ತುಮಕೂರು:
ಇಲ್ಲಿನ ಸಿದ್ಧಗಂಗಾ ತಾಂತ್ರಿಕ ಮಹಾವಿದ್ಯಾಲಯದ ಬಿರ‍್ಲಾ ಸಭಾಂಗಣದಲ್ಲಿ ಮಂಗಳವಾರ ಕಾಲೇಜಿನ ಸಿವಿಲ್ ಎಂಜಿನಿಯರಿಂಗ್ ವಿಭಾಗದಿಂದ ಇನ್ಟ್ಟ್ಯೂಷನ್ ಆಫ್ ಎಂಜಿನಿಯರ್ಸ್ ಇಂಡಿಯಾ(ಐಇಐ) ತುಮಕೂರು ಚಾಪ್ಟರ್ ಸಹಯೋಗದಲ್ಲಿ ‘ಸ್ಮಾರ್ಟ್ ಎಂಜಿನಿಯರಿಂಗ್ ಫಾರ್ ಬೆಟರ್‌ವರ್ಲ್ಡ್ ಹಾಗೂ ಕರ್ನಾಟಕ ರಾಜ್ಯದ ನೀರಿನ ಪರಿಸ್ಥಿತಿ’ ಕುರಿತಂತೆ ವಿಶೇಷ ಸಂವಾದ ಕಾರ್ಯಕ್ರಮ ಜರುಗಿತು.
ಸಂವಾದ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದ ಜಲಸಂಪನ್ಮೂಲ ಇಲಾಖೆ ನಿವೃತ್ತ ಕಾರ್ಯದರ್ಶಿ ಕೆ.ಜೈಪ್ರಕಾಶ್ ಅವರು, ಅತ್ಯಮೂಲ್ಯ ಹಾಗೂ ದುರ್ಲಬಸಂಪತ್ತೆಂದರೆ ನೀರು. ಸಿಂಧೂ ನಾಗರಿಕತೆ, ಈಜಿಪ್ಟ್ ನಾಗರಿಕತೆ ಆದಿಯಾಗಿ ವಿಶ್ವದ ಅನೇಕ ನಾಗರಿಕತೆಗಳ ಉಗಮವಾಗಿದ್ದು, ನದಿ ನೀರಿನ ತಟದಲ್ಲೆ. 800 ಕೋಟಿ ದಾಟಿರುವ ವಿಶ್ವದ ಜನಸಂಖ್ಯೆ, ಸುಸ್ಥಿರ ಪ್ರಗತಿ ನೀರಿನ ಮೇಲೆ ಅವಲಂಬಿತವಾಗಿದ್ದು, ನಗರೀಕರಣ, ಕೈಗಾರಕೀಕರಣ ಹೆಸರಲ್ಲಿ ಜಲಮೂಲ, ನದಿಪಾತ್ರಗಳನ್ನು ಬರಿದು ಮಾಡಿದರೆ ಇಡೀ ಮನುಕಲ ಮಾತ್ರವಲ್ಲ ಜೀವ ವೈವಿಧ್ಯತೆಯೇ ಅಪಾಯದಲ್ಲಿ ಸಿಲುಕುತ್ತದೆ. ಹಾಗಾಗಿ ಇರುವ ಜಲಮೂಲವನ್ನು ಮಾಲಿನ್ಯ ರಹಿತವಾಗಿ ಸಂರಕ್ಷಿಸಿ, ಸದ್ಬಳಕೆ ಮಾಡುವ ಹೊಣೆ ಸರ್ಕಾರದ ಜೊತೆಗೆ ತಾಂತ್ರಿಕ ಪರಿಣಿತಿಯುಳ್ಳ ಎಂಜಿನಿಯರ್ಸ್ಗಳು, ಜನರ ಮೇಲಿದೆ ಎಂದರು.
ನದಿ, ಜಲಮೂಲಗಳ ನೀರಿನ ಸಮರ್ಪಕ ಬಳಕೆಯಾದಾಗ ಮಾತ್ರ ರಾಜ್ಯ- ರಾಷ್ಟ್ರ ಸಮೃದ್ಧಿಯಾಗಲಿದ್ದು, ಈ ದಿಸೆಯಲ್ಲಿ ಯೋಜನೆಗಳನ್ನು ರೂಪಿಸಿ, ಅನುಷ್ಠಾನಗೊಳಿಸುವ ಎಂಜಿನಿಯರ್‌ಗಳ ಪಾತ್ರ ಮಹತ್ತರವಾದದು ಎಂದ ಅವರು, ಎಸ್‌ಐಟಿ ಕಾಲೇಜು ಹಾಗೂ ಎಂಜಿನಿಯರ್ಸ್ ಸಂಸ್ಥೆಯವರು ಈ ನಿಟ್ಟಿನಲ್ಲಿ ವಿಶೇಷ ಒತು ್ತನೀಡಿ ಸಂವಾದ ಏರ್ಪಡಿಸಿರುವುದು ಮಾದರಿಯಾಗಿದೆ. ಯುವ ಎಂಜಿನಿಯರ್ ಗಳಾದವರು ಸಮಸ್ಯೆಗಿಂತ ಪರಿಹಾರದ ಕಡೆ ಹೆಚ್ಚು ಒತ್ತುಕೊಡಬೇಕಿದೆ ಎಂದರು.
