ತಿಪಟೂರು
ದೆಹಲಿಯ ಜಂತರ್ ಮಂತರ್ ನಲ್ಲಿ ಸಂವಿಧಾನದ ಪ್ರತಿಗಳನ್ನು ಹರಿದು ಸುಟ್ಟು ಹಾಕಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ರವರಿಗೆ ಅಪಮಾನ ಮಾಡಿರುವ ವಿರುದ್ದ ಕ್ರಮ ಕೈಗೊಳ್ಳುವಂತೆ ತಿಪಟೂರು ತಾಲ್ಲೂಕು ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ತಾಲ್ಲೂಕಿನ ಕೆ.ಬಿ. ಕ್ರಾಸ್ ಬಳಿ ರಸ್ತೆ ತಡೆದು ಪ್ರತಿಭಟನೆ ನಡೆಸಲಾಗಿತು, ಈ ವೇಳೆ ಜಿಲ್ಲಾ ಸಂಚಾಲಕರಾದ ಕುಂದೂರು ತಿಮ್ಮಯ್ಯ ಮಾತನಾಡಿ ಕೇಂದ್ರ ಸರ್ಕಾರ ದಲಿತ ವಿರೋದ ನೀತಿಯನ್ನು ಅನುಸರಿಸುತ್ತಿದ್ದು ದೆಹಲಿಯ ಜಂತರ್ ಮಂತರ್ ನಲ್ಲಿ ಮನುವಾದಿಗಳಾದ ಶ್ರೀನಿವಾಸ ಪಾಂಡ್ಯ ಗುರೂಜಿಯವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾರತದ ಸಂವಿಧಾನ ಪ್ರತಿಗಳನ್ನು ಹರಿದು ಸುಟ್ಟು ಹಾಕಿರುತ್ತಾರೆ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಖಾಯ್ದೆಗಳ ವಿರುದ್ದ ಘೋಷಣೆಗಳನ್ನು ಕೂಗಿ, ಸಂವಿಧಾನ ಜಲಾವೋ ದೇಶ್ ಬಚಾವೋ, ಅಂಬೇಡ್ಕರ್ ಜಲಾವೋ ಅಂಬೇಡ್ಕರ್ ಮುರ್ದಾವಾದ್, ಮನುಸ್ಪುತಿ ಜಿಂದಾಬಾದ್ ನಂತಹ ಹಲವು ಘೋಷಣೆಗಳನ್ನು ಪೋಲೀಸ್ ನವರ ಸಮ್ಮುಖದಲ್ಲೆ ಸಂಸತ್ ಭವನದ ಹತ್ತಿರದಲ್ಲೆ ಕೂಗಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ರವರಿಗೆ ಅಪಮಾನ ಮಾಡಿರುತ್ತಾರೆ, ಇದೋಂದು ಹೇಯ ಕೃತ್ಯ ಮುಂದೆ ಈ ರೇತಿ ಆದಲ್ಲಿ ದೇಶದಲ್ಲಿ ಉಗ್ರಹೋರಾಟ ನಡೆಸಲಾಗುವುದು ಇದಕ್ಕೆ ಕೇಂದ್ರ ಸರ್ಕಾರವೇ ಹೊಣೆಯಾಗುತ್ತದೆ ಎಂದು ಎಚ್ಚರಿಸಿದರು.
ಇದೇ ವೇಳೆ ತಾಲ್ಲೋಕು ಸಂಚಾಲಕ ನಾಗತೀಹಳ್ಳಿ ಕೃಷ್ಣಮೂರ್ತಿ ಮಾತನಾಡಿ ರಾಷ್ಟ್ರವಾದದ ಹೆಸರಿನಲ್ಲಿ ಭಾರತದ ಶಾಂತಿ ಕದಡುತ್ತಿರುವ ದೇಶದ್ರೋಹಿ ಮನುವಾದಿಗಳು ಮೂರ್ಖರು ಎಂದು ಜರಿದ ಅವರು ಒಂದು ದೇಶದ ಜನ ಜೀವನವನ್ನು ಮತ್ತು ಅಲ್ಲಿನ ಸಂಸ್ಕøತಿಗೆ ದಕ್ಕೆ ಬರುವಂತೆ ಮಾಡಿ ಒಂದೆ ತಾಯಿಯ ಮಕ್ಕಳಂತೆ ಇರುವ ಭಾರತೀಯರಲ್ಲಿ ಒಡಕು ಮೂಡಿಸುವ ಪ್ರಯತ್ನ ಮಾಡುತ್ತಿರುತ್ತಾರೆ ಹಾಡಹಗಲೇ ಈ ರೀತಿ ನಡೆದುಕೊಳ್ಳುವ ಇಂತವರ ಅಟ್ಟಹಾಸವನ್ನು ಕೊನೆಗಾಣಿಸಿ ದೇಶ ದ್ರೋಹಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕೆಂದು ತಾಲ್ಲೋಕು ಕನ್ನಡ ದಲಿತ ಸಂಘರ್ಷ ವತಿಯಿಂದ ಹೆಚ್ಚರಿಕೆಯನ್ನು ನೀಡುತ್ತಿದ್ದೇವೆ ಎಂದುರು.