ತುಮಕೂರು:-
ತುಮಕೂರು ತಾಲೂಕಿನ ಕೋರ ಹೋಬಳಿ ಕೋರ ಗ್ರಾಮದ ಶ್ರೀಮತಿ ಸರ್ವ ಮಂಗಳ ನಾಗಯ್ಯ ಸರ್ಕಾರಿ ಮಾದರಿ ಪ್ರಾಥಮಿಕ ಹಿರಿಯ ಪಾಠಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿ ವರ್ಗಾವಣೆಗೊಂಡ ಕೆ ಎನ್ ಮಧುಸೂಧನ್ ರಾವ್ ರವರಿಗೆ ಶಾಲೆಯ ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗ, ಎಸ್ಡಿಎಂಸಿ ಸದಸ್ಯರು ಹಾಗೂ ವಿದ್ಯಾರ್ಥಿಗಳು ಮತ್ತು ಪೋಷಕರಿಂದ ಹೃದಯಸ್ಪರ್ಶಿ ಬೀಳ್ಕೊಡುಗೆ ಎಂಬ ಸಮಾರಂಭ ಹಮ್ಮಿಕೊಂಡು ಇಂದು ಅವರನ್ನು ಗೌರವಿಸಿ ಸನ್ಮಾನಿಸಿ, ಹೃದಯಸ್ಪರ್ಶಿ ಬಿಳ್ಕೊಡುಗೆ ನೀಡಲಾಯಿತು.
ಈ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಸಿ ಎ ಓ ಆದಂತಹ ನರಸಿಂಹಮೂರ್ತಿ ರವರು ಭಾಗವಹಿಸಿ ಶಾಲೆ ಹಾಗೂ ಶಿಕ್ಷಕರ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಇದೇ ಶಾಲೆಯಲ್ಲಿ ಈ ಹಿಂದೆ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಶಿವರಾಜು ರವರು ಮಾತನಾಡಿ ನಾನು ಈ ಹಿಂದೆ ಮುಖ್ಯೋಪಾಧ್ಯಾಯರಾಗಿದ್ದಾಗ ನೂತನ ಶಾಲಾ ಕಟ್ಟಡ ನಿರ್ಮಾಣ ಮಾಡಲು ಇದೇ ಗ್ರಾಮದ ಸರ್ವ ಮಂಗಳ ನಾಗಯ್ಯ 1 ಕೋಟಿಗೂ ಹೆಚ್ಚು ಹಣ ಸಹಾಯ ಮಾಡಿ ನೂತನ ಶಾಲಾ ಕಟ್ಟಲೂ ಸಹಾಯ ಮಾಡಿದ್ದಾರೆ ಹಾಗೂ ಕೋರ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿದ್ದ ಕಾಂಗ್ರೆಸ್ ಮುಖಂಡರಾದ ನಜೀರ್ ಅಹ್ಮದ್ ರವರು ಹಾಗೂ ಎಸ್ ಡಿ ಎಂ ಸಿ ಅಧ್ಯಕ್ಷರಾಗಿದ್ದ ಅಹಿಂದ ನಾಯಕರಾದ ಶರತ್ ಕುಮಾರ್ ರವರು ನೂತನ ಕಟ್ಟಡವನ್ನು ನಿರ್ಮಾಣ ಮಾಡಲು ತುಂಬಾ ಸಹಕಾರ ನೀಡಿದರೆಂದು ನೆನಪಿಸಿಕೊಂಡರು.
ಇದೆ ಸಂದರ್ಭದಲ್ಲಿ ಶಿಕ್ಷಕರಾದ ಶಶಿಕಲಾ, ಶೀತಾ ಲಕ್ಷ್ಮಿ ,ಸೌಮ್ಯ, ವಿಶ್ವನಾಥ್, ರವೀಶ್, ಎಸ್ಡಿಎಂಸಿ ಅಧ್ಯಕ್ಷರಾದ ಡಮರುಗ ಉಮೇಶ್, ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ವಿಶ್ವನಾಥ್ ಸೇರಿದಂತೆ ಶಾಲಾ ಮಕ್ಕಳು, ಪೋಷಕರು ಇದ್ದರು.








