72ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸಿದ ಮುಸಲ್ಮಾನ ಬಾಂಧವರು

ತಿಪಟೂರು

              ನಗರದ ಗಾಂಧಿನಗರದ ಮದೀನ ಮಸಜೀದ್ ವತಿಯಿಂದ ಗಾಂಧಿನಗರದ ವೃತ್ತದಲ್ಲಿ ಅದ್ದೂರಿಯಾಗಿ 72ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು.

             ಈ ವೇಳೆ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಡಾ|| ಶ್ರೀಧರ್‍ರವರು ಮುಸಲ್ಮಾನ ಬಾಂಧವರು ಇಷ್ಟು ಅದ್ದೂರಿಯಾಗಿ ಮಾಡುತ್ತಿರುವುದು ನಮ್ಮೆಲ್ಲರಿಗೂ ಸಂತೋಷದ ವಿಷಯ. ಜಾತಿ ಭೇದವನ್ನು ಮರೆತು ಎಲ್ಲರೂ ಭಾರತ ದೇಶವೊಂದೆ, ವಂದೇಮಾತರಂ ಎನ್ನುವುದನ್ನು ನಾವು ತಿಳಿಸಿ ಸೌಹಾರ್ದತೆಯಿಂದ ಬಾಳಬೇಕು. ಇಲ್ಲಿ ಧ್ವಜವನ್ನು ಹಾರಿಸಲು ಅನುವು ಮಾಡಿಕೊಟ್ಟು ನಮ್ಮೆಲ್ಲರ ರಾಷ್ಟ್ರಪೇಮವನ್ನು ಹೆಚ್ಚಿಸಿದ್ದೀರಿ. ಇಲ್ಲಿರುವ ಏನೂ ತಿಳಿಯದ ಮುಗ್ದ ಮಕ್ಕಳ ನಿಷ್ಕಲ್ಮಶ ದೇಶಪ್ರೇಮವೇ ನಮ್ಮ ದೇಶವನ್ನು ಕಾಯುತ್ತದೆ ಎಂದರು. ನಮ್ಮ ರಾಷ್ಟ್ರವನ್ನು ಪ್ರಪಂಚದಲ್ಲೇ ಉತ್ತುಂಗ ಮಟ್ಟಕ್ಕೇರಿಸುವುದೇ ನಮ್ಮಲ್ಲರ ಗುರಿಯಾಗಿಸಿಕೊಳ್ಳಬೇಕೆಂದರು.

              ತನ್ವೀರ್ ಮಾತನಾಡಿ ಸ್ವತಂತ್ರವೆಂದರೆ ಎಲ್ಲರೂ ಅನುಭವಿಸುವಂತಹದ್ದು. ನಮ್ಮನ್ನು ಒಂದು ಪಂಜರದಲ್ಲಿ ಕೂಡಿಹಾಕಿ ಎಲ್ಲಾ ವೈಭೋಗಗಳನ್ನು ಕೊಟ್ಟರೂ ನಾವು ಸಂತೋಷದಿಂದ ಇರುವುದಿಲ್ಲ ಎಂದು ತಿಳಿಸಿದರು.

               ಕಾರ್ಯಕ್ರಮದಲ್ಲಿ ನಗರದ ಮಾಜಿ ಪುರಭಾಧ್ಯಕ್ಷರಾದ ಖಾದರ್, ದಸ್ತಗೀರ್ ಸಾಬ್, ವಜೀರ್ ಅಹ್ಮದ್, ಅಲ್ಲಾಬಕಾಶ್, ಬಿ.ಕೆ.ಫಯಾಜ್ ಅಹ್ಮದ್, ಸಮೀಉಲ್ಲಾ, ವಿವಿಧ ಮಸೀದಿಗಳ ಮೌಲ್ವಿಗಳು, ವಿದ್ಯಾರ್ಥಿಗಳು, ಮಕ್ಕಳು ಮುಂತಾದವರು ಭಾಗವಹಿಸಿದ್ದರು.

ಪ್ರತಿದಿನದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿಯ facebook page like ಮಾಡಿ   

Recent Articles

spot_img

Related Stories

Share via
Copy link