ವಿಪಕ್ಷಗಳು ಎಂದಿಗೂ ಮಹಿಳಾ ಮೀಸಲಾತಿ ಬಯಸಲ್ಲ : ಕೇಂದ್ರ ಮಾಜಿ ಸಚಿವ ಅನುರಾಗ್ ಠಾಕೂರ್ ವಾಗ್ದಾಳಿ

ಬೆಂಗಳೂರು: ಕಾಂಗ್ರೆಸ್ ಎಂದಿಗೂ ಮಹಿಳಾ ಮೀಸಲಾತಿ ಬಯಸಲ್ಲ. ಕೇವಲ ಅವರ ಕುಟುಂಬದವರಿಗೆ ಮಾತ್ರ ಅಧಿಕಾರ ಬೇಕು ಎಂದು ಮಾಜಿ ಕೇಂದ್ರ ಸಚಿವ ಅನುರಾಗ್ ಠಾಕೂರ್ ವಾಗ್ದಾಳಿ ನಡೆಸಿದರು.

ಮಲ್ಲೇಶ್ವರಂ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಮಹಿಳೆಯರ ಬೆನ್ನಿಗೆ ಚೂರಿ ಹಾಕಿದ್ದು ಕಾಂಗ್ರೆಸ್ ಮತ್ತು ವಿಪಕ್ಷ. ಐದು ಬಾರಿ ಮಹಿಳಾ ಮೀಸಲಾತಿ ಬಿಲ್ ನಿಲ್ಲಿಸಿದ್ದಾರೆ. ಅವರಿಗೆ ನಾಚಿಕೆ ಆಗಬೇಕು. 2023ರಲ್ಲಿ ಚುನಾವಣೆ ಇದೆ ಎನ್ನುವ ಕಾರಣಕ್ಕೆ ಕಾಂಗ್ರೆಸ್ ಬಿಲ್ ಪರ ನಿಂತಿತು. ಈಗ ಅದೇ ಕಾಂಗ್ರೆಸ್ ಮಹಿಳೆಯರ ಬೆನ್ನಿಗೆ ಚೂರಿ ಹಾಕಿದೆ. ಇವರು ವಯನಾಡ್ ಅಥವಾ ಎಲ್ಲಿಯಾದರೂ ಹೋಗಿ ಸ್ಪರ್ಧೆ ಮಾಡಬಹುದು. ಬೇರೆ ಮಹಿಳೆಯರಿಗೆ ಈ ಅವಕಾಶವನ್ನು ಕಾಂಗ್ರೆಸ್ ಕೊಡಲ್ಲ ಎಂದು ಟೀಕಿಸಿದರು.

ದಕ್ಷಿಣ ಭಾರತದಲ್ಲಿ ನಷ್ಟವಾಗುತ್ತದೆ ಎಂದು ಸುದ್ದಿ ಹಬ್ಬಿಸಿದ್ರು. ಆದರೆ ಯಾವ ರಾಜ್ಯದವರಿಗೂ ನಷ್ಟವಾಗುವುದಿಲ್ಲ. ದೇಶದ ಯಾವುದೇ ರಾಜ್ಯಕ್ಕೆ ನಷ್ಟ ಆಗುತ್ತಿಲ್ಲ, ಲಾಭವೇ ಆಗುತ್ತಿತ್ತು. ಎಲ್ಲ ರಾಜ್ಯದ ಲೋಕಸಭಾ ಸೀಟ್ 50% ಹೆಚ್ಚಾಗುತ್ತಿತ್ತು. ಸ್ಟಾಲಿನ್ ಚೆನ್ನೆöÊನ ಬೀದಿಯಲ್ಲಿ ನಿಂತು ಜನರಿಗೆ ಸುಳ್ಳು ಹೇಳಿದ್ರು. ಕಾಂಗ್ರೆಸ್ ಮತ್ತವರ ಮಿತ್ರ ಪಕ್ಷಗಳದ್ದು ಪ್ರಜಾಪ್ರಭುತ್ವ ವಿರೋಧಿ, ಮಹಿಳಾ ವಿರೊಧಿ ನಡೆ. 1996ರಲ್ಲಿ ದೇವೇಗೌಡರು ಮಹಿಳಾ ಮೀಸಲಾತಿ ಮಸೂದೆ ಮಂಡಿಸಿದ್ರು. ಕಾಂಗ್ರೆಸ್ ಪಕ್ಷ ದೇವೇಗೌಡರ ಸರ್ಕಾರವನ್ನೇ ಬೀಳಿಸಿತು ಎಂದು ವಾಗ್ದಾಳಿ ನಡೆಸಿದರು.

