ವಿಜೃಂಭಣೆಯಿoದ ನಡೆಯಲಿ ದಸರಾ ಮಹೋತ್ಸವ

 

ಬೆಂಗಳೂರು: ನಾಡಿನ ಪರಂಪರೆ, ಸಂಸ್ಕöÈತಿ, ಇತಿಹಾಸವನ್ನು ಪ್ರತಿಬಿಂಬಿಸುವ ನಾಡಹಬ್ಬ ಮೈಸೂರು ದಸರಾ ಕಾರ್ಯಕ್ರಮವನ್ನು ಈ ಬಾರಿ ಹೆಚ್ಚು ವಿಜೃಂಭಣೆಯಿAದ ಆಚರಿಸೋಣ ಎಂದು ಉಪಮುಖ್ಯಮಂತ್ರಿಗಳಾದ ಡಾ. ಜಿ.ಪರಮೇಶ್ವರ ಅವರು ಹೇಳಿದರು.

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಮುಖ್ಯಮಂತ್ರಿ ಶ್ರೀ ಡಿ.ಕೆ.ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ?ನಾಡಹಬ್ಬ ಮೈಸೂರು ದಸರಾ ಮಹೋತ್ಸವ -2026 ಆಚರಣೆ ಸಂಬAಧ ನಡೆದ ಪೂರ್ವಭಾವಿ ಉನ್ನತ ಮಟ್ಟದ ಸಭೆಯಲ್ಲಿ ತಮ್ಮ ಸಲಹೆಯನ್ನು ನೀಡಿದರು.
ಮೈಸೂರು ದಸರಾ ಸುಮ್ಮನೆ ನಡೆಯುವ ಯಾವುದೋ ಸಾಮಾನ್ಯ ಉತ್ಸವವಲ್ಲ. ಪ್ರತಿ ವರ್ಷಕ್ಕೊಮ್ಮೆ ದೇವಸ್ಥಾನಗಳಲ್ಲಿ ನಡೆಯುವ ರಥೋತ್ಸವ ಅಥವಾ ಪೂಜೆಯೂ ಅಲ್ಲ. ಇದು ನಾಡಿನ ಪರಂಪರೆ, ಸಂಸ್ಕತಿ, ಇತಿಹಾಸವನ್ನು ಪ್ರತಿಬಿಂಬಿಸುವAತಹ ಕಾರ್ಯಕ್ರಮ. ನಾಡಿನಲ್ಲಿ ಬರಗಾಲದ ಛಾಯೆಯಿದ್ದರೂ, ನಮ್ಮ ನಾಡಹಬ್ಬ ಆಚರಣೆ ಯಾವುದೇ ಸಮಸ್ಯೆಯಾಗದಂತೆ ವಿಜೃಂಭಣೆಯಿAದ ನಡೆಸಲು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳೋಣ ಎಂದು ತಿಳಿಸಿದರು.
ಹಿಂದೆ ಮೈಸೂರು ಮಹಾರಾಜರು ಅಂಬಾರಿ ಮೇಲೆ ಮೆರವಣಿಗೆ ಬರುತ್ತಿದ್ದರು. ಪ್ರಜಾಪ್ರಭುತ್ವ ವ್ಯವಸ್ಥೆ ಬಂದ ಹಿನ್ನೆಲೆಯಲ್ಲಿ ಅದನ್ನು ನೋಡಲು ಸಾಧ್ಯವಿಲ್ಲ. ನಾಡಿನ ಪರಂಪರೆಯನ್ನು ಮುಂದಿನ ಪೀಳಿಗೆಗೆ ಪ್ರತಿಬಿಂಬಿಸುವ ಕೆಲಸ ಮಾಡಬೇಕು ಎಂದರು.
ವಿಜಯನಗರ ಅರಸರ ಕಾಲದಲ್ಲಿ ಮಹಾನವಮಿ ಹಬ್ಬ ಎಂದು ಆಚರಣೆ ಮಾಡಲಾಗುತ್ತಿತ್ತು. ಸಮಾಜದಲ್ಲಿನ ಕೆಟ್ಟದ್ದನ್ನು ನಿರ್ಮೂಲನೆ ಮಾಡಿರುವ ಮತ್ತು ಯಾವುದಾದರೂ ಯುದ್ಧದಲ್ಲಿ ರಾಜ್ಯವನ್ನು ಗೆದ್ದಿರುವ ಬಗ್ಗೆ ವಿಜಯೋತ್ಸವ ಆಚರಿಸಲಾಗುತ್ತಿತ್ತು. ತದನಂತರ ಮೈಸೂರುa ಒಡೆಯರ್ ಸಂಸ್ಥಾನ 400 ವರ್ಷ ದಸರಾ ನಡೆಸಿಕೊಂಡು ಬಂದಿದೆ. ಇದನ್ನು ಸರಳವಾಗಿ ಆಚರಣೆ ಮಾಡುವುದು ಬೇಡ. ಸರಳವಾಗಿ ಆಚರಿಸುವ ಅವಶ್ಯಕತೆಯೂ ಇಲ್ಲ. ಈ ಬಗ್ಗೆ ಮುಖ್ಯಮಂತ್ರಿಯವರು ತೀರ್ಮಾನ ತೆಗೆದುಕೊಳ್ಳುವುದಾಗಿ ತಿಳಿಸಿದರು.
