ತಾಲೂಕು ಕುರುಬರ ಸಂಘದ ಅಧ್ಯಕ್ಷರಾಗಿ ಕುಡುಗಾನಹಳ್ಳಿ ರಂಗಯ್ಯ ಆಯ್ಕೆ

ಕೊರಟಗೆರೆ :-

     ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪರಮಾಪ್ತರಲ್ಲಿ ಒಬ್ಬರೆಂದು ಗುರುತಿಸಿಕೊಂಡಿದ್ದ ಕೊರಟಗೆರೆ ತಾಲೂಕ ಅಧ್ಯಕ್ಷರಾದ ಮೈಲಾರಪ್ಪನವರ ಅಕಾಲಿಕ ಮರಣದಿಂದ ತೆರವಾದಂತ ಸ್ಥಾನಕ್ಕೆ ಹಾಲಿ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದ ಕುಡಗಾನಹಳ್ಳಿ ರಂಗಯ್ಯನವರನ್ನ ನೂತನ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ.

     ಕೊರಟಿಗೆರೆ ಪಟ್ಟಣದ ಬೈಲಾಂಜನೇಯ ಸ್ವಾಮಿ ದೇವಸ್ಥಾನದ ಮುಂಭಾಗ ಕನಕ ಭವನದ ಬಳಿ 26 ಜನ ಸದಸ್ಯರು ಸರ್ವಾನುಮತದಿಂದ ಆಲಿ ಉಪಾಧ್ಯಕ್ಷರಾದ ಕುರುಡಗಾನಹಳ್ಳಿ ರಂಗಯ್ಯನವರನ್ನ ಆಯ್ಕೆ ಮಾಡಲಾಗಿದೆ. 

    ಕೊರಟಗೆರೆ ತಾಲೂಕು ಕುರುಬ ಸಂಘದ ಅಧ್ಯಕ್ಷರಾಗಿದ್ದ ಮೈಲಾರಪ್ಪನವರ ಅಕಾಲಿಕ ಮರಣದಿಂದ ತೆರವಾಗಿದ್ದ ಸ್ಥಾನಕ್ಕೆ ಭಾನುವಾರ ಆಯ್ಕೆ ಪ್ರಕ್ರಿಯೆ ಜರಗಿ 39 ಸದಸ್ಯ ಬಲವಿರುವ ತಾಲೂಕು ಕುರುಬ ಸಂಘದಲ್ಲಿ 29 ಜನ ಒಂದು ಕಡೆ ಸೇರಿ ಸರ್ವಾನುಮತದಿಂದ ಆಯ್ಕೆ ಪ್ರಕ್ರಿಯೆ ನಡೆಸಿದ್ದಾರೆ.

     ನೂತನ ಅಧ್ಯಕ್ಷರಾದ ಕುರುಡಗಾನಹಳ್ಳಿ ರಂಗಯ್ಯ ಮಾತನಾಡಿ ತಾಲೂಕು ಕುರುಬ ಸಂಘಕ್ಕೆ ಈ ಹಿಂದಿನ ಅಧ್ಯಕ್ಷರಾದ ಮೈಲಾರಪ್ಪ 2 ಎಕ್ರೆ ಜಮೀನು ತಂದಿದ್ದು, ಮೂರ್ನಾಲ್ಕು ಕೋಟಿ ರೂಪಾಯಿ ಅಂದಾಜು ಮೊತ್ತದಲ್ಲಿ ಬಹು ದೊಡ್ಡ ಮಟ್ಟದ ಭವನ ನಿರ್ಮಾಣ ಕಾರ್ಯ ಪೂರ್ಣಗೊಳಿಸುವ ಮಹದಾಸೆ ಹೊಂದಿದ್ದು , ಹಿರಿಯರ ಮಾರ್ಗದರ್ಶನದಲ್ಲಿ ಹಿರಿಯರು ಹಾಗೂ ಕಿರಿಯರ ಸಹಕಾರದೊಂದಿಗೆ ಕನಕ ಭವನ ಪೂರ್ಣಗೊಳಿಸುವುದರ ಜೊತೆ ಜೊತೆಯಲ್ಲಿ ಸಮಾಜದ ಅಭಿವೃದ್ಧಿಗೆ ಎಷ್ಟು ಒತ್ತು ಕೊಡುವುದಾಗಿ ಅಭಿಪ್ರಾಯ ವ್ಯಕ್ತಪಡಿಸಿದರು, 

     ತಾಲೂಕು ಪ್ರಭಾಸ ಸಂಘದ ಗೌರವಾಧ್ಯಕ್ಷರಾದಂತ ಲಾರಿ ಮಲ್ಲಯ್ಯ ಮಾತನಾಡಿ ತಾಲೂಕು ಕುರುಬ ಸಂಘದ ಹಾಲಿ ಅಧ್ಯಕ್ಷ ಮೈಲಾರಪ್ಪ ಇತ್ತೀಚಿಗೆ ಮರಣ ಹೊಂದಿದ್ದು ಆ ಹುದ್ದೆಗೆ ಹಿರಿತನ ಸೇರಿದಂತೆ ಮೈಲಾರಪ್ಪನವರ ಜೊತೆ ಜೊತೆಯಲ್ಲಿ ಜಮೀನು ಮಂಜೂರು ಮಾಡುವ ಸಂದರ್ಭದಲ್ಲಿ ಅವಿರತ ಶ್ರಮವಹಿಸಿದ್ದು , ಮುಂದಿನ ದಿನಗಳಲ್ಲಿ ಕನಕ ಭವನ ಸಹ ಪೂರ್ಣಗೊಳಿಸುವಂತಹ ವಿಶ್ವಾಸ ನಮ್ಮಲ್ಲಿದೆ ಈ ವಿಚಾರದಲ್ಲಿ ನೂತನವಾಗಿ ಅಧ್ಯಕ್ಷರಾಗಿ ಆಯ್ಕೆಯಾದ ಹುಡುಗನಹಳ್ಳಿ ರಂಗಯ್ಯ ಹೆಚ್ಚು ಆಸಕ್ತಿ ತಾಳಿ ಪೂರ್ಣಗೊಳಿಸಬೇಕು ಎಂದರು.

     ತಾಲೂಕು ಕುರುಬ ಸಂಘದ ಪ್ರಧಾನ ಕಾರ್ಯದರ್ಶಿಯಾದ ರಂಗಶಾಮಯ್ಯ ಮಾತನಾಡಿ ಸಮಾಜದ ಅಭಿವೃದ್ಧಿಗೆ ಈ ಹಿಂದೆ ರಂಗಣ್ಣನವರ ಕೊಡುಗೆ ಅಪಾರವಾಗಿದ್ದು , ಮುಂದಿನ ದಿನಗಳಲ್ಲಿ ಕನಕ ಭವನ ಪೂರ್ಣಗೊಳಿಸುವ ವಿಚಾರದಲ್ಲಿ ಸೇರಿದಂತೆ ಸಮಾಜದ ಶೈಕ್ಷಣಿಕ ಶ್ರೇಯೋಭಿವೃದ್ಧಿಗೆ ಹೆಚ್ಚು ಶ್ರಮವಿಸ್ಬೇಕು, ಸಮಾಜದ ಕಟ್ಟ ಕಡೆಯ ವ್ಯಕ್ತಿನ್ನೂ ಗುರುತಿಸಿ ಆತ್ಮಸ್ಥೈರ್ಯ ತುಂಬುವುದರ ಜೊತೆಗೆ ಸಮಾಜದ ಅಭಿವೃದ್ಧಿಗೆ ಎಷ್ಟು ಶ್ರಮಿಸುವಂತಾಗಬೇಕು ಎಂದರು.

     ಸಮಾಜದ ಮುಖಂಡರಾದಂತ ಗಂಗರಂಗಯ್ಯ ಮಾತನಾಡಿ ಅಧ್ಯಕ್ಷರಾದವರು ಸಮಾಜದ ಶ್ರೇಯ ಅಭಿವೃದ್ಧಿಗೆ ಹೆಚ್ಚು ಶ್ರಮಿಸಬೇಕು ಈ ಕೆಲಸ ನೂತನ ಅಧ್ಯಕ್ಷರಾದ ರಂಗಯ್ಯನವರಿಂದ ಸಾಧ್ಯ ಎಂಬ ಮನಸ್ಥಿತಿಯಿಂದ ಎಲ್ಲರೂ ಒಗ್ಗೂಡಿ ನೂತನವಾಗಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ , ಇವರ ಆಯ್ಕೆ ಪ್ರಕ್ರಿಯೆ ಹಿಂದೆ ಹಿರಿತನ ಹಾಗೂ ಈ ಹಿಂದೆ ಸಮಾಜಕ್ಕೆ ಹೆಚ್ಚು ತೊಡಗಿಸಿಕೊಂಡಿದ್ದರಿಂದ 39 ಸದಸ್ಯರಲ್ಲಿ 29 ಸದಸ್ಯರು ಸರ್ವಾನು ಮತದಿಂದ ಆಯ್ಕೆ ಮಾಡಿದ್ದಾರೆ ತಾಲೂಕ ಅಧ್ಯಕ್ಷರ ಜವಾಬ್ದಾರಿ ಅರಿತು ಸಮಾಜದ ಶ್ರೇಯ ಅಭಿವೃದ್ಧಿಗೆ ಹೆಚ್ಚು ಶ್ರಮವಿಸಬೇಕು ಎಂದರು.

      ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶೀ ಟಿ ಡಿ ರಂಗಶಾಮಯ್ಯ, ಖಜಾಂಚಿ ಚಿಕ್ಕ ಹನುಮಯ್ಯ, ಉಪಾಧ್ಯಕ್ಷ ಮಲ್ಲಿಕಾರ್ಜುನ ನಿರ್ದೇಶಕರುಗಳಾದ ಹನುಮಂತರಾಯಪ್ಪ, ರಂಗಧಾಮಯ್ಯ, ಗೋವಿಂದರಾಜು, ಸಿದ್ದಲಿಂಗಪ್ಪ, ಚಿಕ್ಕ ನಾಗಪ್ಪ, ಕೆಂಚಪ್ಪ ,ಮುದ್ದಣ್ಣ, ಸಿದ್ದಪ್ಪ, ಹರೇ ಚಂದ್ರಪ್ಪ ,ಡಿ ರಂಗಯ್ಯ, ರಾಮಕೃಷ್ಣಯ್ಯ ತಿಮ್ಮರಾಜು ‌‌, ಗೋವಿಂದರಾಜು, ನಾಗರಾಜ, ರಂಗನಾಥ , ವಿಜಯನರಸಿಂಹ, ರಂಗಸ್ವಾಮಯ್ಯ, ರಂಗನಾಥ ಕೆ ಎಂ, ಕೆಂಪ ರಂಗಯ್ಯ, ವೀರಭದ್ರಯ್ಯ, ತಿಮ್ಮರಾಜು ಬೇಕರಿ, ತಿಮ್ಮರಾಜು ಕನಕ ಫ್ಯಾಷನ್ , ವೇಣುಗೋಪಾಲ್ ಮುಖಂಡರಾದ ನಾರಾಯಣಪ್ಪ, ಗಂಗರಾಜು, ದೇವರಾಜು, ನಟರಾಜು, ರಾಮ್ ಮೂರ್ತಿ, ರವಿ (ಕೊಬ್ಬರಿ) ಲಕ್ಷ್ಮಪ್ರಸಾದ್, ಶಿವ, ನಂಜುಂಡಯ್ಯ, ಲಕ್ಷ್ಮಣ್, ಕಾಮರಾಜು ಗುಂಡನಪಾಳ್ಯ ಚಿತ್ರ ಎಲ್ರಂಗಯ್ಯ, ಈಶ್ವರಪ್ಪ, ರಾಜಣ್ಣ ಎಲ್ಐಸಿ ಸೇರಿದಂತೆ ಹಲವರು ಹಾಜರಿದ್ದರು.

Recent Articles

spot_img

Related Stories

Share via
Copy link