ಅಟಲ್ ಜೀ ಕುಣಿಗಲ್‍ಗೆ ಬಂದು ಹೋದ ನೆನಪಿನೊಂದಿಗೆ ಕಂಬನಿ ಮಿಡಿದ ಯುವಕರು

ಕುಣಿಗಲ್ :

ಮಾಜಿ ಪ್ರಧಾನ ಮಂತ್ರಿ ಹಾಗೂ ಭಾರತರತ್ನ ಪುರಸ್ಕøತ ಅಟಲ್ ಬಿಹಾರಿ ವಾಜಪೇಯಿ ಅವರ ನಿಧನದ ಸುದ್ದಿಯಿಂದ ಸಾವಿರಾರು ಯುವಕರು ಸೇರಿದಂತೆ ಬಿಜೆಪಿ ಪಕ್ಷದ ಕಾರ್ಯಕರ್ತರ ಮೊಗದಲ್ಲಿ ಆತಂಕ ಮಡುಗಟ್ಟಿದ್ದು, ಅಟಲ್ ಜೀ ಅವರು ಪ್ರಧಾನ ಮಂತ್ರಿಯಾಗಿದ್ದಾಗ ಹಮ್ಮಿಕೊಂಡ ಜನಪರ ಯೋಜನೆಗಳ ಬಗ್ಗೆ ಮತ್ತು ದೇಶದ ಭದ್ರತೆಯ ಬಗ್ಗೆ ಹೊಂದಿದ್ದ ದಿಟ್ಟತನ ಹಾಗೂ ದೂರದೃಷ್ಠಿಯ ರಾಜಕಾರಣದ ವಿಚಾರವನ್ನು ಜೊತೆಗೆ ಕಳೆದ ಸುಮಾರು 30 ವರ್ಷಗಳ ಹಿಂದೆ ಪಟ್ಟಣದ ತುಮಕೂರು ರಸ್ತೆಯಲ್ಲಿರುವ ಉದ್ಯಾನವಕ್ಕೆ ಆಗಮಿಸಿ ಚುನಾವಣಾ ಪ್ರಚಾರ ಮಾಡಿದ ಬಗ್ಗೆಯೂ ಮೆಲುಕು ಹಾಕುವುದರ ಮೂಲಕ ಕಂಬನಿ ಮಿಡಿದಿದ್ದಾರೆ.

ಪಟ್ಟಣದ ದೊಡ್ಡಪೇಟೆ ಸೇರಿದಂತೆ ಕೋಟೆ, ಅಗ್ರಹಾರ ಹಾಗೂ ಎಡೆಯೂರು, ಅಮೃತೂರು, ಹುಲಿಯೂರುದುರ್ಗ ಸೇರಿದಂತೆ ತಾಲ್ಲೂಕಿನ ವಿವಿಧೆಡೆ ಮಾಜಿ ಪ್ರಧಾನ ಮಂತ್ರಿ ಹಾಗೂ ಭಾರತರತ್ನ ಪುರಸ್ಕøತ ಅಟಲ್ ಬಿಹಾರಿ ವಾಜಪೇಯಿ ಅವರ ಭಾವ ಚಿತ್ರವನ್ನು ಇಟ್ಟು ಶ್ರದ್ದಾಭಕ್ತಿಯಿಂದ ನಮುಸ್ಕರಿಸಿ ಪೂಜೆಸಲ್ಲಿಸಿದರೆ ಇನ್ನೂ ಹಲವು ಕಡೆ ಅವರ ಭಾವಚಿತ್ರವನ್ನು ಹಿಡಿದು ನೂರಾರು ಯುವಕರು ಪ್ರಮುಖ ಬೀದಿಯಲ್ಲಿ ಮೆರವಣಿಗೆಯಲ್ಲಿ ತೆರಳಿ ಅಟಲ್ ಬಿಹಾರಿ ವಾಜಪೇಯಿ ಅಮರ್ ಹೈ ಅಮರೈ ಎಂದು ಕೂಗುತ್ತ ಶ್ರದ್ದಾಪೂರ್ವಕವಾಗಿ ಶ್ರದ್ಧಾಂಜಲಿ ಸಲ್ಲಿಸಿದರು.

Recent Articles

spot_img

Related Stories

Share via
Copy link