ಚಿನ್ನದ ಅಂಬಾರಿಯಲ್ಲಿ ವಿರಾಜಮಾನಳಾಗಿದ್ದ ಚಾಮುಂಡೇಶ್ವರಿ | ರಾಜಗಾಂಭೀರ್ಯದಿ0ದ ಹೆಜ್ಜೆ ಹಾಕಿದ ‘ಕ್ಯಾಪ್ಟನ್ ಪ್ರಶಾಂತ್’ ಮೈಸೂರು ದಸರಾ – ವೈಭವದ ಜಂಬೂ ಸವಾರಿ

 ದಸರಾ ಸಂಭ್ರಮದಲ್ಲಿ ಪಾಲ್ಗೊಂಡ ಕೇರಳ, ತೆಲಂಗಾಣ ಸಿಎಂಗಳು ಹಾಗೂ ವಿದೇಶಿ ಗಣ್ಯರು: ವಿಜಯ ಯಾತ್ರೆಯಲ್ಲಿ ಸಿಎಂ ಡಿಕೆಶಿ, ಸಿಚಿವ ಯತೀಂದ್ರ ಸಿದ್ದರಾಮಯ್ಯ, ರಾಜವಂಶಸ್ಥ ಯದುವೀರ್ ಒಡೆಯರ್ ಅವರಿಂದ ತಾಯಿ ಚಾಮುಂಡೇಶ್ವರಿಗೆ ಪುಷ್ಪನಮನ.

ಮೈಸೂರು: ಕರುನಾಡಿನ ಸಾಂಸ್ಕತಿಕ ಅಸ್ಮಿತೆ, ಶ್ರೀಮಂತ ಪರಂಪರೆ ಹಾಗೂ ಗತಕಾಲದ ರಾಜವೈಭವವನ್ನು ಮರುಸೃಷ್ಟಿಸುವ 11 ದಿನಗಳ ವಿಶ್ವವಿಖ್ಯಾತ ಮೈಸೂರು ದಸರಾ ಅಥವಾ ಶರನ್ನವರಾತ್ರಿ ಮಹೋತ್ಸವಕ್ಕೆ ಬುಧವಾರ ನಡೆದ ಅತ್ಯಾಕರ್ಷಕ ಹಾಗೂ ಐತಿಹಾಸಿಕ ಜಂಬೂ ಸವಾರಿ ಮೆರವಣಿಗೆಯೊಂದಿಗೆ ಅದ್ದೂರಿ ತೆರೆ ಬಿದ್ದಿದೆ. ನಾಡಹಬ್ಬವಾಗಿ ಆಚರಿಸಲ್ಪಡುವ ಈ ಬಾರಿಯ ದಸರಾ ಉತ್ಸವವು ಹಿಂದೆದಿಗಿತಲೂ ಹೆಚ್ಚು ವೈಭವಯುತವಾಗಿ ಮೂಡಿಬಂದಿದ್ದು, ಲಕ್ಷಾಂತರ ಕನ್ನಡಿಗರು ಹಾಗೂ ದೇಶ-ವಿದೇಶಗಳ ಗಣ್ಯರು ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದರು.

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ವಿಶೇಷ ಆಹ್ವಾನದ ಮೇರೆಗೆ ನೆರೆರಾಜ್ಯಗಳಾದ ಕೇರಳದ ಮುಖ್ಯಮಂತ್ರಿ ವಿ.ಡಿ. ಸತೀಶನ್ ಹಾಗೂ ತೆಲಂಗಾಣದ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರು ಈ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡು ದಸರಾ ವೈಭವವನ್ನು ಕಣ್ತುಂಬಿಕೊAಡರು. ಇವರಲ್ಲದೆ, ವಿವಿಧ ದೇಶಗಳ ರಾಯಭಾರಿಗಳು, ಕಾನ್ಸುಲ್ ಜನರಲ್‌ಗಳು, ಹೈ ಕಮಿಷನರ್‌ಗಳು ಸೇರಿದಂತೆ ಹಲವು ವಿದೇಶಿ ಗಣ್ಯರ ಉಪಸ್ಥಿತಿ ಈ ಬಾರಿಯ ಉತ್ಸವಕ್ಕೆ ಅಂತರರಾಷ್ಟಿçÃಯ ಮೆರಗು ನೀಡಿತು.

