ಬೆಂಗಳೂರು
ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದ ಸಾರಿಗೆ ಸಂಸ್ಥೆಯು ಎಕ್ಸಿಕ್ಯಿಟಿವ್ ಸೇವೆಗಳನ್ನು ಹಿಂಪಡೆದಿದೆ.ಶಿರಾಡಿ ಘಾಟ್ ಸಂಪರ್ಕ ಕಡಿದುಹೋಗಿರುವುದರಿಂದ ಬುಧವಾರ ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣದಿಂದ ಮಂಗಳೂರು, ಪುತ್ತೂರು, ಕುಂದಾಪುರ ಮುಂತಾದೆಡೆಗೆ ಹೊರಡಬೇಕಿದ್ದ ಮುಂಗಡ ಟಿಕೆಟ್ ಕಾಯ್ದಿರಿಸುವ ಒಟ್ಟು 55 ಬಸ್‌ಗಳು ಮತ್ತು ಮೈಸೂರು ರಸ್ತೆ ಬಸ್ ನಿಲ್ದಾಣದಿಂದ ಹೊರಡಬೇಕಿದ್ದ 8 ಬಸ್‌ಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ.