ಹೊಳವನಹಳ್ಳಿ : ಕೃಷಿ ಇಲಾಖೆಯ ಗೋಡನ್ನಲ್ಲಿ ಶೇಖರಿಸಬೇಕಾದ ಕೃಷಿ ಉಪಕರಣಗಳು ಖಾಸಗಿ ಗೋಡನ್ನಲ್ಲಿ

ಕೊರಟಗೆರೆ:-

    ರೈತರ ಅಭಿವೃದ್ಧಿಗಾಗಿ ಕೋಟ್ಯಾಂತರ ರೂಪಾಯಿ ಹಣ ಸರ್ಕಾರದಿಂದ ಅನುದಾನ ಬಿಡುಗಡೆಗೊಳಿಸುತ್ತಿದ್ದರೂ ಸಹ ಅಧಿಕಾರಗಳ ಹಣದಾಹಕ್ಕೆ ಯೋಜನೆಗಳು ಲೋಪ ಗೊಳ್ಳುತ್ತಿದ್ದು ಇದಕ್ಕೆ ತಾಜಾ ಉದಾಹರಣೆ ಎಂಬುವಂತೆ ಹೊಳವನಹಳ್ಳಿ ಕೃಷಿ ಇಲಾಖೆಯ ಗೋಡನ್ನಲ್ಲಿ ಶೇಖರಿಸಬೇಕಾದ ಕೃಷಿ ಉಪಕರಣಗಳು ಖಾಸಗಿ ಗೋಡನ್ನಲ್ಲಿ ಶೇಖರಣೆ ಗೊಳ್ಳುತ್ತಿರುವುದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ .

    ಕೊರಟಗೆರೆ ತಾಲೂಕಿನ ಕೃಷಿ ಇಲಾಖೆಯ ಉಪ ಕೇಂದ್ರ ಹೊಳವನಹಳ್ಳಿ ಕೃಷಿ ಇಲಾಖೆಯಲ್ಲಿ ರೈತರ ಬಳಕೆಗಾಗಿ ನೀಡಲಾದ ಸ್ಪಿಂಕ್ಲರ್ ಇದ್ದರೂ ಸಹ ಖಾಸಗಿ ಗೋಡನ್ ನಲ್ಲಿ ಶೇಖರಿಸಿರುವುದು ಅಧಿಕಾರಿಗಳ ಹಣದಾಹಕ್ಕೆ ಹಿಡಿದ ಕೈಗನ್ನಡಿ ಎನ್ನುವಂತೆ ಆಗಿದೆ ಎಂದು ಕೆಲವು ರೈತರುಗಳು ಆರೋಪಿಸುತ್ತಿದ್ದಾರೆ.

ಹೊಳವನಹಳ್ಳಿ ಹೋಬಳಿ ಕೇಂದ್ರ ಕೃಷಿ ಚಟುವಟಿಕೆಗಳಿಗೆ ಹೆಚ್ಚು ಪ್ರಶಸ್ತಿ ವದಂತ ಪ್ರದೇಶವಾಗಿದ್ದು, ಕೃಷಿ ಉತ್ಪನ್ನಗಳ ಬಳಕೆ ಹೆಚ್ಚಾಗಿರುವ ಕಾರಣ ಬ್ಯಾರೆ ಹೋಬಳಿ ಕೇಂದ್ರಗಳಿಗೆ ಹೋಲಿಸಿದರೆ ಹೊಳವನಹಳ್ಳಿ ಕೃಷಿ ಇಲಾಖೆಯಲ್ಲಿ ಕೃಷಿ ಚಟುವಟಿಕೆಗಳ ಉಪಕರಣಗಳು ಹೆಚ್ಚು ಬಳಕೆಯಾಗುತ್ತಿದ್ದು ಇದನ್ನೇ ಬಂಡವಾಳ ಮಾಡಿಕೊಂಡ ಅಧಿಕಾರಿ ವರ್ಗ ಖಾಸಗಿ ಗೊಡನ್ ಸೇರಿದಂತೆ ಇನ್ನಿತರ ಕೃಷಿ ಇಲಾಖೆಗೆ ಸಂಬಂಧಿಸಿದ ಸೌಲತ್ತುಗಳ ವಿತರಣೆಯಲ್ಲಿ ಬಹಳಷ್ಟು ಲೋಪವಗುತ್ತಿದ್ದು , ರೈತರಿಗೆ ಒದಗಿಸಬೇಕಾದಂತ ಸೌಲತ್ತುಗಳನ್ನ ಹೆಚ್ಚಿನ ಹಣಕ್ಕೆ ಮಾರಿಕೊಳ್ಳುತ್ತಿದ್ದಾರೆ ಎಂಬ ಆರೋಪ ರೈತರಲ್ಲಿ ರೈತರಿಂದ ಕೇಳಿ ಬರುತ್ತಿದೆ.

ಹೊಳವನಹಳ್ಳಿ ಕೃಷಿ ಇಲಾಖೆಗೆ ಬರುವಂತ ಬಹಳಷ್ಟು ರೈತರಿಗೆ ಸರ್ಕಾರದಿಂದ ಬರುವಂತಹ ಸೌಲತ್ತುಗಳನ್ನ ವಿತರಿಸಲು ಮೀನಾ ಮೇಷ ಹೇಳಿಸುವುದಲ್ಲದೆ, ಅನಾವಶ್ಯಕವಾಗಿ ದಾಖಲಾತಿ ಸೇರಿದಂತೆ ಇನ್ನಿತರ ವಿಚಾರಕ್ಕೆ ಕಚೇರಿಗೆ ಆಲೆಸಿಕೊಳ್ಳುತ್ತಿದ್ದಾರೆ, ರೈತರು ಕಚೇರಿಗೆ ಬಿತ್ತನೆ ಬೀಜ ಸೇರಿದಂತೆ ಸರ್ಕಾರಿ ಸೌಲತ್ತುಗಳ ಬಳಕೆಗೆ ಅನಾವಶ್ಯಕವಾಗಿ ಕಚೇರಿ ಸುತ್ತುವಂತಾಗಿದೆ ಎಂದು ಕೆಲವೊಂದು ರೈತರು ಕೃಷಿ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

Recent Articles

spot_img

Related Stories

Share via
Copy link