ಶುಭ ಮಕರ ಲಗ್ನದಲ್ಲಿ ನಂದಿ ಧ್ವಜಕ್ಕೆ ಪೂಜೆ

ವಿಜಯದಶಮಿ ಮೆರವಣಿಗೆಯ ಸಾಂಪ್ರದಾಯಿಕ ಚಾಲನೆಗೆ ಮುನ್ನುಡಿಯಾಗಿ, ಮಧ್ಯಾಹ್ನ 1.36 ರಿಂದ 1.56 ರ ನಡುವಿನ ಶುಭ ಮಕರ ಲಗ್ನದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸಚಿವರು ಮತ್ತು ಇತರ ಗಣ್ಯರೊಂದಿಗೆ ಅಂಬಾ ವಿಲಾಸ ಅರಮನೆಯ ಬಲರಾಮ ದ್ವಾರದ ಬಳಿ ನಂದಿ ಧ್ವಜಕ್ಕೆ ವಿಶೇಷ ಪೂಜೆ ಸಲ್ಲಿಸಿದರು. ಈ ಮೂಲಕ ಜಂಬೂ ಸವಾರಿ ಮೆರವಣಿಗೆಗೆ ಅಧಿಕೃತ ಚಾಲನೆ ನೀಡಿದ ಅವರು, ನಾಡಿನ ಸಮಸ್ತ ಜನತೆಗೆ ವಿಜಯದಶಮಿಯ ಹಬ್ಬದ ಶುಭಾಶಯಗಳನ್ನು ಕೋರಿದರು.

ಚಾಮುಂಡೇಶ್ವರಿಗೆ ಪುಷ್ಪಾರ್ಚನೆ: ಮೊದಲ ಬಾರಿಗೆ ಅಂಬಾರಿ ಹೊತ್ತ ಪ್ರಶಾಂತ್
ದಸರಾ ಮಹೋತ್ಸವದ ಅತ್ಯಂತ ಪ್ರಮುಖ ಹಾಗೂ ಭಕ್ತಿಭಾವದ ಘಟ್ಟವಾದ ‘ಪುಷ್ಪಾರ್ಚನೆ’ ಕಾರ್ಯಕ್ರಮ ಸಂಜೆ ‘ಮೀನ ಲಗ್ನ’ದ ಶುಭ ಮುಹೂರ್ತದಲ್ಲಿ (ಸಂಜೆ 4.10 ರಿಂದ 4.35 ರ ನಡುವೆ) ಜರುಗಿತು. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕೇರಳ ಮತ್ತು ತೆಲಂಗಾಣ ಮುಖ್ಯಮಂತ್ರಿಗಳು, ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮತ್ತಿತರ ಗಣ್ಯರು ಜಂಟಿಯಾಗಿ 750 ಕೆಜಿ ತೂಕದ ಚಿನ್ನದ ಅಂಬಾರಿಯಲ್ಲಿ ವಿರಾಜಮಾನಳಾಗಿದ್ದ ನಾಡದೇವತೆ ಚಾಮುಂಡೇಶ್ವರಿ ದೇವಿಯ ಮೂರ್ತಿಗೆ ಪುಷ್ಪವೃಷ್ಟಿ ಮಾಡಿದರು.

