ಬುರ್ಖಾ ಧರಿಸದ ಕಾರಣಕ್ಕೆ ಕೊಲೆ ಪ್ರಕರಣ: ಮುಖ ಕಾಣುತ್ತೆ ಎಂದು ಆಧಾರ್, ರೇಷನ್ ಕಾರ್ಡ್ ನಲ್ಲಿ ಪತ್ನಿಯ ಹೆಸರೂ ಸೇರಿಸಲೂ ಬಿಡದ ಪತಿ

ಉತ್ತರಪ್ರದೇಶ: 

    ಪತ್ನಿ ಬುರ್ಖಾ  ಧರಿಸಲಿಲ್ಲ ಎನ್ನುವ ಕಾರಣಕ್ಕೆ ಆಕೆಯ ಜೊತೆಗೆ ಇಬ್ಬರು ಮಕ್ಕಳನ್ನು ಕೊಂದು  ಹಾಕಿರುವ ಘಟನೆ ಉತ್ತರ ಪ್ರದೇಶದಲ್ಲಿ  ನಡೆದಿದೆ. ಈ ಹಿಂದೆ ಆತ ಪತ್ನಿಯ ಮುಖ ಯಾರಿಗೂ ತೋರಿಸಬಾರದು ಎಂದು ಹೇಳಿ ಆಕೆಗೆ ಆಧಾರ್ ಕಾರ್ಡ್ ಗೆ ಅರ್ಜಿ ಹಾಕಲು ಕೂಡ ಬಿಟ್ಟಿರಲಿಲ್ಲ. ಮದುವೆ ಕಾರ್ಯಕ್ರಮಗಳಲ್ಲಿ ಅಡುಗೆ ಕಾರ್ಯಗಳನ್ನು ಮಾಡುತ್ತಿದ್ದ ಫಾರೂಕ್ ಎಂಬಾತ ತನ್ನ ಪತ್ನಿ ಬುರ್ಖಾ ಧರಿಸದೆ ಪೋಷಕರ ಮನೆಗೆ ಹೋಗಿದ್ದಾಳೆ ಎಂದು ತಿಳಿದು ಕೋಪಗೊಂಡು ಆಕೆಯನ್ನು ಕೊಂದೇ ಹಾಕಿದ್ದಾನೆ.

   ಉತ್ತರ ಪ್ರದೇಶದ ಶಾಮ್ಲಿಯಲ್ಲಿ ಫಾರೂಕ್ ಎಂಬಾತ ತನ್ನ ಪತ್ನಿ ಬುರ್ಖಾ ಧರಿಸದ ಕಾರಣಕ್ಕೆ ಕೊಂದು ಹಾಕಿದ್ದಾನೆ. ಈ ಹಿಂದೆ ಆತ ಆಕೆಯ ಫೋಟೋ ಕಾಣಿಸಬಾರದು ಎಂಬ ಕಾರಣಕ್ಕೆ ಆಧಾರ್‌ಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಿರಲಿಲ್ಲ. ಫಾರೂಕ್ ಪತ್ನಿ ತಾಹಿರಾ (32) ಮೃತರು. ತಾಹಿರಾ ಅವರು ಯಾವಾಗಲೂ ಬುರ್ಖಾ ಧರಿಸಬೇಕು ಎಂದು ಹೇಳಿದ್ದನು. ಅಲ್ಲದೇ ಆಧಾರ್ ಮತ್ತು ಪಡಿತರ ಚೀಟಿಯಂತಹ ಯಾವುದೇ ಗುರುತಿನ ದಾಖಲೆಯನ್ನು ಮಾಡಕೂಡದು. ಯಾಕೆಂದರೆ ಇವುಗಳಿಗೆ ಆಕೆ ಬುರ್ಖಾ ಇಲ್ಲದ ಫೋಟೋ ಕೊಡಬೇಕಿತ್ತು. 

   ಫಾರೂಕ್ ಮತ್ತು ತಾಹಿರಾ ದಂಪತಿಗೆ ಐದು ಮಂದಿ ಮಕ್ಕಳಿದ್ದರು. ಅಫ್ರೀನ್ (14), ಅಸ್ಮೀನ್ (10), ಸೆಹ್ರೀನ್ (7), ಬಿಲಾಲ್ (9) ಮತ್ತು ಅರ್ಷದ್ (5). ಪತ್ನಿಯನ್ನು ಕೊಂದ ಬಳಿಕ ಫಾರೂಕ್ ಅಫ್ರೀನ್ ಮೇಲೆ ಗುಂಡು ಹಾರಿಸಿ ಸೆಹ್ರೀನ್ ನ ಕತ್ತು ಹಿಸುಕಿ ಕೊಂದು ಹಾಕಿದ್ದಾನೆ.

