ಬೆಂಗಳೂರಿನ ಕೋಲ್ಡ್ ವೆದರ್ ಬಗ್ಗೆ ವಿಡಿಯೊ ಶೇರ್ ಮಾಡಿದ ಯುವಕ

ಬೆಂಗಳೂರು

     ಈಗಂತೂ ಎಲ್ಲ ಕಡೆ ಚಳಿಯ ವಾತಾವರಣ…ಇದರಿಂದಾಗಿ ಬೆಳಗ್ಗೆ ಎದ್ದೇಳುವುದೇ ಸಮಸ್ಯೆಯಾಗಿದೆ. ಅದರಲ್ಲೂ ಈ ಕೊರೆಯುವ ಚಳಿಯಲ್ಲಿ ಮನೆ ಕೆಲಸ ಮುಗಿಸಿ ಆಫೀಸ್‌ಗೆ ಹೋಗುವುದೇ ಹರಸಾಹಸ. ಅದರಲ್ಲಿಯೂ ಬೆಂಗಳೂರಿನಲ್ಲಿ ಚಳಿಯ ಪ್ರಮಾಣ ತುಸು ಹೆಚ್ಚೇ ಇದೆ. ಇತ್ತೀಚೆಗಷ್ಟೇ ಒಬ್ಬರು ಬೆಂಗಳೂರು ಫ್ರಿಡ್ಜ್‌ನಲ್ಲಿದೆ ಎಂದು ಹೇಳಿದ್ದರು. ಇದೀಗ ಬೆಂಗಳೂರಿನ ಚಳಿಯ ವಾತಾವರಣದ ಬಗ್ಗೆ ಪೂರವ್ ಎನ್ನುವ ಯುವಕ ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಫನ್ನಿ ವಿಡಿಯೊ ಒಂದನ್ನು ಮಾಡಿ ಹಂಚಿಕೊಂಡಿದ್ದಾನೆ. ಬೆಂಗಳೂರಿನ ಹವಾಮಾನದಿಂದ ವಿಪರೀತ ಚಳಿಯಾಗುತ್ತಿದ್ದು, ಇದರ ನಡುವೆಯೂ ಜೀವನ ಸಾಗಿಸಬೇಕು. ನಿತ್ಯ ಕೆಲಸಕ್ಕೂ ರೆಡಿಯಾಗಬೇಕು ಎಂದು ನೋವು ತೋಡಿಕೊಂಡಿದ್ದಾನೆ. 

     ವೈರಲ್ ಆದ ವಿಡಿಯೊದಲ್ಲಿ ಪೂರವ್‌, ʼʼಹಾಯ್, ನಾನು ಶಿಮ್ಲಾ ಅಥವಾ ಹಿಮಾಚಲ ಪ್ರದೇಶದಲ್ಲಿ ಇಲ್ಲ. ಬದಲಾಗಿ ಬೆಂಗಳೂರಿನ ಕೋರಮಂಗಲದಲ್ಲಿ ಇದ್ದೇನೆ. ನನಗೆ ಸಾಯುವವಷ್ಟು ಚಳಿಯಾಗುತ್ತಿದೆ. ಆದ ಕಾರಣ ನಾನು ಸ್ವೆಟರ್, ಮೇಲೆ ಸ್ವೆಟರ್, ಜಾಕೆಟ್ ತೊಟ್ಟಿದ್ದೇನೆ. ಅದರ ಜತೆಗೆ ತಲೆಯ ಮೇಲೂ ಶಾಲ್ ಧರಿಸಿದ್ದೇನೆ. ಈಗ ನಾನು ಟೀ ಕಾಫಿ ಮಾಡಲು ಹಾಲು ತರಲು ಈ ರೀತಿಯಾಗಿ ಹೋಗುತ್ತಿದ್ದೇನೆ. ಬೆಂಗಳೂರಿನ ಹವಾಮಾನ ಯಾಕಿಷ್ಟು ಬದಲಾವಣೆ ಆಗಿದೆ ನನಗೆ ಗೊತ್ತಿಲ್ಲ. ಇದರಿಂದ ದಿನದ ಕೆಲಸಗಳನ್ನು ಕೂಡ ಮಾಡುವುದು ಕಷ್ಟವಾಗುತ್ತಿದೆʼʼ ಎಂದು ಹೇಳಿದ್ದಾನೆ.

