ಬೆಂಗಳೂರು:
ಅಕ್ರಮವಾಗಿ ಮಾದಕ ದ್ರವ್ಯ ಸಾಗಿಸುತ್ತಿದ್ದ ವಿದೇಶಿ ಪ್ರಜೆಯನ್ನು ಯಶವಂತಪುರದ ಬಳಿ ಪೊಲೀಸ್ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈತ ನೈಜೀರಿಯಾದವನಾಗಿದ್ದು ಮುಂಬೈನಿಂದ ಬೆಂಗಳೂರಿಗೆ ಬಸ್ಸಿನಲ್ಲಿ ಬಂದಿದ್ದ. ಖಚಿತ ಮಾಹಿತಿ ಮೇರೆಗೆ ಆತನನ್ನು ಬಂಧಿಸಿರುವ ಪೊಲೀಸ್ ವಿಚಾರಣೆ ನಡೆಸಿದ್ದಾರೆ.
ಆತನ ಬ್ಯಾಗ್‍ನಲ್ಲಿ ಇದ್ದ ಬಾಟಲಿಯಲ್ಲಿ ಎಲ್‍ಎಸ್‍ಡಿ ಎಂಬ ಮಾದಕ ದ್ರವ್ಯ ಇತ್ತು. ಸುಮಾರು 4.1 ಗ್ರಾಂ ದ್ರವ್ಯ ವಶಕ್ಕೆ ಪಡೆಯಲಾಗಿದೆ. ಆರೋಪಿಗೆ ಮುಂಬೈ, ಕೇರಳ, ದೆಹಲಿಯಲ್ಲಿನ ಡ್ರಗ್‍ಮಾಫಿಯಾ ಗ್ಯಾಂಗ್‍ಗಳ ಜತೆ ನಂಟು ಇರುವ ಶಂಕೆಯಿದ್ದು ಆರೋಪಿಯನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದೆ.
ಎಸಿಬಿ ಬಲೆಗೆ ಪೇದೆ
ಗ್ರಾನೈಟ್ ಕಾರ್ಖಾನೆಯ ಮ್ಯಾನೇಜರ್‍ರೊಬ್ಬರಿಗೆ 40 ಸಾವಿರ ಹಣಕ್ಕೆ ಬೇಡಿಕೆಯಿಟ್ಟಿದ್ದ ಪೊಲೀಸ್ ಪೇದೆಯು ಎಸಿಬಿ ಪೊಲೀಸ್ ಬಲೆಗೆ ಬಿದ್ದಿದ್ದಾರೆ.
ಶಿಡ್ಲಘಟ್ಟ ತಾಲೂಕಿನ ದಿಬ್ಬೂರಹಳ್ಳಿ ಪೋಲೀಸ್ ಠಾಣೆಯಲ್ಲಿ ಪೇದೆಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಚಂದ್ರಶೇಖರ್‍ರನ್ನು ಬಲೆಗೆ ಕೆಡವಿರುವ ಎಸಿಬಿ ಅಧಿಕಾರಿಗಳು ಪ್ರಕರಣ ದಾಖಲಿಸಿದ್ದಾರೆ.
ದಿಬ್ಬೂರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ದಿಬ್ಬೂರಹಳ್ಳಿ- ಸಾದಲಿ ಮಾರ್ಗದ ನಡುವೆ ಇರುವ ವಿಶಾಲಾಕ್ಷಿ ಸ್ಟೋನ್ ಆರ್ಟ್ ಗ್ರಾನೈಟ್ ಕಾರ್ಖಾನೆ ಮ್ಯಾನೇಜರ್ ಶಂಕರ್‍ಗೆ 40,000 ಹಣಕ್ಕೆ ಬೇಡಿಕೆ ಇಟ್ಟಿದ್ದ ಪೇದೆ ಚಂದ್ರಶೇಖರ್ ಅದನ್ನು ಪಡೆಯುತ್ತಿದ್ದಾಗ ಎಸಿಬಿ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