ಈ ಬಾರಿಯ ಜಂಬೂ ಸವಾರಿಯ ವಿಶೇಷ ಆಕರ್ಷಣೆಯೆಂದರೆ 54 ವರ್ಷದ ‘ಪ್ರಶಾಂತ’ ಆನೆ. ಮೊದಲ ಬಾರಿಗೆ ಚಿನ್ನದ ಅಂಬಾರಿಯನ್ನು ಹೊರುವ ಜವಾಬ್ದಾರಿಯನ್ನು ಹೊತ್ತ ಪ್ರಶಾಂತನು, ‘ಕಾವೇರಿ’ ಮತ್ತು ‘ರೂಪಾ’ ಎಂಬ ‘ಕುಮ್ಕಿ’ ಆನೆಗಳ ಬೆಂಗಾವಲಿನೊAದಿಗೆ ಅತ್ಯಂತ ರಾಜಗಾಂಭೀರ್ಯದಿAದ ಹೆಜ್ಜೆ ಹಾಕಿದನು. ಆನೆಗಳು ವಿಶೇಷವಾಗಿ ನಿರ್ಮಿಸಲಾದ ವೇದಿಕೆಯ ಬಳಿ ಆಗಮಿಸುತ್ತಿದ್ದಂತೆಯೇ, ಪೊಲೀಸ್ ತುಕಡಿಯು ಫಿರಂಗಿಗಳಿAದ 21 ಬಾರಿ ಗುಂಡುಗಳನ್ನು ಹಾರಿಸುವ ಮೂಲಕ ಕುಲದೇವತೆಗೆ ಹಾಗೂ ಅಂಬಾರಿಗೆ ಸಾಂಪ್ರದಾಯಿಕ ಗೌರವ ವಂದನೆ ಸಲ್ಲಿಸಿತು.

ಆನೆಗಳ ಪಡೆಯ ಶಿಸ್ತುಬದ್ಧ ಹೆಜ್ಜೆ
ಕ್ಯಾಪ್ಟನ್ ಪ್ರಶಾಂತ್’ ನೇತೃತ್ವದಲ್ಲಿ ಸಾಗಿದ ಜಂಬೂ ಸವಾರಿಯಲ್ಲಿ ಸುಮಾರು ಹನ್ನೆರಡಕ್ಕೂ ಹೆಚ್ಚು ವಿಶೇಷವಾಗಿ ಅಲಂಕೃತಗೊAಡ ಆನೆಗಳು ಭಾಗವಹಿಸಿದ್ದವು. ತುರ್ತು ಪರಿಸ್ಥಿತಿಗಾಗಿ ಧನಂಜಯ ಆನೆಯನ್ನು ಮೀಸಲು (ರಿಸರ್ವ್) ಆಗಿ ಇರಿಸಲಾಗಿತ್ತು. ಹಿರಿಯ ಆನೆ ‘ಅಭಿಮನ್ಯು’ ನಿಶಾನೆ ಆನೆಯಾಗಿ ಮುಂಚೂಣಿಯಲ್ಲಿದ್ದರೆ, ಗೋಪಿ ಆನೆಯು ನೌಪತ್ ಆನೆಯ ಜವಾಬ್ದಾರಿ ನಿರ್ವಹಿಸಿತು. ಇವುಗಳ ಜೊತೆಗೆ ಏಕಲವ್ಯ, ಸುಗ್ರೀವ, ಲಕ್ಷಿ÷್ಮ, ಶ್ರೀಕಂಠ, ಶ್ರೀರಾಮ ಮತ್ತು ಮಹೇಂದ್ರ ಆನೆಗಳು ತಂಡದ ಭಾಗವಾಗಿ ಜಂಬೂ ಸವಾರಿಯ ಗಾಂಭೀರ್ಯವನ್ನು ಹೆಚ್ಚಿಸಿದವು. 80 ಕೆಜಿಗೂ ಅಧಿಕ ಶುದ್ಧ ಚಿನ್ನದ ಲೇಪನ ಹೊಂದಿರುವ ಮರದ ಅಂಬಾರಿಯಲ್ಲಿ ಸಾಗಿದ ದೇವಿಯ ದರ್ಶನ ಪಡೆದು ನೆರೆದಿದ್ದ ಲಕ್ಷಾಂತರ ಭಕ್ತರು ಪುನೀತರಾದರು.

