ಕಾಡು ರಕ್ಷಿಸದಿದ್ದರೆ ಭವಿಷ್ಯ ಕ್ಲಿಷ್ಟವಾಗಲಿದೆ : ಜಿಪಂ ಸದಸ್ಯೆ

ಕೊರಟಗೆರೆ

            ನಾವೆಲ್ಲರೂ ಈಗಲೇ ಎಚ್ಚರಗೊಂಡು ಕಾಡಿನ ರಕ್ಷಣೆಗೆ ಮುಂದಾಗಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳ ಪರಿಸ್ಥಿತಿ ಕ್ಲಿಷ್ಟವಾಗಲಿದೆ ಎಂದು ಜಿ.ಪಂ ಸದಸ್ಯೆ ಪ್ರೇಮಾ ತಿಳಿಸಿದರು.

            ಪಟ್ಟಣದಲ್ಲಿ ಬುಧವಾರ ಮನೆಗೊಂದು ಮರ, ಊರಿಗೊಂದು ತೋಪು, ತಾಲ್ಲೂಕಿಗೊಂದು ಕಿರುಅರಣ್ಯ, ಜಿಲ್ಲೆಗೊಂದು ಕಾಡು ಎನ್ನುವ ಅರಣ್ಯಇಲಾಖೆಯ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿ, ಈ ಕಾರ್ಯಕ್ರಮದಲ್ಲಿ ಪ್ರತಿಯೊಬ್ಬರಿಗೂ ಗಿಡಗಳನ್ನು ನೀಡುತ್ತಿದ್ದು, ಇವುಗಳ ಪಾಲನೆ ಮತ್ತು ಪೋಷಣೆಗೆ ಎಲ್ಲರೂ ಪಣತೊಡಬೇಕು. ಇವುಗಳ ರಕ್ಷಣೆ ನಮ್ಮೆಲ್ಲರ ಹೊಣೆ ಎಂದು ತಿಳಿಸಿದರು.
ತಾಲ್ಲೂಕು ವಲಯ ಅರಣ್ಯಾಧಿಕಾರಿ ಸತೀಶ್‍ಚಂದ್ರ ಮಾತನಾಡಿ ಸರ್ಕಾರ ಕಾಡನ್ನು ನಿರ್ಮಾಣ ಮಾಡಲು ಯೋಜನೆಯನ್ನು ರೂಪಿಸಿದ್ದು, ಪ್ರತಿ ಕುಟುಂಬದ ಸದಸ್ಯರೆಲ್ಲರೂ ಒಂದಾಗಿ ಗಿಡ ನೆಡುವ ಕೆಲಸ ಮಾಡಬೇಕು ಎಂದರು.

             ತಾ.ಪಂ ಅಧ್ಯಕ್ಷ ಕೆಂಪರಾಮಯ್ಯ, ಉಪಾಧ್ಯಕ್ಷ ನರಸಮ್ಮ, ತಹಸೀಲ್ದಾರ್ ನಾಗರಾಜು, ತಾ.ಪಂ ಇಒ ಶಿವಪ್ರಸಾದ್, ತಾಲ್ಲೂಕು ವಲಯ ಅರಣ್ಯಾಧಿಕಾರಿ ಸತೀಶ್‍ಚಂದ್ರ, ಸಾಮಾಜಿಕ ವಲಯಅರಣ್ಯಾಧಿಕಾರಿ ರಾಜೇಶ್, ಉಪಅರಣ್ಯಾಧಿಕಾರಿಗಳಾದ ನಾಗರಾಜು, ನವೀನ್‍ಕುಮಾರ್, ವನರಕ್ಷಕರಾದ ಹುಮಂತಯ್ಯ, ಜಿ.ಬಿ ನರಸಿಂಹಯ್ಯ, ವೆಂಕಟರಾಮು, ಸಿದ್ದೇಶ್ ಸೇರಿದಂತೆ ಇತರರು ಇದ್ದರು.

Recent Articles

spot_img

Related Stories

Share via
Copy link