ರಾಜ್ಯದಲ್ಲಿ ಹಲವು ನದಿಗಳಿದ್ದರೂ, ಅಂತಾರಾಜ್ಯಗಳೊಂದಿಗೆ ಬೆಸೆದುಕೊಂಡಿರುವ ಕಾವೇರಿ, ಕೃಷ್ಣಾ, ಗೋದಾವರಿ, ಮಹಾದಾಯಿ, ಮಲಪ್ರಭಾ, ಭೀಮಾ ನದಿ ಸಂಬಂಧ ತಮಿಳುನಾಡು, ಮಹಾರಾಷ್ಟ್ರ, ಗೋವಾ, ಕೇರಳ, ಆಂಧ್ರದ ನಡುವೆ ನೀರಿನ ಹಂಚಿಕೆ, ಬಿಡುಗಡೆ ಸಂಬಂಧ ವಿವಾದ ಇದೆ. ನದಿ ನೀರಿನ ಹಂಚಿಕೆ ವಿವಾದ ಬೇಗ, ಸುಗಮವಾಗಿ ಬಗೆಹರಿಯುವಂತಹುದಲ್ಲ. ಒಕ್ಕೂಟ ವ್ಯವಸ್ಥೆಯಲ್ಲಿ ಕಾನೂನು, ಜನರ ಭಾವನೆ, ವಿವಿಧ ರಾಜ್ಯಗಳ ಭೌಗೋಳಿಕ ಪರಿಸ್ಥಿತಿ ಅಗತ್ಯತೆ ಎಲ್ಲವನ್ನೂ ಪರಿಗಣಿಸಿ ನದಿ ನೀರನ್ನು ಶಾಂತಿಯುತ ಹಂಚಿಕೆ ಮಾಡಿಕೊಂಡು ಅಭಿವೃದ್ಧಿಯೆಡೆಗೆ ರಾಜ್ಯವನ್ನು ಕೊಂಡೊಯ್ಯಬೇಕಿದೆ ಎಂದು ಜೈ ಪ್ರಕಾಶ್ ಸಲಹೆ ನೀಡಿದರು.
ಇದೇವೇಳೆ ಪ್ರಾತ್ಯಕ್ಷಿಕೆ ಮೂಲಕ ರಾಜ್ಯ ಜಲನಕಾಶೆಯನ್ನು ಸಾದರೊಡಿಸಿದ ಜೈ ಪ್ರಕಾಶ್ ಅವರು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಉದ್ಘಾಟನಾ ಕಾರ್ಯಕ್ರಮದ ಅತಿಥಿಗಳಾಗಿ ಎಸ್‌ಐಟಿ ಎಸ್‌ಐಟಿ ಸಿಇಓ ಡಾ.ಶಿವಕುಮಾರಯ್ಯ, ಪ್ರಿನ್ಸಿಪಾಲ್ ಪ್ರೊ.ಎಸ್.ವಿ.ದಿನೇಶ್, ಐಇಐ ತುಮಕೂರು ಚಾಪ್ಟರ್‌ನ ಚರ‍್ಮನ್ ಡಾ.ಆರ್.ಸುರೇಶ್, ಕಾಲೇಜಿನ ಸಿವಿಲ್ ಎಂಜಿನಿಯರ್ ವಿಭಾಗದ ಮುಖ್ಯಸ್ಥ ಪ್ರೊ.ಪವನ್‌ಕುಮಾರ್, ಡಾ.ಆನಂದ್, ಮಾದವ್, ಗಣೇಶ್, ತಿರುಮಲೇಶ್ ಹೇಮಾವತಿ ನಾಲಾ ಹಾಗೂ ವಿಜೆಎನ್‌ಎಲ್ ಕಾರ್ಯನಿರ್ವಾಹಕ ಎಂಜಿನಿಯರ್‌ಗಳು ಸೇರಿದಂತೆ ಎಂಜಿನಿಯರ್ಸ್ ಸಂಸ್ಥೆಯ ಪದಾಧಿಕಾರಿಗಳು, ನಾಗರಿಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಡಾ.ಪವನ್‌ಕುಮಾರ್ ಯಮ್ನಿ ಸ್ವಾಗತಿಸಿದರು. ಡಾ.ರೂಪ ಕಾರ್ಯಕ್ರಮ ನಿರೂಪಿಸಿದರು. ಅನುಷಾ ಪ್ರಾರ್ಧಿಸಿದರು. ಡಾ.ಎನ್.ಚಕ್ರವರ್ತಿ ವಂದಿಸಿದರು.