ಆಕರ್ಷಕ ಸ್ತಬ್ಧಚಿತ್ರಗಳು, ಕ್ರೀಡಾ ಮತ್ತು ಸಿನಿಮಾ ತಾರೆಯರ ಮೆರಗು
ಜಂಬೂ ಸವಾರಿಯ ಮೆರವಣಿಗೆ ಕೇವಲ ಆನೆಗಳ ನಡಿಗೆಗಷ್ಟೇ ಸೀಮಿತವಾಗಿರಲಿಲ್ಲ. ರಾಜ್ಯದ ವಿವಿಧ ಜಿಲ್ಲೆಗಳ ಕಲೆ, ಸಂಸ್ಕöÈತಿ, ಮತ್ತು ಪರಂಪರೆಯನ್ನು ಅನಾವರಣಗೊಳಿಸುವ ನೂರಾರು ಸಾಂಸ್ಕöÈತಿಕ ತಂಡಗಳು ಮತ್ತು ಅತ್ಯಾಕರ್ಷಕ ಸ್ತಬ್ಧಚಿತ್ರಗಳು (ಟ್ಯಾಬ್ಲೋಗಳು) ಅರಮನೆಯಿಂದ ಬನ್ನಿಮಂಟಪದವರೆಗಿನ ಸುಮಾರು ಐದು ಕಿಲೋಮೀಟರ್ ದೂರದ ಮಾರ್ಗದುದ್ದಕ್ಕೂ ಸಾಗಿದವು. ಸರ್ಕಾರಿ ಯೋಜನೆಗಳು, ಸಾಮಾಜಿಕ ಸಂದೇಶಗಳನ್ನು ಸಾರುವ ಸ್ತಬ್ಧಚಿತ್ರಗಳ ಜೊತೆಗೆ, ನೆರೆಯ ರಾಜ್ಯಗಳ ಕಲಾತಂಡಗಳು ಪಾಲ್ಗೊಂಡಿದ್ದು ವಿಶೇಷವಾಗಿತ್ತು. ರಕ್ಷಣಾ ಪಡೆಗಳಾದ ಸೇನೆ, ನೌಕಾಪಡೆ ಮತ್ತು ವಾಯುಪಡೆಯ ಮೂರೂ ವಿಭಾಗಗಳನ್ನು ಪ್ರತಿನಿಧಿಸುವ ಸ್ತಬ್ಧಚಿತ್ರಗಳು ಯುವಜನತೆಯಲ್ಲಿ ದೇಶಭಕ್ತಿ ಹಾಗೂ ಸ್ಫೂರ್ತಿಯನ್ನು ತುಂಬಿದವು.

ಇದರ ಜೊತೆಗೆ, ದಿಗ್ಗಜ ಕ್ರಿಕೆಟಿಗ ಅನಿಲ್ ಕುಂಬ್ಳೆ ಸೇರಿದಂತೆ ನಾಡಿನ ಖ್ಯಾತ ಕ್ರೀಡಾಪಟುಗಳು ಹಾಗೂ ಕನ್ನಡ ಚಿತ್ರರಂಗದ ತಾರೆಯರ ದಂಡು ತೆರೆದ ಬಸ್ಸಿನಲ್ಲಿ ಮೆರವಣಿಗೆಯ ಗುಂಟ ಸಾಗಿ ನೆರೆದಿದ್ದ ಅಭಿಮಾನಿಗಳಿಗೆ ಹರ್ಷ ತಂದರು. ಮೆರವಣಿಗೆ ವೀಕ್ಷಿಸಲು ರಸ್ತೆಯ ಇಕ್ಕೆಲಗಳಲ್ಲಿ ಮುಂಜಾನೆಯಿAದಲೇ ಲಕ್ಷಾಂತರ ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದರು.

