ಶಿವಮೊಗ್ಗ ದಸರಾ: ಬೆಳ್ಳಿ ಅಂಬಾರಿ ಕೆಳಕ್ಕೆ ಬೀಳಿಸಿ

ಶಿವಮೊಗ್ಗ: ನಗರದಲ್ಲಿ ದಸರಾ ಜಂಬೂಸವಾರಿ ಮೆರವಣಿಗೆ ಪ್ರಾರಂಭವಾಗಿ ಸುಮಾರು ಹತ್ತು ನಿಮಿಷ ಕಳೆಯುವುದರೊಳಗೆ ಚಾಮುಂಡೇಶ್ವರಿ ದೇವಿಯ 650 ಕೆಜಿ ತೂಕದ ಬೆಳ್ಳಿ ಅಂಬಾರಿ ಹೊತ್ತಿದ್ದ ಸೋಮಣ್ಣ ಆನೆ ದಿಢೀರನೆ ಗಾಬರಿಗೊಂಡು ಏಕಾಏಕಿ ಹಿಮ್ಮುಖವಾಗಿ ತಿರುಗಿ ಅಡ್ಡಾದಿಡ್ಡಿ ಸಾಗಿದ್ದರಿಂದ ಅಂಬಾರಿ ಕೆಳಗೆ ಬಿದ್ದು ಭಗ್ನಗೊಂಡಿದೆ. ದೇವಿ ವಿಗ್ರಹ ಸಹ ಹಾನಿಗೀಡಾಗಿದೆ. ಆದರೆ ಅದೃಷ್ಟ ಅದೃಷ್ಟವಶಾತ್ ಪ್ರಾಣಹಾನಿ ಸಂಭವಿಸಿಲ್ಲ. ಈ ಅವಘಡದ ಹಿನ್ನೆಲೆಯಲ್ಲಿ ಜಂಬೂಸವಾರಿ ಮೊಟಕುಗೊಳಿಸಲಾಯಿತು.
ಆನೆ ಏಕಾಏಕಿ ದಿಕ್ಕು ಬದಲಿಸಿ ಸಾಗಿದ ಪರಿಣಾಮ ಸಾರ್ವಜನಿಕರು ಚಲ್ಲಾಪಿಲ್ಲಿಯಾಗಿ ಓಡಿದರು. ಈ ವೇಳೆ ಒಂದು ಎರಡು ಕಾರು ಹಾಗೂ ಎರಡ್ಮೂರು ಬೈಕ್ಗಳಿಗೆ ಹಾನಿಯಾಗಿದೆ. ಘಟನೆಯಿಂದ ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಅಂಬಾರಿ ಮೆರವಣಿಗೆ ಕೋಟೆ ರಸ್ತೆಯ ಶಿವಪ್ಪ ನಾಯಕ ಅರಮನೆಯಿಂದ ಮೂರೂವರೆ ಸುಮಾರಿಗೆ ಪ್ರಾರಂಭವಾಯಿತು. ಇದೇ ಮೊದಲ ಬಾರಿಗೆ ಸೋಮಣ್ಣ ಅಂಬಾರಿ ಹೊತ್ತು ಮುಂದೆ ಹೆಜ್ಜೆ ಹಾಕುತ್ತಿತ್ತು. ಸಾಗರ ಮತ್ತು ಬಹದ್ದೂರ್ ಎಂಬ ಎರಡು ಗಂಡಾನೆಗಳು ಇದರ ಹಿಂದೆ ಸಾಗಿದ್ದವು. ಮೆರವಣಿಗೆ ಪ್ರಾರಂಭವಾಗಿ ಸುಮಾರು ಹತ್ತು ನಿಮಿಷದಲ್ಲಿ 200 ಮೀಟರ್ನಷ್ಟು ದೂರ ಸಾಗಿತ್ತು.
ಎಸ್ಪಿಎಂ ರಸ್ತೆಯ ಪಾಂಡುರAಗ ವಿಠಲ ದೇವಸ್ಥಾನದ ಬಳಿ ಆನೆ ಪಟಾಕಿ ಸದ್ದು, ವಾದ್ಯ ಮೇಳ, ಜನಜಂಗುಳಿಯಿAದ ದಿಗಿಲು ಬಿದ್ದಿದ್ದು ಕಂಡು ಬಂತು. ಮಾವುತ ಮತ್ತು ಕಾವಾಡಿಗಳು ಆನೆಯನ್ನು ನಿಯಂತ್ರಿಸಲು ಮುಂದಾದರು. ಅಷ್ಟರಲ್ಲಿ ಬಹದ್ದೂರ್ ಎಂಬ ಆನೆ ಸೋಮಣ್ಣನನ್ನು ಹಿಂಭಾಲಿಸಿತು. ಇವೆರೆಡು ಆನೆಗಳ ನಡುವೆ ಸಣ್ಣ ಘರ್ಷಣೆ ಕೂಡ ನಡೆಯಿತು.
