ʻಕೊರಗಜ್ಜʼ ಚಿತ್ರಕ್ಕಾಗಿ ಸೃಷ್ಟಿಯಾಯ್ತು AI ಸಾಂಗ್;‌ ಲಿಯೋನೆಲ್ ಮೆಸ್ಸಿಗೂ ಈ ಹಾಡಿಗೂ ಇದೇ ಒಂದು ಸಂಬಂಧ!

ಬೆಂಗಳೂರು :

    ಸುಧೀರ್ ಅತ್ತಾವರ್ ನಿರ್ದೇಶನದ ಬಹುನಿರೀಕ್ಷಿತ ʻಕೊರಗಜ್ಜʼ ಚಿತ್ರದ ಬಗ್ಗೆ ಹೊಸ ಹೊಸ ಅಪ್ಡೇಟ್ಸ್‌ ಹೊರಬೀಳುತ್ತಲೇ ಇವೆ. ಈ ನಡುವೆ ಕೊರಗಜ್ಜ ಚಿತ್ರದ ಎರಡನೆಯ ಹಾಡನ್ನು ಶೀಘ್ರದಲ್ಲೇ ರಿಲೀಸ್‌ ಮಾಡಲು ಚಿತ್ರತಂಡ ಪ್ಲ್ಯಾನ್‌ ಮಾಡಿಕೊಂಡಿದೆ. ಇದನ್ನು ಖ್ಯಾತ ಗಾಯಕಿ ಶ್ರೇಯಾ ಘೋಷಾಲ್‌ ಹಾಡಿರುವುದು ವಿಶೇಷ. ಇನ್ನೇನು ಹಾಡನ್ನು ಬಿಡುಗಡೆ ಮಾಡಲು ಕ್ಷಣಗಣನೆ ಇರುವಾಗ ಚಿತ್ರತಂಡ ಮತ್ತೊಂದು ಸೀಕ್ರೆಟ್ ಹೊರಹಾಕಿದೆ.

    ವಿಶ್ವದ ಅತ್ಯಂತ ಶ್ರೇಷ್ಠ ಮತ್ತು ಪ್ರಸಿದ್ಧ ಅಂತಾರಾಷ್ಟ್ರೀಯ ಫುಟ್‌ಬಾಲ್ ತಾರೆ ಅರ್ಜೆಂಟೀನಾದ ಲಿಯೋನೆಲ್ ಮೆಸ್ಸಿ ಅವರು ತಮ್ಮ GOAT India Tour ಭಾಗವಾಗಿ ಭಾರತದ ಕೋಲ್ಕತ್ತಾ, ದೆಹಲಿ ಸೇರಿದಂತೆ ಪ್ರಮುಖ ನಗರಗಳಿಗೆ ಈಚೆಗೆ ಭೇಟಿ ನೀಡಿದ್ದರು. ಈ ವೇಳೆ ʻಮೈದಾನಂ ಮೀದಾ… ಒಕ್ಕ ವೀರುಡು..ʼ ಎಂಬ ಎಐ ಹಾಡನ್ನು ರೆಡಿ ಮಾಡಲಾಗಿತ್ತು. ಇದು ದೊಡ್ಡ ಸದ್ದು ಮಾಡಿತ್ತು. ಇದೀಗ ಆ ಹಾಡನ ಹಿಂದಿನ ಕ್ರಿಯೆಟಿವ್ ರೂವಾರಿಗಳೇ ಈಗ “ಕೊರಗಜ್ಜ” ಚಿತ್ರಕ್ಕೆ ಶ್ರೇಯಾ ಘೋಷಾಲ್ ಮತ್ತು ಅರ್ಮನ್ ಮಲಿಕ್ ಹಾಡಿದ್ದ ಹಾಡನ್ನು‌ ‘ಆರ್ಟಿಫಿಷಿಯಲ್ ಇಂಟೆಲಿಜೆನ್ಸ್’ ತಂತ್ರಜ್ಞಾನದಿಂದ ವಿನೂತನವಾಗಿ ವಿನ್ಯಾಸಗೊಳಿಸಿದ್ದಾರೆ. 