ಸಾಂಸ್ಕöÈತಿಕ ನಗರಿಯ ಮೈದುಂಬಿದ ಸಂಭ್ರಮ
ಹಬ್ಬದ ಪ್ರಯುಕ್ತ ಇಡೀ ಮೈಸೂರು ನಗರ ನವವಧುವಿನಂತೆ ಕಂಗೊಳಿಸುತ್ತಿತ್ತು. ಮೈಸೂರು ಅರಮನೆ, ಪ್ರಮುಖ ಬೀದಿಗಳು, ವೃತ್ತಗಳು ಮತ್ತು ಪಾರಂಪರಿಕ ಕಟ್ಟಡಗಳಿಗೆ ಮಾಡಲಾಗಿದ್ದ ದೀಪಾಲಂಕಾರ ನೋಡುಗರ ಕಣ್ಣಿಗೆ ಹಬ್ಬವನ್ನುಂಟುಮಾಡಿತ್ತು. ಆಹಾರ ಮೇಳ, ಫಲಪುಷ್ಪ ಪ್ರದರ್ಶನ, ವಸ್ತುಪ್ರದರ್ಶನ, ಕವಿಗೋಷ್ಠಿಗಳು, ಮಹಿಳೆಯರು, ಯುವಜನರು ಹಾಗೂ ರೈತರಿಗಾಗಿ ಆಯೋಜಿಸಲಾಗಿದ್ದ ವಿಶೇಷ ಕಾರ್ಯಕ್ರಮಗಳು ಜನಸಾಗರವನ್ನು ಸೆಳೆದವು. ಬಾನಂಗಳದಲ್ಲಿ ನಡೆದ ವಾಯು ಪ್ರದರ್ಶನ (ಏರ್ ಶೋ) ಮತ್ತು ರಾತ್ರಿಯ ಡ್ರೋನ್ ಪ್ರದರ್ಶನಗಳು ಆಧುನಿಕ ತಂತ್ರಜ್ಞಾನ ಮತ್ತು ಸಾಂಪ್ರದಾಯಿಕ ಹಬ್ಬದ ನಡುವಿನ ಸುಂದರ ಸೇತುವೆಯಾಗಿದ್ದವು.

ಬನ್ನಿಮಂಟಪದಲ್ಲಿ ಪಂಜಿನ ಕವಾಯತು
ಬುಧವಾರ ಸಂಜೆ ಜಂಬೂ ಸವಾರಿ ಬನ್ನಿಮಂಟಪ ಮೈದಾನ ತಲುಪಿದ ಬಳಿಕ, ಕತ್ತಲಾವರಿಸುತ್ತಿದ್ದಂತೆಯೇ ನಡೆಯುವ ಐತಿಹಾಸಿಕ ‘ಪಂಜಿನ ಕವಾಯತು’ (ಟಾರ್ಚ್ಲೈಟ್ ಪರೇಡ್) ದಸರಾ ಮಹೋತ್ಸವದ ಕೊನೆಯ ಆಕರ್ಷಣೆಯಾಗಿದೆ. ರಾಜ್ಯಪಾಲರಾದ ಸುಧಾ ಯಾದವ್ ಅವರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಗೌರವ ವಂದನೆ ಸ್ವೀಕರಿಸಲಿದ್ದು, ಭವ್ಯ ಸಿಡಿಮದ್ದುಗಳ ಪ್ರದರ್ಶನದೊಂದಿಗೆ ಈ ವರ್ಷದ ದಸರಾ ಸಂಪೂರ್ಣಗೊಳ್ಳಲಿದೆ.

ಇತಿಹಾಸದ ಮೆಲುಕು
ಒಳ್ಳೆಯತನವು ಕೆಟ್ಟತನದ ಮೇಲೆ ಸಾಧಿಸಿದ ವಿಜಯದ ಸಂಕೇತವಾಗಿರುವ ಈ ಆಚರಣೆ, ವಿಜಯನಗರ ಸಾಮ್ರಾಜ್ಯದ ಅರಸರ ಕಾಲದಿಂದಲೂ ನಡೆದುಕೊಂಡು ಬಂದಿದೆ. 1610ರಲ್ಲಿ ಶ್ರೀರಂಗಪಟ್ಟಣದಲ್ಲಿ ರಾಜ ಒಡೆಯರ್ ಅವರಿಂದ ಅಧಿಕೃತವಾಗಿ ಆರಂಭಗೊAಡ ಈ ನವರಾತ್ರಿ ಉತ್ಸವ, ಕಾಲಕ್ರಮೇಣ ಮೈಸೂರಿನ ಒಡೆಯರ ಆಶ್ರಯದಲ್ಲಿ ಜಗದ್ವಿಖ್ಯಾತವಾಯಿತು. 1971ರಲ್ಲಿ ‘ಪ್ರಿವಿ ಪರ್ಸ್’ ರದ್ದಾದ ಬಳಿಕ ಕೇವಲ ಖಾಸಗಿ ಆಚರಣೆಯಾಗಿದ್ದ ದಸರಾವನ್ನು, 1975ರಲ್ಲಿ ಅಂದಿನ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರು ‘ನಾಡಹಬ್ಬ’ವಾಗಿ ಮರುಜೀವ ನೀಡಿದರು. ಅಂದಿನಿAದ ಇಂದಿನವರೆಗೂ ಸರ್ಕಾರ ಮತ್ತು ರಾಜಮನೆತನದ ಸಹಯೋಗದೊಂದಿಗೆ ಈ ಪರಂಪರೆ ನಿರಂತರವಾಗಿ, ಮುನ್ನಡೆದುಕೊಂಡು ಬರುತ್ತಿದ್ದು, ಕರುನಾಡಿನ ಸಾಂಸ್ಕöÈತಿಕ ಹೆಮ್ಮೆಯ ಪ್ರತೀಕವಾಗಿ ಇಂದಿಗೂ ರಾರಾಜಿಸುತ್ತಿದೆ.

