ನವದೆಹಲಿ:

ವಿಧಿವಶರಾಗಿರುವ ಭಾರತದ ಮಾಜಿ ಪ್ರದಾನಮಂತ್ರಿ ಎ.ಬಿ.ವಾಜಪೇಯಿ ಅವರ ಪಾರ್ಥಿವ ಶರೀರವನ್ನು ಸಾರ್ವಜನಿಕ ಅಂತಿಮ ದರ್ಶನಕ್ಕಾಗಿ ನವದೆಹಲಿಯಲ್ಲಿರುವ ಬಿಜೆಪಿಯ ಪ್ರಧಾನ ಕಚೇರಿಯಲ್ಲಿ ಇಡಲಾಗಿದೆ.
ಪಂಡಿತ್ ದೀನ್ ದಯಾಳ್ ಮಾರ್ಗದಲ್ಲಿರುವ ಈ ಬಿಜೆಪಿ ಕಚೇರಿಯಲ್ಲಿ ಮಧ್ಯಾಹ್ನ 1 ಗಂಟೆವರೆಗೆ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.
ಹಲ ಗಣ್ಯರಿಂದ ಅಂತಿಮ ನಮನ:

ಅಗಲಿದ ನಾಯಕ ಮಾಜಿ ಪ್ರದಾನಿ ಹಾಗೂ ಭಾರತರತ್ನ ಎ.ಬಿ.ವಾಜಪೇಯಿ ಅವರಿಗೆ ಕಣ್ಣೀರಿನ ವಿದಾಯದೊಂದಿಗೆ ಅಂತಿಮ ನಮನ ಸಲ್ಲಿಸಲಾಯಿತು. ಭಾರತದ ಪ್ರಧಾನಮಂತ್ರಿ ನರೇಂದ್ರಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ಶಾ, ಯೋಗಿಆದಿತ್ಯನಾಥ್, ರಾಜನಾಥ್ಸಿಂಗ್, ಇನ್ನೂ ಮುಂತಾದ ಹಲವು ಗಣ್ಯರು ಅಂತಿಮ ನಮನ ಸಲ್ಲಿಸಿದರು.ಅಪಾರ ಸಂಖ್ಯೆಯಲ್ಲಿ ಜನ ಸೇರುವ ಸಾಧ್ಯತೆ ಇರುವುದರಿಂದ ಬಿಜೆಪಿ ಕಚೇರಿಗೆ ಬಿಗಿಭದ್ರತೆ ಒದಗಿಸಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








