ಶಿವರಾಜಕುಮಾರ್ ಕಂಠಸಿರಿಯಲ್ಲಿ `ತಾರಕಾಸುರ’ ಚಿತ್ರದ ಗೀತೆ

       ಎನ್.ನರಸಿಂಹಲು ಅವರು ನಿರ್ಮಿಸುತ್ತಿರುವ `ತಾರಾಕಾಸುರ` ಚಿತ್ರ ತೆರೆಗೆ ಬರಲು ಸಿದ್ದವಾಗಿದೆ. ಗೌರಿಹಬ್ಬದ ವೇಳೆಗೆ ಚಿತ್ರದ ಆಡಿಯೋ ರಿಲೀಸ್  ಆಗಲಿದೆ. ಚಿತ್ರದ ಒಂದು ಗೀತೆಯನ್ನು ಸೆಂಚುರಿ ಸ್ಟಾರ್ ಶಿವರಾಜಕುಮಾರ್ ಹಾಡುವುದರರೊಂದಿಗೆ ಚಿತ್ರತಂಡಕ್ಕೆ ಸಾಥ್ ನೀಡಿದ್ದಾರೆ. ಸೆಪ್ಟಂಬರ್‍ನಲ್ಲಿ ಚಿತ್ರ ತೆರೆಗೆ ಬರಲಿದ್ದು, ಬೆಂಗಳೂರು, ಮೈಸೂರು, ಚಾಮರಾಜನಗರ, ಕೊಳ್ಳೇಗಾಲ,ಮಂಡ್ಯ ಮುಂತಾದ ಕಡೆ ಚಿತ್ರೀಕರಣ ನಡೆದಿದೆ.

ಹಿಂದೆ `ರಥಾವರ`ಎಂಬ ಯಶಸ್ವಿ ಚಿತ್ರ ನಿರ್ದೇಶಿಸಿದ್ದ ಚಂದ್ರಶೇಖರ್ ಬಂಡಿಯಪ್ಪ `ತಾರಾಕಾಸುರ` ಚಿತ್ರದ ನಿರ್ದೇಶಕರು. ನಿರ್ದೇಶಕರೆ ಚಿತ್ರಕ್ಕೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ. ಧರ್ಮವಿಶ್ ಸಂಗೀತ ನಿರ್ದೇಶನದ ಈ ಚಿತ್ರಕ್ಕೆ ಕುಮಾರ್ ಗೌಡ ಅವರ ಛಾಯಾಗ್ರಹಣವಿದೆ. ಕೆ.ಎಂ.ಪ್ರಕಾಶ್ ಸಂಕಲನ, ಜಾಲಿ ಬಾಸ್ಟಿನ್, ಡಿಫರೆಂಟ್ ಡ್ಯಾನಿ ಸಾಹಸ ನಿರ್ದೇಶನ ಹಾಗೂ ಮುರಳಿ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.

ವೈಭವ್ ನಾಯಕರಾಗಿ ನಟಿಸುತ್ತಿರುವ ಈ ಚಿತ್ರದ ನಾಯಕಿ ಮಾನ್ವಿತ ಹರೀಶ್. ಹಾಲಿವುಡ್‍ನ ನಟ ಡ್ಯಾನಿ  ಸಫಾನಿ ಕೂಡ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಸಾಧುಕೋಕಿಲ, ಜೈಜಗದೀಶ್, ಎಂ.ಕೆ.ಮಠ, ಕರಿಸುಬ್ಬು ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

Recent Articles

spot_img

Related Stories

Share via
Copy link