ಬಾಕ್ಸ್
ಅರಮನೆ ಸಂಪ್ರದಾಯ: ಈ ಬಾರಿ ನಡೆಯದ ವಜ್ರಮುಷ್ಟಿ ಕಾಳಗ
ಅರಮನೆಯ ಒಳಾಂಗಣದಲ್ಲಿಯೂ ನವರಾತ್ರಿಯ ಸಾಂಪ್ರದಾಯಿಕ ವಿಧಿವಿಧಾನಗಳು ಶ್ರದ್ಧಾಭಕ್ತಿಗಳಿಂದ ನೆರವೇರಿದವು. ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ವಿಶೇಷ ರಾಜಪೋಷಾಕು ಧರಿಸಿ, ಅಂಬಾ ವಿಲಾಸ ಅರಮನೆಯಿಂದ ಭುವನೇಶ್ವರಿ ದೇವಿ ದೇವಸ್ಥಾನದವರೆಗೆ ‘ವಿಜಯ ಯಾತ್ರೆ’ ನಡೆಸಿ ಬನ್ನಿಮರಕ್ಕೆ ವಿಶೇಷ ಪೂಜೆ ಸಲ್ಲಿಸಿದರು. ನವರಾತ್ರಿಯ ಪ್ರಮುಖ ಆಕರ್ಷಣೆಯಾದ ‘ಖಾಸಗಿ ದರ್ಬಾರ್’ನಲ್ಲಿ ವೇದ ಮಂತ್ರಘೋಷಗಳ ನಡುವೆ ಅವರು ಸುವರ್ಣ ಸಿಂಹಾಸನವನ್ನೇರಿ ಧಾರ್ಮಿಕ ವಿಧಿಗಳನ್ನು ಪೂರೈಸಿದರು. ಆದರೆ, ಪ್ರತೀ ವರ್ಷ ಜಂಬೂ ಸವಾರಿಗೆ ಮುನ್ನ ನಡೆಯುತ್ತಿದ್ದ ‘ಜೆಟ್ಟಿ’ಗಳ (ಮಲ್ಲರ) ಸಾಂಪ್ರದಾಯಿಕ ‘ವಜ್ರಮುಷ್ಟಿ ಕಾಳಗ’ವು ಈ ಬಾರಿ ಸಮಯದ ಹೊಂದಾಣಿಕೆಯ ಕೊರತೆಯಿಂದಾಗಿ ರದ್ದಾಗಿದ್ದು, ಇತಿಹಾಸದ ಪುಟಗಳಲ್ಲಿ ದಾಖಲಾರ್ಹ ಅಂಶವಾಯಿತು.