   ಘಟನೆಯ ಕುರಿತು ಮಾಹಿತಿ ತಿಳಿದ ಪೊಲೀಸರು ಫಾರೂಕ್ ನನ್ನು ಬಂಧಿಸಿದ್ದಾರೆ. ಆತ ತನ್ನ ತಪ್ಪನ್ನು ಒಪ್ಪಿಕೊಂಡಿದ್ದು, ಕೊಲೆಗೆ ಆತ ಬಳಸಿರುವ ಪಿಸ್ತೂಲ್, ಏಳು ಖಾಲಿ ಗುಂಡುಗಳು ಮತ್ತು 10 ಕಾರ್ಟ್ರಿಡ್ಜ್‌ಗಳನ್ನು ವಶಕ್ಕೆ ಪಡೆದಿದ್ದಾರೆ.ಮದುವೆ ಕಾರ್ಯಕ್ರಮಗಳಲ್ಲಿ ಅಡುಗೆಯವನಾಗಿ ಕೆಲಸ ಮಾಡುತ್ತಿದ್ದ ಫಾರೂಕ್, ತನ್ನ ಹೆಂಡತಿ ಬುರ್ಖಾ ಧರಿಸದೆ ಪೋಷಕರ ಮನೆಗೆ ಹೋಗಿದ್ದಾಳೆಂದು ಎಂದು ತಿಳಿದು ಕೋಪಗೊಂಡು ಕೊಂದು ಹಾಕಿದ್ದನು.

   ಬಳಿಕ ಮನೆಗೆ ಅತಿಥಿಗಳು, ಮಾವ ಬಂದಿದ್ದು, ಅವರಿಗೆ ತನ್ನ ಹೆಂಡತಿಯನ್ನು ಭೇಟಿ ಮಾಡಲು ಅವಕಾಶ ನೀಡಲಿಲ್ಲ. ಹೀಗಾಗಿ ಘಟನೆ ನಡೆದು ವಾರಗಳ ಬಳಿಕ ತಾಹಿರಾ ಮತ್ತು ಅವಳ ಇಬ್ಬರು ಹೆಣ್ಣುಮಕ್ಕಳು ಕೊಲೆಯಾಗಿರುವುದು ಬೆಳಕಿಗೆ ಬಂದಿದೆ.ಫಾರೂಕ್ ತಂದೆ ದಾವೂದ್, ತಾಹಿರಾ ಮತ್ತು, ಮಕ್ಕಳ ಬಗ್ಗೆ ಹಲವು ಬಾರಿ ಕೇಳಿದ್ದನು. ಆದರೆ ಆತ ತಪ್ಪಿಸಿಕೊಳ್ಳುತ್ತಲೇ ಬಂದನು. ಆತ ಹೆಂಡತಿ ಮಕ್ಕಳೊಂದಿಗೆ ಶಾಮ್ಲಿಯಲ್ಲಿ ಬಾಡಿಗೆ ಮನೆಯಲ್ಲಿದ್ದುದರಿಂದ ನಮಗೆ ಘಟನೆಯ ಬಗ್ಗೆ ಮಾಹಿತಿ ಇರಲಿಲ್ಲ ಎಂದು ದಾವೂದ್ ಪೊಲೀಸರಿಗೆ ತಿಳಿಸಿದ್ದಾರೆ.

   ದಾವೂದ್ ಅವರೇ ಮಗ ಕೊಲೆ ಮಾಡಿರಬಹುದು ಎಂದು ಶಂಕಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಆತನನ್ನು ಬಂಧಿಸಿ ವಿಚಾರಣೆ ನಡೆಸಿದ ಪ್ರಕಾರ ಬೆಳಕಿಗೆ ಬಂದಿದೆ. ಹೆಂಡತಿ ಆಗಾಗ್ಗೆ ಮನೆಯ ವಿಷಯಗಳಿಗೆ ತನ್ನೊಂದಿಗೆ ಜಗಳ ಮಾಡುತ್ತಿದ್ದಳು. ಒಂದು ತಿಂಗಳ ಹಿಂದೆ ಆಕೆ ಬುರ್ಖಾ ಧರಿಸದೆ ಹೆತ್ತವರ ಮನೆಗೆ ಹೋಗಿದ್ದಳು. ಇದರಿಂದ ತನಗೆ ಅವಮಾನವಾಗಿದೆ ಎಂದು ಕೋಪಗೊಂಡ ಅವನು ಡಿಸೆಂಬರ್ 10ರಂದು ಮಧ್ಯರಾತ್ರಿ ಅಡುಗೆಮನೆಯಲ್ಲಿ ತಾಹಿರಾಳ ಮೇಲೆ ಗುಂಡು ಹಾರಿಸಿದನು. ಗುಂಡೇಟಿನ ಶಬ್ದದಿಂದ ಎಚ್ಚರಗೊಂಡ ಆತನ ಹಿರಿಯ ಮಗಳು ಅಫ್ರೀನ್ ಅಡುಗೆಮನೆಗೆ ಬಂದಾಗ ಅವನು ಅವಳ ಮೇಲೂ ಗುಂಡು ಹಾರಿಸಿದನು. ಸೆಹ್ರೀನ್ ಬಂದಾಗ ಆಕೆಯ ಕತ್ತು ಹಿಸುಕಿ ಕೊಂಡು ಹಾಕಿದನು. ಬಳಿಕ ಅವರ ಶವಗಳನ್ನು ಶೌಚಾಲಯಕ್ಕೆಂದು ಅಗೆದಿದ್ದ ಗುಂಡಿಯಲ್ಲಿ ಹೂತು ಹಾಕಿದ್ದನು. ಪೊಲೀಸರು ಶವಗಳನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಿಕೊಟ್ಟಿದ್ದಾರೆ.

Recent Articles

spot_img

Related Stories

Share via
Copy link