   ʼʼಬೆಂಗಳೂರಿನಲ್ಲಿ ಬಹಳ ಕೋಲ್ಡ್ ಕಂಡೀಶನ್ ಇದೆ. ಹಲವು ಜನರು ಈಗಾಗಲೇ ಈ ಚಳಿಗೆ ನಲುಗಿ ಜ್ವರ, ಶೀತದಿಂದ ಬಳಲುತ್ತಿದ್ದಾರೆ. ನನ್ನ ಅಕ್ಕ-ಪಕ್ಕ ಜನರಿಗೂ ಶೀತ ಆಗಿದೆ. ಇದೇ ಭಯಕ್ಕೆ ನಾನು ಅವರ ಹತ್ತಿರ ಕೂಡ ಹೋಗುತ್ತಿಲ್ಲ. ಶೀತ ಬಂದರೆ ತುಂಬಾ ಕಾಲ ಉಳಿಯುತ್ತದೆ. ಹೀಗಾಗಿ ಆ ಭಯದಿಂದ ನಾನು ಕೆಮ್ಮಿನ ಸಿರಪ್ ಮತ್ತು ಡೊಲೋ 650 ಮಾತ್ರೆ ಕೂಡ ಸೇವಿಸುತ್ತಿದ್ದೇನೆʼʼ ಎಂದು ಪೂರವ್ ವಿಡಿಯೊದಲ್ಲಿ ವಿವರಿಸಿದ್ದಾನೆ. 

    ಬಳಿಕ ಆ ವಿಡಿಯೊದಲ್ಲಿ ಆತನು, ʼʼರಿಟರ್ನ್ ವಿಳಾಸ ಕಳುಹಿಸಿ ಇಂದ್ರದೇವ… ದಯವಿಟ್ಟು ರಿಟರ್ನ್ ವಿಳಾಸ ಕಳುಹಿಸಿ…ನಾನು ಇಂತಹ ಹವಾಮಾನದಿಂದ ಹಿಂತಿರುಗಲು ಬಯಸುತ್ತಿದ್ದೇನೆ… ನಾನು ಇದಕ್ಕೆ ಸೈನ್ ಅಪ್ ಮಾಡಿಲ್ಲʼʼ ಎಂದು ತಮಾಷೆ ಮಾಡಿದ್ದಾನೆ. ಈ ವಿಡಿಯೊ ಇದುವರೆಗೆ 8 ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದೆ. ನೆಟ್ಟಿಗರು ವಿವಿಧ ರೀತಿಯ ಕಮೆಂಟ್ ಮಾಡಿದ್ದಾರೆ.

    ಈ ವಿಡಿಯೊ ಬೆಂಗಳೂರಿನ ಹವಾಮಾನ ಸ್ಥಿತಿ ಹೇಗಿದೆ ಎಂಬ ನೈಜ ಸ್ಥಿತಿ ಅನಾವರಣ ಮಾಡಿದಂತಿದೆ‌. ಇದು ಬೆಂಗಳೂರಿನ ಅತ್ಯಂತ ಜನಪ್ರಿಯ ವಿಷಯ ಎಂದು ಬಳಕೆದಾರರೊಬ್ಬರು ತಿಳಿಸಿದ್ದಾರೆ. ಈ ಚಳಿಗೆ ಎಷ್ಟು ಜಾಕೆಟ್ ಧರಿಸಿದರು ಅದು ಕಡಿಮೆ ಎಂದು ಹೇಳಬಹುದು. ಅದರ ನಡುವೆ ನಿತ್ಯ ಕೆಲಸ ಮುಗಿಸಿಕೊಂಡು ನಾವು ಬದುಕು ಸಾಗಿಸಬೇಕಿದೆ. ಹೀಗಾಗಿ ಇಲ್ಲಿ ಕೆಲಸ ಮಾಡುವವರಿಗೆ ಚಳಿಗಾಲದ ಭತ್ಯೆ ಎಂದು ನೀಡಬೇಕು ಎಂದು ಮತ್ತೊಬ್ಬ ಬಳಕೆದಾರರು ಆಗ್ರಹಿಸಿದ್ದಾರೆ.

Recent Articles

spot_img

Related Stories

Share via
Copy link