ಬಾಕ್ಸ್

ಮೈಸೂರು ದಸರಾ: ಪ್ರಜಾಪ್ರಭುತ್ವದಲ್ಲಿ ನಾಡಿನೆಲ್ಲರ ಹಬ್ಬ ಸಿಎಂ ಡಿ.ಕೆ. ಶಿವಕುಮಾರ್

ಮೈಸೂರು ದಸರಾ ಮಹೋತ್ಸವದ ಜಂಬೂ ಸವಾರಿಗೆ ನಂದಿ ಧ್ವಜ ಪೂಜೆ ನೆರವೇರಿಸುವ ಮೂಲಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, “ಪ್ರತಿ ಮನೆಗೂ ಅಭಿವೃದ್ಧಿಯ ಬೆಳಕು ತಲುಪಬೇಕು, ದ್ವೇಷ ದೂರವಾಗಿ ಸಾಮರಸ್ಯ ಬೆಳೆಯಬೇಕು ಎಂಬುದೇ ನಮ್ಮ ಸಂಕಲ್ಪ” ಎಂದರು. ದಸರಾ ಕೇವಲ ಸರ್ಕಾರ ಅಥವಾ ರಾಜಮನೆತನದ ಹಬ್ಬವಲ್ಲ, ಇದು ಪ್ರಜಾಪ್ರಭುತ್ವದಲ್ಲಿ ನಾಡಿನೆಲ್ಲರ ಹಬ್ಬ ಎಂದು ಅವರು ಬಣ್ಣಿಸಿದರು.
ನಾಡಿನ ಜನತೆಗೆ ಶಾಂತಿ, ಸಮೃದ್ಧಿ ಹಾಗೂ ಉತ್ತಮ ಮಳೆ-ಬೆಳೆ ಕರುಣಿಸುವಂತೆ ತಾಯಿ ಚಾಮುಂಡೇಶ್ವರಿಯಲ್ಲಿ ಪ್ರಾರ್ಥಿಸಿದ ಅವರು, ನಾಡಿನ ಪ್ರಜಾಸೇವಕನಾಗಿ ಈ ಐತಿಹಾಸಿಕ ಕ್ಷಣದಲ್ಲಿ ಭಾಗಿಯಾಗಿರುವುದು ತಮ್ಮ ಬದುಕಿನ ಅಮೂಲ್ಯ ಕ್ಷಣ ಎಂದರು. ಈ ಬಾರಿ ಹೊಸ ಆನೆ ಪ್ರಶಾಂತ ಅಂಬಾರಿ ಹೊರುತ್ತಿದ್ದು, ಮುಂದಿನ ಹಲವು ವರ್ಷಗಳ ಕಾಲ ಈ ಭಾಗ್ಯ ಆ ಆನೆಗೆ ಸಿಗಲಿ ಎಂದು ಹಾರೈಸಿದರು.
ನೆರೆ ರಾಜ್ಯಗಳ (ಕೇರಳ, ತೆಲಂಗಾಣ) ಮುಖ್ಯಮಂತ್ರಿಗಳು ಹಾಗೂ 13 ವಿದೇಶಿ ರಾಯಭಾರಿಗಳ ಆಗಮನದಿಂದ ದಸರಾ ಮೆರಗು ಹೆಚ್ಚಿದ್ದು, ರಾಜ್ಯಗಳ ನಡುವಿನ ಸಹೋದರತೆ ಮತ್ತು ಸಾಮರಸ್ಯ ವೃದ್ಧಿಗೆ ಇದು ಸಹಕಾರಿ ಎಂದರು. ಅಲ್ಲದೆ, ಯುವಜನರು ‘ರೀಲ್ಸ್’ ಮೂಲಕ ದಸರಾವನ್ನು ದೇಶಾದ್ಯಂತ ಪ್ರಚುರಪಡಿಸಿರುವುದನ್ನು ಶ್ಲಾಘಿಸಿದ ಸಿಎಂ, ಏರ್ ಶೋ, ಕಂಬಳದ ಯಶಸ್ಸು ಹಾಗೂ ಪೊಲೀಸ್ ಇಲಾಖೆಯ ದಕ್ಷ ಕಾರ್ಯನಿರ್ವಹಣೆಯನ್ನು ಅಭಿನಂದಿಸಿದರು.

Recent Articles

spot_img

Related Stories

Share via
Copy link