ರೈತ ಮತ್ತು ಯೋಧ ದೇಶದ ಎರಡು ಕಣ್ಣುಗಳು

ಗುಬ್ಬಿ

            ಧರ್ಮ ಮತ್ತು ಧಾರ್ಮಿಕ ಆಚರಣೆಗಳಿಂದ ಮನುಷ್ಯನ ಬದುಕಿನಲ್ಲಿ ಶಾಂತಿ ಮತ್ತು ನೆಮ್ಮದಿ ಪಡೆಯಲು ಸಾಧ್ಯವಿದ್ದು, ನಮ್ಮ ಸನಾತನ ಧಾರ್ಮಿಕ ಆಚರಣೆಗಳನ್ನು ಉಳಿಸಿ ಬೆಳೆಸುವತ್ತ ಪ್ರತಿಯೊಬ್ಬರೂ ಪ್ರಾಮಾಣಿಕ ಪ್ರಯತ್ನ ಮಾಡಬೇಕೆಂದು ಆನಂದ ಗುರೂಜಿ ಕರೆ ನೀಡಿದರು.

            ಪಟ್ಟಣದ ಶ್ರೀ ಚಿದಂಬರ ಆಶ್ರಮದಲ್ಲಿ ಶ್ರೀ ದತ್ತಾಂಜನೇಯಸ್ವಾಮಿಯವರ ರಥೋತ್ಸವದ ಅಂಗವಾಗಿ ಏರ್ಪಡಿಸಿದ್ದ ಹೋಮ ಹವನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಆಧುನಿಕತೆ ಬೆಳೆದಂತೆ ನಮ್ಮ ಸನಾತನ ಧಾರ್ಮಿಕ ಆಚರಣೆಗಳು ಮತ್ತು ಮೌಲ್ಯಗಳು ಕುಸಿಯುತ್ತಿರುವ ಸಂದರ್ಭದಲ್ಲಿ ಇಂದಿಗೂ ಶ್ರೀ ಚಿದಂಬರಾಶ್ರಮದಲ್ಲಿ ಧಾರ್ಮಿಕ ಆಚರಣೆಗಳು ಪರಂಪರಾಗತವಾಗಿ ನಡೆದುಕೊಂಡು ಬರುತ್ತಿರುವುದು ಅಭಿನಂದನಾರ್ಹವಾದುದಾಗಿದೆ ಎಂದು ತಿಳಿಸಿದರು.

             ರಾಜ್ಯದಲ್ಲಿ ಪ್ರಕೃತಿ ವಿಕೋಪದಿಂದಾಗಿ ಸಾಕಷ್ಟು ಕಡೆ ಮಳೆಯ ಅವಾಂತರ ಸೃಷ್ಟಿಯಾಗಿದ್ದು, ಇದರಿಂದ ಜನಜೀವನ ಅಸ್ತವ್ಯಸ್ತವಾಗಿದೆ. ರಾಜ್ಯದ ಎಲ್ಲಾ ಕಡೆಗಳಲ್ಲಿಯೂ ಉತ್ತಮವಾದÀ ಮಳೆ ಬೆಳೆಯಾಗಲಿ, ಜನ ಜಾನುವಾರುಗಳು ತೃಪ್ತಿಕರವಾಗಿರಲಿ ಎಂದು ಶುಭ ಹಾರೈಸಿದ ಅವರು, ದೇಶದಲ್ಲಿ ರೈತರು ಮತ್ತು ಯೋಧÀರು ಇಬ್ಬರೂ ಈ ದೇಶದ ಎರಡು ಕಣ್ಣುಗಳು. ಹಾಗಾಗಿ ಅವರಿಬ್ಬರೂ ಚೆನ್ನಾಗಿದ್ದರೆ ಇಡೀ ದೇಶವೆ ಚೆÀನ್ನಾಗಿರುತ್ತದೆ. ನಮ್ಮ ನಾಡು ಚೆÀನ್ನಾಗಿರಬೇಕು ಎಂದು ಹೋಮ ಹವನಗಳನ್ನು ಮಾಡಲಾಗುತ್ತಿz.É ಭಾರತೀಯ ಸಂಸೃತಿ, ಆಚಾರ, ವಿಚಾರಗಳು ಶಾಶ್ವತವಾಗಿ ಉಳಿಯಬೇಕಾಗಿದೆ ಎಂದು ತಿಳಿಸಿದರು. ಧಾರ್ಮಿಕ ಕಾರ್ಯಕ್ರಮದಲ್ಲಿ ಆಶ್ರಮದ ಅಧ್ಯಕ್ಷರಾದ ಶ್ರೀಶಿವಚಿದಂಬರಶರ್ಮ ಸೇರಿದಂತೆ ನಾಡಿನ ವಿವಿಧ ಭಾಗಗಳಿಂದ ಆಗಮಿಸಿದ ಭಕ್ತಾದಿಗಳು ಭಾಗವಹಿಸಿದ್ದರು

Recent Articles

spot_img

Related Stories

Share via
Copy link