ಕಾಲ್ ಸೆಂಟರ್​ಗಳ ಮೇಲೆ ಸೈಬರ್ ಕಮಾಂಡ್ ಕೇಂದ್ರದ ಅಧಿಕಾರಿಗಳು ದಾಳಿ : ಇಬ್ಬರ ಬಂಧನ

ಬೆಂಗಳೂರು: ಅಮೆರಿಕದ ಖ್ಯಾತ ಲೆಕ್ಕಪತ್ರ ಸಂಸ್ಥೆ ಕ್ವಿಕ್ ಬುಕ್ ಹೆಸರಿನಲ್ಲಿ ರಾಜಧಾನಿಯಲ್ಲಿ ಕಾಲ್ ಸೆಂಟರ್ ತೆರೆದು ಅಲ್ಲಿನ ನಾಗರಿಕರಿಗೆ ವಂಚಿಸುತ್ತಿದ್ದ ಜಾಲವನ್ನು ರಾಜ್ಯ ಸೈಬರ್ ಕಮಾಂಡ್ ಕೇಂದ್ರದ ಅಧಿಕಾರಿಗಳು ಬಯಲಿಗೆಳೆದಿದ್ದಾರೆ.

ಸೈಬರ್ ವಂಚನೆ ಭಾಗವಾಗಿ ವಿಶೇಷ ಕಾರ್ಯಾಚರಣೆ ವೇಳೆ ಮಾಹಿತಿ ಆಧರಿಸಿ ಬೆಂಗಳೂರಿನ ನಾಲ್ಕು ಕಡೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕಾಲ್ ಸೆಂಟರ್​ಗಳ ಮೇಲೆ ದಾಳಿ ಮಾಡಿರುವ ಅಧಿಕಾರಿಗಳು ಈ ಸಂಬಂಧ ದೆಹಲಿ ಮೂಲದ ಪ್ರಶಾಂತ್, ಉತ್ತರ ಪ್ರದೇಶ ಮೂಲದ ಆಕಾಶ್ ಎಂಬುವರನ್ನು ಬಂಧಿಸಲಾಗಿದೆ. ದಾಳಿ ವೇಳೆ ಡೇಟಾ ಸಂಗ್ರಹಿಸುವ 44 ಎಸ್ಎಸ್​ಡಿ ಡ್ರೈವ್​​, 2 ಮೊಬೈಲ್​, 2 ಲ್ಯಾಪ್​ ಟಾಪ್​, 9 ಸಿಪಿಯು ಸೇರಿದಂತೆ ಮಹತ್ವದ ಉಪಕರಣಗಳನನ್ನು ವಶಕ್ಕೆ ಪಡೆದು ಪರಿಶೀಲಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಉತ್ತರ ಭಾರತದ ಮೂಲದ ಇಬ್ಬರು ಆರೋಪಿಗಳು ಜೊತೆ ಇನ್ನಿಬ್ಬರು ಸೇರಿಕೊಂಡು ಕಳೆದ ನಾಲ್ಕು ವರ್ಷಗಳಿಂದ ಕಾಲ್ ಸೆಂಟರ್ ತೆರೆದಿದ್ದರು. ಕೋರಮಂಗಲ -2, ಚೂಡಸಂದ್ರ ಹಾಗೂ ಪರಪ್ಪನ ಅಗ್ರಹಾರದಲ್ಲಿ, ಖ್ಯಾತ ಲೆಕ್ಕಪತ್ರ ಕಂಪನಿ ಕ್ವಿಕ್ ಬುಕ್ ಹೆಸರು ಬಳಸಿಕೊಂಡು ದುರ್ಬಳಕೆ ಮಾಡಿಕೊಂಡಿದ್ದರು.

ನಕಲಿ ಕಾಲ್​​ ಸೆಂಟರ್​​ ಮೂಲಕ ಅಮೆರಿಕದ ನಾಗರಿಕರಿಗೆ ನಕಲಿ ತೆರಿಗೆ ಸಲಹ, ಪರವಾನಗಿ ನವೀಕರಣ, ಕೃತಕ ಲೈಸೆನ್ಸ್​ ಕೀ ಹಾಗೂ ಇನ್ನಿತರ ಸೇವೆಗಳನ್ನು ನೀಡುವುದಾಗಿ ಹೇಳಿ ಅವರಿಂದ ಶುಲ್ಕ ಪಡೆದು ವಂಚಿಸುತ್ತಿದ್ದರು. ಅಮೆರಿಕ ಅಧಿಕಾರಿಗಳ ಹೆಸರು ಹೋಲುವ ರೀತಿ ನಕಲಿ ಹೆಸರುಗಳನ್ನು ಬಳಸಿ ಅಲ್ಲಿನ ನಾಗರಿಕರಿಗೆ ನಂಬಿಸಿ ವಂಚಿಸುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ಧಾರೆ.

