
ಬೆAಗಳೂರು: ಪ್ರತಿಪಕ್ಷಗಳ ವಿರೋಧದ ಮಧ್ಯೆ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಇವಿಎಂ ಬದಲು ಮತಪತ್ರ ಬಳಕೆಗೆ ಅವಕಾಶ ನೀಡುವ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ತಿದ್ದುಪಡಿ) ವಿಧೇಯಕ ವಿಧಾನಸಭೆಯಲ್ಲಿ ಅಂಗೀಕಾರ ನೀಡಲಾಯಿತು.
ಸಚಿವ ಪ್ರಿಯಾಂಕ್ ಖರ್ಗೆ ಈ ವಿಧೇಯಕ ಪರ್ಯಾಯಲೋಚಿಸಿದರು. ಪ್ರತಿಪಕ್ಷಗಳ ತೀವ್ರ ವಿರೋಧದ ಮಧ್ಯೆ ಮಸೂದೆ ಅಂಗೀಕಾರವಾಯಿತು. ಪ್ರತಿಪಕ್ಷ ನಾಯಕ ಆರ್. ಅಶೋಕ್ ಮಸೂದೆ ಪ್ರತಿ ಹರಿದು ಹಾಕಿ ಸಭಾತ್ಯಾಗ ಮಾಡಿದರು. ಈ ತಿದ್ದುಪಡಿ ಮಸೂದೆ ಆಡಳಿತ ಪಕ್ಷ ಹಾಗೂ ಪ್ರತಿಪಕ್ಷಗಳ ವಾಕ್ಸಮರಕ್ಕೆ ಕಾರಣವಾಯಿತು. ಮಸೂದೆ ಬಗ್ಗೆ ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ, ಇವಿಎಂ ಮೇಲೆ ವಿಶ್ವಾಸ ಕಡಿಮೆಯಾಗುತ್ತಿದೆ. ಮಹಾರಾಷ್ಟç ವಿಧಾನಭೆ ಚುನಾವಣೆಯಲ್ಲಿ ಆಯೋಗದ ವರದಿಯಂತೆ ಸಂಜೆ ೫೮.೨೨% ಮತದಾನ ಆಗಿತ್ತು. ರಾತ್ರಿ ೧೧.೩೦ ಗಂಟೆಗೆ ೬೮.೦೨% ಆಗಿದೆ ಎಂದರು. ಅಂತಿಮ ವರದಿ ಬಂದಾಗ ಒಟ್ಟು ಮತದಾನ ೬೬.೦೫% ಆಗಿದೆ. ಅಂದರೆ ಐದು ಗಂಟೆಯಲ್ಲಿ ೫೦ ಲಕ್ಷ ಮತ ಸೇರ್ಪಡೆಯಾಗಿವೆ ಎಂದು ಆರೋಪಿಸಿದರು.
ಹರಿಯಾಣ ಮತ್ತು ಮಧ್ಯಪ್ರದೇಶದಲ್ಲಿ ಅದೇ ರೀತಿ ಆಗಿದೆ. ಹಲವಾರು ಸಂಸ್ಥೆಗಳು ಈ ಬಗ್ಗೆ ಪ್ರಶ್ನೆ ಮಾಡಿವೆ. ಆದರೆ, ಚುನಾವಣಾ ಅಯೋಗ ಈ ಬಗ್ಗೆ ಸಮರ್ಪಕ ಉತ್ತರ ನೀಡಿಲ್ಲ. ಈ ಮಸೂದೆಯಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಮತಪತ್ರದ ಮೂಲಕ ಮಾಡಲು ಈ ತಿದ್ದುಪಡಿ ತರುತ್ತಿದ್ದೇವೆ. ಮತಯಂತ್ರದ ಬದಲು ಮತಪತ್ರ ಬಳಕೆ ಮಾಡಲು ಈ ಮಸೂದೆ ತರಲಾಗುತ್ತಿದೆ. ಮಸೂದೆಯಲ್ಲಿ ೬ ಬದಲಾಣೆಗಳನ್ನು ತರಲಾಗುತ್ತಿದೆ ಎಂದರು.
ಶಿಲಾಯುಗಕ್ಕೆ ಕೊಂಡೊಯ್ಯುತ್ತಿದ್ದಾರೆ: ಪ್ರತಿಪಕ್ಷ ನಾಯಕ ಆರ್. ಅಶೋಕ್ ಮಾತನಾಡಿ, ತುಘಲಕ್ ದರ್ಬಾರ್ ಇದಾಗಿದೆ. ಇವಿಎಂ ತಂದವರು ಕಾಂಗ್ರೆಸ್ನವರೇ. ಅವರೇ ತಂದ ಇವಿಎಂನ್ನು ತೆಗೆದು ಹಾಕುತ್ತಿದ್ದಾರೆ. ರಾಜೀವ್ ಗಾಂಧಿ ಈ ಕಾಯ್ದೆ ತರುವಾಗ ವಿಸ್ತöÈತವಾಗಿ ಚರ್ಚೆ ಮಾಡಿ ಇದನ್ನು ಜಾರಿಗೆ ತಂದಿರುತ್ತಾರೆ. ಸುಪ್ರೀಂ ಕೋರ್ಟ್ ಈ ಇವಿಎಂನಲ್ಲೇ ಮತದಾನ ನಡೆಯಬೇಕು ಅಂದಿದೆ. ಕರ್ನಾಟಕದಲ್ಲಿ ಮತದಾನ ನಡೆಯುವಾಗ ಇವಿಎಂ ಸರಿ ಇತ್ತು. ತೆಲಂಗಾಣದಲ್ಲಿ ಇವಿಎಂ ಸರಿ ಇತ್ತು. ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತೆ ಪಲ್ಟಿ ಹೊಡೆಯಿತು. ಆಗ ಚರ್ಚೆ ಆರಂಭವಾಯಿತು. ನೀವೇ ಹಾಕಿರುವ ಎಸಿ, ತಹಶೀಲ್ದಾರ್, ಅಧಿಕಾರಿಗಳನ್ನು ನಿಯೋಜನೆ ಮಾಡಲಾಗುತ್ತದೆ. ಅವರ ಮೇಲೆನೇ ನಿಮಗೆ ನಂಬಿಕೆ ಇಲ್ಲ ಎಂದು ಕಿಡಿಕಾರಿದರು.








