ದಾವಣಗೆರೆ:

72ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ವಾಸವಿ ಯುವಜನ ಸಂಘದ ವತಿಯಿಂದ ಪ್ರಪ್ರಥಮ ಬಾರಿಗೆ ನಗರದಲ್ಲಿ 1500 ಅಡಿ ಉದ್ದದ ಮತ್ತು 9 ಅಡಿ ಅಗಲದ ಬೃಹತ್ ರಾಷ್ಟ್ರಧ್ವಜದ ತಿರಂಗಾ ರ್ಯಾಲಿಯು ವಿಶೇಷ ಗಮನ ಸೆಳೆಯಿತು.
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಧಿಕಾರಿ ಡಿ.ಎಸ್.ರಮೇಶ್ ಅವರಿಂದ ಚಾಲನೆ ಪಡೆದ ರ್ಯಾಲಿಯು ದ್ಯಾರ್ಥಿಭವನ, ಕೆಇಬಿ ವೃತ್ತ ಎವಿಕೆ ರಸ್ತೆ, ಪಿಬಿ ರಸ್ತೆ, ಜನತಾ ಬಜಾರ್ ಮಾರ್ಗವಾಗಿ ಸಾಗಿ ನಂತರ ಹೈಸ್ಕೂಲ್ ಮೈದಾನ ಸೇರಿ ಸಮಾಪ್ತಿಗೊಂಡಿತು.
ವಿವಿಧ ಶಾಲೆಯ ವಿದ್ಯಾರ್ಥಿಗಳು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಈ ಬೃಹತ್ ರಾಷ್ಟ್ರ ಧ್ವಜವನ್ನು ಹೊತ್ತು ಸಾಗುತ್ತಿದ್ದರೆ, ಕಂಸಾಳೆ ಸೇರಿದಂತೆ ವಿವಿಧ ಕಲಾ ತಂಡಗಳು ಹಾಗೂ ಮಹಿಳೆಯರ ಸ್ಕೂಟರ್ ರ್ಯಾಲಿಯು ತಿರಂಗಾ ರ್ಯಾಲಿಗೆ ಸಾಥ್ ನೀಡಿತು.
ರ್ಯಾಲಿಯಲ್ಲಿ ಸಂಘದ ಅಧ್ಯಕ್ಷ ಆರ್.ಎನ್. ಅಜಿತ್, ಆರ್.ಜಿ. ನಾಗೇಂದ್ರ ಪ್ರಕಾಶ್, ಸುಬ್ರಮಣ್ಯ, ಆರ್.ಎಲ್. ಪ್ರಭಾಕರ್, ಆರ್.ಜಿ. ಶ್ರೀನಿವಾಸ್ ಮೂರ್ತಿ, ಗುಂಡಾಲ್ ಮಂಜುನಾಥ್, ಎ.ಡಿ. ರಾಘವೇಂದ್ರ, ಟಿ.ಕೆ. ಜಯಂತ್, ಸಾಯಿಪ್ರಸಾದ್, ಬದ್ರಿನಾಥ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