ನಗರದ ನಾಲ್ಕು ಕಾಲ್ ಸೆಂಟರ್​ಗಳಲ್ಲಿ ಸುಮಾರು 70ಕ್ಕಿಂತ ಹೆಚ್ಚು ಉದ್ಯೋಗಿಗಳು ಕೆಲಸ ಮಾಡುತ್ತಿದ್ದರು. ವಂಚನೆ ಎಸಗಿರುತ್ತಿರುವ ಬಗ್ಗೆ ಬಹುತೇಕ ಉದ್ಯೋಗಿಗಳಿಗೆ ತಿಳಿದಿರಲಿಲ್ಲ ಅಧಿಕಾರಿಗಳು ದಾಳಿ ನಡೆಸಿದಾಗ ನಕಲಿ ಕಾಲ್ ಸೆಂಟರ್ ವಿಚಾರ ಅರಿತು ಶಾಕ್ ಆಗಿದ್ಧಾರೆ. ಆರೋಪಿಗಳು ಸರ್ಕಲ್ ಸ್ವ್ಕೈಲ್ ಎಲ್​ಎಲ್​ಸಿ ಎಂಬ ಕಂಪನಿ ಸ್ಥಾಪಿಸಿ ಶೆಲ್ ಕಂಪನಿಗಳ ಮೂಲಕ ಅಮೆರಿಕದ ನಾಗರಿಕರಿಗೆ ವಂಚಿಸಿ ಲಕ್ಷಾಂತರ ರೂಪಾಯಿ ವರ್ಗಾಯಿಸಿದ್ದು, ಶಂಕೆಯಿದೆ.

ಹಣದ ಮೂಲಕ, ಯಾವಾವ್ಯ ಬ್ಯಾಂಕ್ ಖಾತೆಗಳಿಗೆ ಹಣ ಪಾವತಿಸಿಕೊಂಡು ಯಾರಿಗೆ ಹಣ ವರ್ಗಾವಣೆ ಮಾಡುತ್ತಿದ್ದರು ಎಂಬುದರ ಬಗ್ಗೆ ತನಿಖೆ ಮುಂದುವೆರೆಸಲಾಗಿದೆ. ನಕಲಿ ಕಾಲ್ ಸೆಂಟರ್ ಪ್ರಕರಣದಲ್ಲಿ ಇನ್ನಿಬ್ಬರ ಕೈವಾಡವಿದ್ದು, ಬಂಧನ ಭೀತಿಯಿಂದ ತಲೆಮರೆಸಿಕೊಂಡಿದ್ದು, ಅವರ ಪತ್ತೆಗಾಗಿ ಶೋಧ ಕಾರ್ಯ ಚುರುಕುಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ಧಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಸೈಬರ್ ಕಮಾಂಡ್ ವಿಭಾಗದ ಡಿಜಿಪಿ ಪ್ರಣವ್ ಮಹಾಂತಿ ಮಾತನಾಡಿ ನಕಲಿ‌ ಕಾಲ್ ಸೆಂಟರ್ ಬಗ್ಗೆ ನಮಗೆ ಮಾಹಿತಿ ಬಂದಿತ್ತು.. ಅಮೆರಿಕ ಪ್ರಜೆಗಳಿಗೆ ವಂಚಿಸುವ ಕಾಯಕದಲ್ಲಿ ತೊಡಗಿಸಿಕೊಂಡಿತ್ತು. ತೆರಿಗೆ ಸಂಬಂಧಿತ ಸೇವೆಗಳ ನೆಪದಲ್ಲಿ ಫೇಕ್ ಸರ್ವಿಸಸ್ ನೀಡುವ ಮೂಲಕ ಕೋಟ್ಯಂತರ ಹಣ ವಂಚಿಸಲಾಗಿದೆ. ಕೃತ್ಯದ ಸ್ಥಳದಲ್ಲಿ ಸಿಪಿಯು, ಸಿಮ್​, ಸಿಸ್ಟಮ್​ಗಳನ್ನು ಸೀಜ್​ ಮಾಡಿದ್ದೇವೆ. ಜೊತೆಗೆ ನಕಲಿ ರಶೀದಿ ಕೂಡಾ ಪತ್ತೆಯಾಗಿದೆ. ವಿವಿಧ ಬ್ಯಾಂಕ್​ಗಳ ಮೂಲಕ 40 ಕೋಟಿ ಹಣ ವರ್ಗಾವಣೆಯಾಗಿದೆ. ಪ್ರತಿ ಸೆಂಟರ್​ನಲ್ಲಿ 25 ರಿಂದ 30 ಜನ ಸಿಬ್ಬಂದಿಗಳು ಕೆಲಸ ಮಾಡುತ್ತಿದ್ದು‌ ಅವರ ಪಾತ್ರದ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದರು.

Recent Articles

spot_img

Related Stories

Share via
Copy link