‘ಬಾಬರಿ ಮಸೀದಿ ನಿರ್ಮಾಣಕ್ಕೆ ಸಾರ್ವಜನಿಕ ಹಣ” : ಏನಿದು ಹೊಸ ಬಾಂಬ್‌

ದೆಹಲಿ:

    ಭಾರತದ ಮೊದಲ ಪ್ರಧಾನ ಮಂತ್ರಿ ಜವಾಹರಲಾಲ್ ನೆಹರೂ ಬಾಬರಿ ಮಸೀದಿ ನಿರ್ಮಾಣಕ್ಕೆ ಸಾರ್ವಜನಿಕ ನಿಧಿ ಬಳಸಲು ಬಯಸಿದ್ದರು, ಆದರೆ ಸರ್ದಾರ್ ವಲ್ಲಭಭಾಯಿ ಪಟೇಲ್ ತೀವ್ರವಾಗಿ ವಿರೋಧಿಸಿ ತಡೆದಿದ್ದರು ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.

    ಗುಜರಾತಿನ ವಡೋದರ ಹತ್ತಿರದ ಸಾಧ್ಲಿ ಗ್ರಾಮದಲ್ಲಿ ಸರ್ದಾರ್ ಪಟೇಲ್ 150ನೇ ಜಯಂತ್ಯೋತ್ಸವದ ‘ಯುನಿಟಿ ಮಾರ್ಚ್’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪಟೇಲ್ ನಿಜವಾದ ಸೆಕ್ಯುಲರ್ ನಾಯಕರಾಗಿದ್ದರು, ಯಾರನ್ನೂ ತೃಪ್ತಿಪಡಿಸುವ ರಾಜಕೀಯ ಮಾಡದೆ ಸಮಾನತೆಯ ಮೌಲ್ಯಗಳನ್ನು ಕಾಯ್ದುಕೊಂಡವರು ಎಂದು ಹೊಗಳಿದರು.

    ನೆಹರೂ ಸಾರ್ವಜನಿಕ ಹಣದಿಂದ ಅಯೋಧ್ಯೆಯಲ್ಲಿ ಬಾಬರಿ ಮಸೀದಿ ನಿರ್ಮಿಸಲು ಬಯಸಿದ್ದರು. ಆದರೆ ಇದಕ್ಕೆ ಮೊದಲಿಗರಾಗಿ ಪಟೇಲ್ ವಿರೋಧ ವ್ಯಕ್ತಪಡಿಸಿದರು. ಅವರು ಆ ಯೋಜನೆ ಜಾರಿ ಆಗದಂತೆ ತಡೆದಿದ್ದರು, ಎಂದು ಸಿಂಗ್ ಹೇಳಿದ್ದಾರೆ.

    ಗುಜರಾತ್‌ನ ಸೋಮನಾಥ ದೇವಾಲಯದ ಪುನಃಸ್ಥಾಪನೆಯ ವಿಷಯವನ್ನು ನೆಹರು ಎತ್ತಿದಾಗ, ದೇವಾಲಯದ ನವೀಕರಣಕ್ಕೆ ಬೇಕಾದ 30 ಲಕ್ಷ ರೂ.ಗಳನ್ನು ಸಾಮಾನ್ಯ ಜನರು ದಾನ ಮಾಡಿದ ಹಣದಿಂದ ಪುನರ್ ಸ್ಥಾಪಿಸಲಾಯಿತು. ಅದರ ನಿರ್ಮಾಣಕ್ಕೆ ಸರ್ಕಾರದ ಹಣವಲ್ಲ, ಸಾರ್ವಜನಿಕ ದೇಣಿಗೆಗಳನ್ನು ಮಾತ್ರ ಬಳಸಲಾಗಿತ್ತು, ಇದೇ ರೀತಿಯಲ್ಲಿ ಅಯೋಧ್ಯೆಯ ರಾಮ ಮಂದಿರಕ್ಕೂ ಯಾವುದೇ ಸರ್ಕಾರಿ ಹಣ ಕೊಡಲಾಗಿಲ್ಲ ಎಂದು ಹೇಳಿದರು. ಇದು ನಿಜವಾದ ಸೆಕ್ಯುಲರಿಸಂ, ಎಂದು ಅವರು ಅಭಿಪ್ರಾಯಪಟ್ಟರು.

Recent Articles

spot_img

Related Stories

Share via
Copy link