ಬೆದರಿದ ಸೋಮಣ್ಣ ಅಡ್ಡಾದಿಡ್ಡಿ ನುಗಿದ್ದರಿಂದ ಅದನ್ನು ನಿಯಂತ್ರಣಕ್ಕೆ ತರಲು ಅರಣ್ಯ ಇಲಾಖೆ ಸಿಬ್ಬಂದಿ ಹರಸಾಹಸಪಟ್ಟರು. ಪರಿಸ್ಥಿತಿಯನ್ನು ನಿಯಂತ್ರಿಸಲು ಸೋಮಣ್ಣ ಆನೆಗೆ ಅಲ್ಪ ಪ್ರಮಾಣದ ಮತ್ತಿನ ಅರವಳಿಕೆ ಮದ್ದು ನೀಡಿದರು. ಕೊನೆಗೂ ಆನೆ ನಿಯಂತ್ರಣಕ್ಕೆ ಬಂದಿದ್ದರಿAದ ಅರಣ್ಯ ಸಿಬ್ಬಂದಿ ನಿಟ್ಟುಸಿರು ಬಿಟ್ಟರು.
ಈ ಹಿಂದೆ ಅಂಬಾರಿ ಹೊರುವ ಆನೆಗೆ ಸಂಬAಧಿಸಿದAತೆ ಹಲವು ಸಂದರ್ಭಗಳಲ್ಲಿ ಸಮಸ್ಯೆಗಳು ಎದುರಾಗಿದ್ದವು. ಈ ಬಾರಿ ಅಂಬಾರಿ ಹೊರುತ್ತಿದ್ದ ಆನೆಯನ್ನು ಇಂದು ಬುಧವಾರ ಬೆಳಿಗ್ಗೆ ಬದಲಾಯಿಸಿದ್ದು ಕೂಡ ಘಟನೆಗೆ ಕಾರಣವಾಗಿರಬಹುದು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಸೋಮಣ್ಣ ಆನೆ ಸೃಷ್ಟಿಸಿದ ಅವಾಂತರದಿAದ ಅಂಬಾರಿಯಲ್ಲಿದ್ದ ತಾಯಿ ಚಾಮುಂಡೇಶ್ವರಿ ದೇವಿಯ ಚಿನ್ನದ ಬಳೆಗಳು ನಾಪತ್ತೆಯಾಗಿವೆ ಎನ್ನಲಾಗಿದೆ. ದೇವಿಯ ಕೈಗೆ ಒಟ್ಟು 8 ಚಿನ್ನದ ಬಳೆಗಳನ್ನು ತೊಡಿಸಲಾಗಿತ್ತು. ಜಂಬೂಸವಾರಿ ವೇಳೆ ನಡೆದ ಅವಘಡದ ಬಳಿಕ ಈ ಬಳೆಗಳ ಪೈಕಿ ಎರಡು ಬಳೆಗಳು ಮಾತ್ರ ಪತ್ತೆಯಾಗಿದ್ದು, ಉಳಿದ ಆರು ಬಳೆಗಳು ಕಾಣೆಯಾಗಿವೆ ಎಂದು ಪ್ರಾಥಮಿಕ ಮಾಹಿತಿಯಿಂದ ತಿಳಿದುಬಂದಿದೆ.
ಆದರೆ, ಘಟನೆಗೆ ನಿಖರ ಕಾರಣವೇನು ಎಂಬುದು ಅಧಿಕೃತವಾಗಿ ಸ್ಪಷ್ಟವಾಗಬೇಕಿದೆ. ದಸರಾ ಸಂಭ್ರಮದ ನಡುವೆ ನಡೆದ ಈ ಘಟನೆಯಿಂದ ಸಾರ್ವಜನಿಕರಲ್ಲಿ ಆತಂಕ ಮೂಡಿಸಿತ್ತು. ಆದರೂ ದೇವಿಯ ಹಳೆಯ ಮೂರ್ತಿಯನ್ನು ಟ್ರಾö್ಯಕ್ಟರ್ನಲ್ಲಿಟ್ಟು 150 ಉತ್ಸವ ಮೂರ್ತಿಗಳೊಂದಿಗೆ ಮೆರವಣಿಗೆ ಅಲ್ಲಮಪ್ರಭು ಮೈದಾನ (ಫ್ರೀಡಂ ಪಾರ್ಕ್) ತಲುಪಿತು. ಅಲ್ಲಿ ಅಂಬು ಛೇದನ ನಡೆಯಿತು.








