ಚರಂಡಿ ಸ್ವಚ್ಛತೆ ಕಾಪಾಡುವಂತೆ ಒತ್ತಾಯ


ಪಟ್ಟನಾಯಕನಹಳ್ಳಿ: ತಾಲೂಕಿನ ನಾದೂರು ಗ್ರಾಪಂ ವ್ಯಾಪ್ತಿ ಪಟ್ಟನಾಯಕನಹಳ್ಳಿಯ ಶನೇಶ್ವರಸ್ವಾಮಿ ದೇವಸ್ಥಾನ ಸಮೀಪದ ಕಂದಾಯ ಇಲಾಖೆ ಕಛೇರಿಯ ಮುಖ್ಯ ರಸ್ತೆಯ ಚರಂಡಿ ಕಲುಷಿತ ನೀರು, ಖಾಲಿ ಬಾಟಲ್‌ಗಳು, ಕಸಕಡ್ಡಿಗಳಿಂದ ಕೂಡಿದ್ದು ಸದರಿ ಚರಂಡಿಯ ಸ್ವಚ್ಛತೆ ಕಾಪಾಡುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಕೆನರಾ ಬ್ಯಾಂಕ್ ಮುಂಭಾಗದ ರಸ್ತೆ ಇದಾಗಿದ್ದು ಸದರಿ ರಸ್ತೆ ಬದಿಯ ಚರಂಡಿಯಲ್ಲಿ ಕಸದಿಂದಾಗಿ ಕೊಚ್ಚೆ ನೀರು ಸರಾಗವಾಗಿ ಹರಿಯದೆ ಸಿಕ್ಕಿಕೊಂಡು ದುರ್ವಾಸನೆ ಬರುತ್ತಿದೆ. ಇದು ರೋಗರುಜಿನಗಳಿಗೆ ಕಾರಣವಾಗುವ ಮುನ್ನ ಗ್ರಾಪಂ ಅಧಿಕಾರಿಗಳು ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಪತ್ರಿಕೆಗಳಲ್ಲಿ ಭಾವಚಿತ್ರ ಸಮೇತ ಸಮಸ್ಯೆ ಬಗ್ಗೆ ಸುದ್ದಿ ಪ್ರಕಟಗೊಂಡಾಗ ಆ ಸ್ಥಳದಲ್ಲಿ ಮಾತ್ರ ಶುಚಿಗೊಳಿಸುವ ಗ್ರಾಪಂ ಅಧಿಕಾರಿಗಳು ನಂತರ ಗ್ರಾಮದ ಸ್ವಚ್ಛತೆಯ ಕಡೆ ಗಮನವನ್ನೇ ಕೊಡುವುದಿಲ್ಲ. ಕೂಡಲೇ ಇಡೀ ಗ್ರಾಮದ ಸ್ವಚ್ಛತೆ ಕಾಪಾಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

Recent Articles

spot_img

Related Stories

Share via
Copy link