ಕೊರಟಗೆರೆ :-
ಸಂಕ್ರಾಂತಿ ಹಬ್ಬದ ಪ್ರಯುಕ್ತ ಡಿಸೆಂಬರ್ 31ರ ಬುಧವಾರ ಮಧ್ಯಾಹ್ನ 1 ಗಂಟೆಗೆ ಪಟ್ಟಣದ ಸರ್ಕಾರಿ ಜೂನಿಯರ್ ಕಾಲೇಜ್ ಮೈದಾನದಲ್ಲಿ ಪ್ರಗತಿ ಸಂಕ್ರಾಂತಿ ಸುಗ್ಗಿ-3 ತಾಲೂಕು ಮಟ್ಟದ ರಂಗೋಲಿ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದ್ದು, ಮಹಿಳೆಯರು ಹಾಗೂ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿಕೊಳ್ಳಲಾಗಿದೆ.
ಕಾರ್ಯಕ್ರಮ ಮಧ್ಯಾಹ್ನ 1 ಗಂಟೆಗೆ ಆಯೋಜನೆಗೊಳ್ಳಲಿದ್ದು, ರಂಗೋಲಿ ಸ್ಪರ್ಧೆಯ ಕೆಲವೊಂದು ನಿಬಂಧನೆಗಳ ಜೊತೆಯಲ್ಲಿ ವೇದಿಕೆ ಕಾರ್ಯಕ್ರಮದ ನಂತರ ರಂಗೋಲೆ ಸ್ಪರ್ಧೆ ಪ್ರಾರಂಭವಾಗಲಿದೆ, ರಂಗೋಲಿ ಸ್ಪರ್ಧೆಗೆ ನೊಂದಣಿ ಶುಲ್ಕ ಉಚಿತವಾಗಿ ಆಯೋಜಿಸಲಾಗಿದೆ , ಭಾಗವಹಿಸುವ ಪ್ರತಿಯೊಬ್ಬ ಸ್ಪರ್ಧಾಳಿಗೂ ಪ್ರಶಸ್ತಿ ಪತ್ರದ ಜೊತೆಗೆ ಮೊದಲು ಎರಡು ಹಾಗೂ ಮೂರನೇ ಬಹುಮಾನವನ್ನ ಘೋಷಿಸಲಾಗುವುದು, ಪ್ರತಿಫಾನ್ವಿತ ವಿದ್ಯಾರ್ಥಿಗಳು ಹಾಗೂ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಕೋರಿದೆ.