ಕಳೆದ ವರ್ಷ ಮೈಸೂರು ದಸರಾಕ್ಕೆ 25 ಲಕ್ಷಕ್ಕೂ ಹೆಚ್ಚು ಜನ ಭೇಟಿ ನೀಡಿದ್ದಾರೆ. ನಾನು ನಾಲ್ಕೆöÊದು ಬಾರಿ ಗೃಹ ಸಚಿವನಾಗಿ ಜವಾಬ್ದಾರಿ ನಿರ್ವಹಿಸಿದ್ದೇನೆ. ಪ್ರತಿದಿನ ಅಲ್ಲಿನ ವ್ಯವಸ್ಥೆಯ ಬಗ್ಗೆ ಮಾಹಿತಿ ಪಡೆಯುತ್ತಿದ್ದೆ. ಯಾವುದೇ ಅಹಿತಕರ ಘಟನೆಗಳು ಸಂಭವಿಸಲಿಲ್ಲ. ಕಳೆದ ವರ್ಷ ಹೆಚ್ಚಿನ ಜನ ಆಗಮಿಸಿದ್ದರು. ಜಿಲ್ಲಾಡಳಿತ ಉತ್ತಮವಾಗಿ ಅಯೋಜನೆ ಮಾಡಿಕೊಟ್ಟಿದೆ. ಇದಕ್ಕೆ ಜನಪ್ರತಿನಿಧಿಗಳು ಸಹಕರಿಸಿರುವುದಾಗಿ ವಿವರಿಸಿದರು.
ಈಗ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಹೊಸ ಚಿಂತನೆಯೊAದಿಗೆ ಅಧಿಕಾರ ವಹಿಸಿಕೊಂಡಿದ್ದಾರೆ. ರಾಜ್ಯದಲ್ಲಿ 16 ರಿಂದ 30 ವರ್ಷದೊಳಗಿನ 1.9 ಕೋಟಿ ಯುವಕರಿದ್ದಾರೆ. ಇವರಿಗೆ ನಮ್ಮ ಪರಂಪರೆ, ಸಂಸ್ಕöÈತಿ, ಇತಿಹಾಸದ ಬಗ್ಗೆ ಸಂದೇಶ ನೀಡಬೇಕಲ್ಲವೇ? ಮೈಸೂರಿನ ಇತಿಹಾಸ ಪ್ರತಿಬಿಂಬಿಸುವ ವಸ್ತುಪ್ರದರ್ಶನವನ್ನು ನಡೆಸಬೇಕು. ಮೈಸೂರಿನ ಪರಂಪರೆಯನ್ನು ಸಾರುವ ದೀಪಾಲಂಕಾರ ಮಾಡಬೇಕು ಎಂದು ಸಲಹೆ ನೀಡಿದರು.
ಮೈಸೂರು ದಸರಾವನ್ನು ವಿಶ್ವಮಟ್ಟಕ್ಕೆ ಪ್ರಚುರಪಡಿಸುವ ಕೆಲಸವಾಗಬೇಕು. ಹೆಚ್ಚು ಪ್ರವಾಸಿಗರನ್ನು ಹೆಚ್ಚು ಸೆಳೆಯುವ ಪ್ರಯತ್ನ ಮಾಡಬೇಕು. ವಿದೇಶಿ ಪ್ರವಾಸಿಗರಿಗಾಗಿ ಮೈಸೂರು ಮಹಾರಾಜರು ಮೆಟ್ರೋಪೋಲೋ ಹೋಟೆಲ್ ಕಟ್ಟಿದ್ದರು. ಆ ಪ್ರಮಾಣದಲ್ಲಿ ಇಂದು ವಿದೇಶಿಗರು ಬರುತ್ತಿಲ್ಲ. ಅವರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು. ನಮ್ಮ ಪರಂಪರೆ ವಿಶ್ವಕ್ಕೆ ತಿಳಿಸಬೇಕು ಎಂದು ಸೂಚಿಸಿದರು.
ದಸರಾ ಕ್ರೀಡೆ ಯಶಸ್ವಿಯಾಗಿ ನಡೆಸುವ ಬಗ್ಗೆ ಚಿಂತಿಸಬೇಕು. ನಾವೆಲ್ಲ ದಸರಾ ಕ್ರೀಡೆಯಿಂದ ಗುರುತಿಸಿಕೊಂಡವರು. ಕ್ರೀಡೆಗಳು ತಾಲ್ಲೂಕು ಮಟ್ಟದಿಂದ ಪ್ರಾರಂಭವಾಗುತ್ತಿತ್ತು. ಯುವಕರಿಗೆ ಕ್ರೀಡೆಯ ಬಗ್ಗೆ ಆಸಕ್ತಿ ಮೂಡಿಸಿ, ಅವರಿಗೆ ಅವಕಾಶ ಮಾಡಿಕೊಡಬೇಕು ಎಂದು ತಿಳಿಸಿದರು.

Recent Articles

spot_img

Related Stories

Share via
Copy link