ತಿಪಟೂರು
ದೇಶನಮಗೇನು ಮಾಡಿದೆ ಎನ್ನುವುದಕ್ಕಿಂತ ದೇಶಕ್ಕಾಗಿ ನಾವೇನು ಮಾಡಿದ್ದೇವೆ ಎನ್ನುವುದು ಮುಖ್ಯ ಎಂದು ಉಪವಿಭಾಗಾಧಿಕಾರಿ ಉಮೇಶ್ಚಂದ್ರ ತಿಳಿಸಿದರು.
ನಗರದ ಕಲ್ಪತರು ಕ್ರೀಡಾಂಗಣದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಪೊಲೀಸ್, ಗೃಹರಕ್ಷಕದ ದಳ, ಎನ್.ಸಿ.ಸಿ., ಸೇವಾದಳ, ಸ್ಕೌಟ್ಸ್-ಗೈಡ್ಸ್ ಮತ್ತು ವಿವಿಧ ಶಾಲೆಗಳ ತಂಡಗಳಿಂದ ಧ್ವಜವಂದನೆ ಸ್ವೀಕಾರಮಾಡಿ ಮಾತನಾಡಿದ ಉಮೇಶ್ಚಂದ್ರರವರು ನಾವಿಂದು 72ನೇ ಸ್ವಾತಂತ್ರ್ಯ ದಿನಚಾರಣೆಯನ್ನು ಆಚರಿಸುತ್ತಿದ್ದೇವೆ. ಇದು ನಮ್ಮಲ್ಲೆರ ಹಿರಿಯರ ತ್ಯಾಗ ಬಲಿದಾನದಿಂದ ಬಂದಿರುವುದು. ಇದನ್ನು ರಕ್ಷಣೆ ಮಾಡುವುದು ಪ್ರತಿ ಭಾರತೀಯನ ಕರ್ತವ್ಯವಾಗಿದೆ. ಭವ್ಯ ಭಾರತದ ನಿರ್ಮಾಣಕ್ಕಾಗಿ ನಾವೆಲ್ಲರೂ ಜಾತಿ ಮತ ತೊರೆದು ಒಗ್ಗೂಡಿ ದೇಶವನ್ನು ರಕ್ಷಣೆ ಮಾಡಬೇಕೆಂದು ಕರೆನೀಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಬಿ.ಸಿ.ನಾಗೇಶ್ ಇಂದು ನಾವು ಅನುಭವಿಸುತ್ತಿರುವ ಸ್ವಾತಂತ್ರ್ಯ ಬಾಲಗಂಗಾಧರ ತಿಲಕ್, ಮಹಾತ್ಮಗಾಂಧಿ, ಸುಭಾಷ್ಚಂದ್ರಬೋಸ್, ಉದಾಮ್ ಸಿಂಗ್, ಭಗತ್ ಸಿಂಗ್ ಇನ್ನು ಮುಂತಾದ ಲಕ್ಷಾಂತರ ಮಹನೀಯರ ತ್ಯಾಗ ಬಲಿದಾನದಿಂದ ಸ್ವಾತಂತ್ರ್ಯ ಬಂದಿದೆ. ಇದಕ್ಕಾಗಿ ತ್ಯಾಗಮಾಡಿದ ಮಹನೀಯರನ್ನು ಸ್ಮರಿಸುತ್ತಾ ನಾವು ದೇಶದ ಕಾವಲಿಗೆ ಸದಾಸಿದ್ದರಾಗಿರಬೇಕು. ರಾಮರಾಜ್ಯದ ಕನಸು ನನಸು ಮಾಡಬೇಕು. ನೆರೆಯ ಶತ್ರು ರಾಷ್ಟ್ರಗಳಾದ ಪಾಕಿಸ್ತಾನ, ಚೀನಾ, ಬಾಂಗ್ಲಾ ದೇಶಗಳ ಗುಂಡಿಗೆ ಎದೆಯೊಡ್ಡಿ ನಮ್ಮೆಲ್ಲರನ್ನು ಕಾಯುತ್ತಿರುವ ನಮ್ಮ ಸೈನಿಕರು ನಮ್ಮೆಲ್ಲರ ನಿಜವಾದ ನಾಯಕರು. ನಾವು ಈ ದಿನದಲ್ಲಿ ಯಾವ ರೀತಿ ಕಾರ್ಯನಿರ್ವಹಿಸುತ್ತಿದ್ದೇವೆ ಎಂದು ತಿಳಿಯಲು ಶಾಲಾ, ಕಾಲೇಜು, ಕಚೇರಿಗಳಲ್ಲಿ ಸಿ.ಸಿ.ಟಿ.ವಿಯನ್ನು ಅಳವಡಿಸಿಕೊಂಡಿದ್ದೇವೆ. ಇದು ತೊಲಗಿ ನೈತಿಕವಾಗಿ, ಸ್ವಾಭಿಮಾನಿಗಳಾಗಿ ಸರ್ಕಾರದ ಕೆಲಸ ದೇವರಕೆಲಸವೆಂದು ತಿಳಿದು ನಾವೆಲ್ಲರೂ ಸ್ವಾಭಿಮಾನಿಗಳಾಗಿ ಆತ್ಮ ವಿಶ್ವಾಸದಿಂದ ಕೆಲಸಮಾಡಿದರೆ ಬಲಿಷ್ಟವಾದ ಭಾರತವನ್ನು ನಿರ್ಮಿಸೋಣ ಎಂದರು.