   ಸುಧೀರ್ ಅತ್ತಾವರ್ ಬರೆದಿರುವ “ಗಾಳಿ ಗಂಧ ತೀಡಿ ತಂದ” ಹಾಡಿಗೆ ದಕ್ಷಿಣ ಭಾರತದ ಖ್ಯಾತ ಸಂಗೀತ ಸಂಯೋಜಕ ಗೋಪಿ ಸುಂದರ್ ಮೆಲೋಡಿಯಸ್ ಆಗಿ ಕಂಪೋಸ್ ಮಾಡಿದ್ದಾರೆ. ಅತೀ ವಿನೂತನ ಸ್ಟ್ರಿಂಗ್ಸ್ ಮತ್ತು ವಾದ್ಯಗಳಿಂದ ಟ್ಯೂನ್ ಮಾಡಿರುವ ಎರಡನೇ ಹಾಡು ಹೊಸ ಹವಾ ಎಬ್ಬಿಸಲಿದೆ ಎಂಬುದು ಚಿತ್ರತಂಡ ವಿಶ್ವಾಸ. ಹಾಡಿನ ಟ್ರ್ಯಾಕ್ ಕೇಳಿದ ಕೂಡಲೇ ಶ್ರೆಯಾ ಘೋಷಾಲ್ ಹಾಡಲು ಒಪ್ಪಿಕೊಂಡದ್ದು‌, ಈ ಹಾಡಿನ ಬಗ್ಗೆ ಕುತೂಹಲ ಹೆಚ್ಚಿಸಿದೆ. ಇತ್ತೀಚೆಗೆ ಹಾಡಿನ ಸಾಹಿತ್ಯವನ್ನು ಬಿಡುಗಡೆ ಗೊಳಿಸಿದ್ದ ಚಿತ್ರತಂಡ ಈಗ ಈ ಹಾಡಿನ‌ಲ್ಲಿ ಬರುವ ಮುಗ್ಧ ಪ್ರೇಮಿಗಳ ಸ್ಟನ್ನಿಂಗ್ ಸ್ಟಿಲ್ ನ್ನು ಬಿಡುಗಡೆಗೊಳಸಿ, ಚಿತ್ರಕ್ಕೆ ಹೊಸ ಆಯಾಮ‌‌ ಇರುವುದನ್ನು ತೋರಿಸಿದೆ. 

   “ಕೊರಗಜ್ಜ” ಚಿತ್ರದಲ್ಲಿ‌ ಪ್ರಣಯದ ಸನ್ನಿವೇಶವೇ ಎಂದು ಕೆಲವರು ಮೂಗು ಮುರಿಯಲೂ ಬಹುದು. ಆದರೆ ಎಲ್ಲದಕ್ಕೂ “ಕೊರಗಜ್ಜ” ಸಿನಿಮಾ ಬಿಡುಗಡೆಗೊಂಡ ನಂತರ ಉತ್ತರ ದೊರಕಲಿದೆ ಎಂಬುದು ಚಿತ್ರತಂಡ ಅಭಿಪ್ರಾಯ. ತ್ರಿವಿಕ್ರಮ‌ ಸಿನಿಮಾಸ್ ಮತ್ತು ಸಕ್ಸಸ್ ಫಿಲಂಸ್ ಬ್ಯಾನರ್ ಅಡಿಯಲ್ಲಿ ತ್ರಿವಿಕ್ರಮ ಅವರು ನಿರ್ಮಾಣ ಮಾಡಿದ್ದು, ವಿದ್ಯಾಧರ್ ಕಾರ್ಯಕಾರಿ ನಿರ್ಮಾಪಕರಾಗಿ ಕೆಲಸ ಮಾಡಿದ್ದಾರೆ.

Recent Articles

spot_img

Related Stories

Share via
Copy link