದ ಬಗ್ಗೆ ಮಾತಾಡ್ತಾ ಇದ್ದೀರಾ? ಕಾಂಗ್ರೆಸ್ ಪಕ್ಷದ ಸರ್ಕಾರ ಅಲ್ಲ ಇದು. ಕರ್ನಾಟಕದಲ್ಲಿ ಪಕ್ಷದ ಸಂಘಟನೆ ಮಾಡುವ ಬಗ್ಗೆ ಚರ್ಚೆ ಅವರಿಗೆ ಬಿಟ್ಟಿದ್ದು. ನಾಡಿನ ಜನತೆ 140 ಸ್ಥಾನ ಕೊಟ್ಟು ಒಳ್ಳೆಯ ಕೆಲಸ ಮಾಡಿ ಅಧಿಕಾರ ಕೊಟ್ಟರು ಎಂದರು.

Recent Articles

spot_img

Related Stories

Share via
Copy link