ಮಧುಗಿರಿ:
ಪ್ರತಿ ಬುಧವಾರ ಶಂಕರ್ ಚಲನ ಚಿತ್ರ ಪ್ರದರ್ಶನ ಮಂದಿರದ ಮುಂಭಾಗದ ಲಾಲ್ ಬಹೂದ್ದೂರ್ ಶಾಸ್ರೀ ಮೈದಾನದಲ್ಲಿ ನಡೆಯುತ್ತಿದ್ದ ಸಂತೆಯ ಸ್ಥಳ ಬದಲಾದ ಹಿನ್ನೆಲೆಯಲ್ಲಿ ಮಾರಾಟಗಾರರು ಹಾಗೂ ಖರೀದಿದಾರರಿಂದ ಬರ್ಜರಿ ರೆಸ್ಪಾನ್ಸ್ ದೊರೆತಿದೆ.
ಜ.21 ರಿಂದ ಪ್ರತಿ ಬುಧವಾರದ ಸಂತೆಯನ್ನು ಸಾರ್ವಜನಿಕರ ಹಿತಾದೃಷ್ಟಿಯ ಹಿನ್ನೆಲೆಯಲ್ಲಿ ಪಟ್ಟಣದ ಗೌರಿಬಿದನೂರು ರಸ್ತೆಯ ಸಮೀಪ ಇರುವ ಕೃಷಿ ಮಾರುಕಟ್ಟೆ ಆವರಣದಲ್ಲಿ ತರಕಾರಿ ಹಾಗೂ ಮತ್ತಿತರ ಅಗತ್ಯ ವಸ್ತುಗಳ ಮಾರಾಟವು ಬರ್ಜರಿಯಿಂದ ಮಾರಾಟ ವಾಗುತ್ತಿದೆ. ಜತೆಯಲ್ಲಿ ಕುರಿ ಮೇಕೆ ಕೋಳಿ ಮಾರಾಟದ ಸಂತೆಯು ಬುಧವಾರಕ್ಕೆ ನಿಗಧಿಯಾಗಿದ್ದರಿಂದ ಇಂದೂ 600 ಕ್ಕೂ ಹೆಚ್ಚು ಕುರಿ ಮೇಕೆಗಳು ಮಾರಾಟವಾಗಿವೆ ಎಂದು ತಿಳಿದು ಬಂದಿದೆ.
ಈ ಹಿಂದೆ ಹಳೆಯ ಸಂತೆ ಮೈದಾನದಲ್ಲಿನ ಜಾಗವು ಬೀಕೊ ಎನ್ನುತ್ತಿದ್ದು ಡೂಂ ಲೈಟ್ ವೃತ್ತ,ಟಿವಿವಿ ಬಂಕ್ ವೃತ್ತಗಳಲ್ಲಿ ಜನರ ಓಡಾಟ ಸಾಮಾನ್ಯವಾಗಿತ್ತು.ಆದರೆ ಈ ಹಿಂದೆ ಜನ ಸಾಮಾನ್ಯರ ಹಾಗೂ ವಾಹನಗಳ ಓಡಾಟ ಬಹಳ ಕಷ್ಟಕರವಾಗಿತ್ತು ಇಂದೂ ಸುಗುಮ ಸಂಚಾರವನ್ನು ಈ ವೃತ್ತಗಳಲ್ಲಿ ಕಾಣಬಹುದಾಗಿದೆ.
ಬೃಹತ್ ಜಾಗ ಹೊಂದಿರುವ ಕೃಷಿ ಮಾರುಕಟ್ಟೆಯಲ್ಲಿನ ಸಂತೆಯಲ್ಲಿ ನೆರಳು,ನೀರು,ಶೌಚಾಲಯದ ವ್ಯವಸ್ಥೆ ಇದ್ದೂ ಜನರು ಉತ್ಸಾಹ ದಿಂದ ಅಗತ್ಯ ವಸ್ತುಗಳನ್ನು ಖರೀದಿ ಮಾಡಲು ಉತ್ಸಾಹ ತೋರಿದ್ದಾರೆ.ಸಿವಿಲ್,ಕೆಎಸ್ ಆರ್ ಟಿ ಸಿ ಬಸ್ ನಿಲ್ದಾಣದಿಂದ 50 ರೂ ಟಿವಿವಿ ಪೆಟ್ರೋಲ್ ಬಂಕ್ ನಿಂದ ಸೀಟ್ ಲೆಕ್ಕಾಚಾರದಲ್ಲಿ ಪ್ರತಿಯೊಬ್ಬರಿಗೆ 10 ರೂ ಹಾಗೂ ಪ್ರತ್ಯೇಕವಾಗಿ ಸಂತೆಗೆ ಆಟೋದಲ್ಲಿ ಹೋಗುವುದಾದರೆ 40 ರೂಗಳನ್ನು ಪಾವತಿಸಿ ಸಂತೆಯಲ್ಲಿ ತರಕಾರಿ ಮತ್ತಿತರರ ವಸ್ತುಗಳನ್ನು ಜನ ಸಾಮಾನ್ಯರು ಖರೀದಿ ಮಾಡಿದ ದೃಶ್ಯಗಳು ಕಂಡು ಬಂದಿವೆ.
ಒಟ್ಟಿನಲ್ಲಿ ವಾರದಿಂದ ವಾರಕ್ಕೆ ಈ ನೂತನವಾಗಿ ಸ್ಥಳಾಂತರಗೊಂಡ ಸಂತೆ ಬಗ್ಗೆ ಉತ್ತಮವಾದ ಅಭಿಪ್ರಾಯ ಗಳು ಜನರು ಹಾಗೂ ಮಾರಾಟಗಾರರಿಂದ ಕೇಳಿ ಬಂದಿದ್ದು ಶಾಸಕ ಕೆ.ಎನ್ ರಾಜಣ್ಣ ಮತ್ತು ವಿಧಾನ ಪರಿಷತ್ ಸದಸ್ಯ ರಾಜೇಂದ್ರ ರಾಜಣ್ಣ ಹಾಗೂ ಅಧಿಕಾರಿಗಳ ಕಾರ್ಯಕ್ಕೆ ಜನ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.