ಅರಣ್ಯ ಇಲಾಖೆಯಿಂದ ಪ್ರತಿಜ್ಞೆ: ಹಸಿರು ಕರ್ನಾಟಕ ನಿರ್ಮಾಣ, ಮನೆಗೊಂದು ಮರ, ಊರಿಗೊಂದು ವನ, ನಿರ್ಮಾಣ ಮಾಡಿ ಹಸಿರು ಕರ್ನಾಟಕ ಯೋಜನೆಯನ್ನು ಯಶಸ್ವಿಗೊಳಿಸಲು ಶ್ರಮಿಸೋಣ. ನಾವೆಲ್ಲರೂ ನಮ್ಮ ಮನೆ ಅಂಗಳದಲ್ಲಿ ಗಿಡಗಳನ್ನು ನೆಟ್ಟು ಬೆಳೆಸೋಣ, ನಮ್ಮ ರಾಜ್ಯದ ನೈಸರ್ಗಿಕ ಸಂಪನ್ಮೂಲಗಳಾದ ಅರಣ್ಯ, ನೀರು, ವನ್ಯಜೀವಿಗಳನ್ನು ರಕ್ಷಿಸುವುದು ನಮ್ಮೆಲ್ಲರಹೊಣೆ ಎಂದು ಪ್ರತಿಜ್ಞೆ ಮಾಡಿದರು.
ಕಾರ್ಯಕ್ರಮದಲ್ಲಿ ಮಕ್ಕಳ ಆಕರ್ಷಕ ಪಥಸಂಚಲನ, ಛದ್ಮವೇಷ, ಸಾಂಸ್ಕøತಿಕ ಕಾರ್ಯಕ್ರಮಗಳು ಜನರ ಮನಸೂರೆಗೊಂಡವು
ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಶಿವರಾಜ್, ಡಿ.ವೈ.ಎಸ್.ಪಿ ವೇಣುಗೋಪಾಲ್, ತಾ.ಪಂ ಅಧ್ಯಕ್ಷ ಎನ್.ಎಂ.ಸುರೇಶ್, ನಗರಸಭಾಧ್ಯಕ್ಷ ಪ್ರಕಾಶ್, ಉಪಾಧ್ಯಕ್ಷ ಜಹರಾ ಜಬೀನ್, ವೃತ್ತನಿರೀಕ್ಷಕರಾದ ಕೃಷ್ಣರಾಜು, ದೀಪಕ್, ಗ್ರಾಮಾಂತರ ವೃತ್ತ ನಿರೀಕ್ಷಕರ ಕೃಷ್ಣಕುಮಾರ್, ವಿವಿಧ ಇಲಾಖೆಯ ಅಧಿಕಾರಿಗಳು, ಜನಪ್ರತಿನಿಧಿಗಳು, ವಿವಿಧ ಶಾಲಾ ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು ಭಾಗವಹಿಸಿದ್ದರು.
ಪ್ರತಿದಿನದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿಯ facebook page like ಮಾಡಿ