ವಾಜಪೇಯಿ ಸರ್ಕಾರದಲ್ಲಿಯೂ ಮಂಡನೆ ಆಯ್ತು, ಕಾಂಗ್ರೆಸ್ ಬೆಂಬಲ ನೀಡಿಲ್ಲ. ಯುಪಿಎ ಸರ್ಕಾರಕ್ಕೆ ಬಿಜೆಪಿ ಸಂಪೂರ್ಣ ಬೆಂಬಲ ನೀಡಿತ್ತು. ರಾಜ್ಯಸಭೆಯಲ್ಲಿ ಮಸೂದೆ ಪಾಸ್ ಮಾಡಿದ್ರು. ಆದ್ರೆ ಲೋಕಸಭೆಯಲ್ಲಿ ಮಸೂದೆಯನ್ನ ಕಾಂಗ್ರೆಸ್ ಮಂಡಿಸಲೇ ಇಲ್ಲ. ಮಹಿಳೆಯರಿಗೆ ಅಧಿಕಾರ ಕೊಡಲು ಕಾಂಗ್ರೆಸ್ ಎಂದಿಗೂ ಸಿದ್ದವಿಲ್ಲ ಎಂದು ಆರೋಪಿಸಿದರು.

ಮುಸ್ಲಿಂ ಮಹಿಳೆಯರಿಗೆ ಮೀಸಲಾತಿ ಕೊಡಬೇಕು ಎನ್ನುತ್ತಾರೆ. ಧರ್ಮಾಧಾರಿತ ಮೀಸಲಾತಿ ಕೊಡಲು ಸಾಧ್ಯವಿಲ್ಲ. ಕಾಂಗ್ರೆಸ್, ಡಿಎಂಕೆ, ಸಮಾಜವಾದಿ ಪಾರ್ಟಿಗಳು ಮಹಿಳಾ ಮೀಸಲಾತಿ ವಿರೋಧಿಗಳು. ನೆಹರು, ರಾಜೀವ್, ಇಂದಿರಾ ಗಾಂಧಿ ಮೂವರೂ ಓಬಿಸಿ ಕಮ್ಯುನಿಟಿ ವಿರುದ್ಧವೇ ಇದ್ರು ದೂರಿದರು.

ಇದೇ ವೇಳೆ ಮಾತನಾಡಿದ ಸಂಸದ ತೇಜಸ್ವಿ ಸೂರ್ಯ, ಮಹಿಳಾ ಮೀಸಲಾತಿ ಮಸೂದೆ ಬಗ್ಗೆ 1992 ರಿಂದ ಚರ್ಚೆ ನಡೀತಿದೆ. ಇದರ ಬಗ್ಗೆ ಬಿಜೆಪಿಯ ನಿಲುವು ಆಗಿನಿಂದ ಒಂದೇ ಇದೆ. ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಆದಷ್ಟು ಬೇಗ ಕೊಡಬೇಕು ಅನ್ನೋದು ಬಿಜೆಪಿ ನಿಲುವು. ಯಾವಾಗೆಲ್ಲ ಲೋಕಸಭೆಯಲ್ಲಿ ಈ ಬಿಲ್ ಚರ್ಚೆಗೆ ಬಂದಿದೆಯೋ ಆಗೆಲ್ಲ ಬಿಜೆಪಿ ಬೆಂಬಲಿಸಿದೆ. ಕಾಂಗ್ರೆಸ್ 1992 ರಿಂದ ಇಲ್ಲಿವರೆಗೆ ಮಹಿಳಾ ಮೀಸಲಾತಿ ಬಿಲ್??ಗೆ ಹೇಗಾದರೂ ಮಾಡಿ ಸೋಲಿಸ್ತಾ ಬರ್ತಿದ್ದಾರೆ. ಲಾಲೂ ಪ್ರಸಾದ್ ಯಾದವ್, ಮುಲಾಯಂ ಸಿಂಗ್ ಯಾದವ್ ಮೂಲಕ ಈ ಬಿಲ್ ಸೋಲಿಸಿದ್ದರು ಎಂದು ಆರೋಪಿಸಿದರು.

ರಾಜ್ಯ ಬಿಜೆಪಿಯಿಂದ ಖಂಡನಾ ಸಭೆ:
ನಾರಿ ಶಕ್ತಿ ವಂದನ್ ಮಸೂದೆಗೆ ಲೋಕಸಭೆಯಲ್ಲಿ ಸೋಲು ಹಿನ್ನೆಲೆ ಬೆಂಗಳೂರಿನಲ್ಲಿ ಬಿಜೆಪಿ ವತಿಯಿಂದ ಸಬಲ ನಾರಿ – ಸಮರ್ಥ ಭಾರತ ಹೆಸರಿನಲ್ಲಿ ಖಂಡನಾ ಸಭೆ ಹಮ್ಮಿಕೊಂಡಿತು. ಸಭೆಯಲ್ಲಿ ಸಂಸದ ತೇಜಸ್ವಿ ಸೂರ್ಯ, ಶಾಸಕ ಸಿ.ಕೆ.ರಾಮಮೂರ್ತಿ, ಮಹಿಳಾ ಮೋರ್ಚಾ ಅಧ್ಯಕ್ಷೆ ಸಿ.ಮಂಜುಳಾ, ಮಾಜಿ ಪಾಲಿಕೆ ಸದಸ್ಯೆಯರು ಸೇರಿ ನೂರಾರು ಮಹಿಳೆಯರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

 

Recent Articles

spot_img

Related Stories

Share via
Copy link