ಧರ್ಮದೇಟು ತಿಂದ ಮಹಾನಗರಪಾಲಿಕೆಯ ಸದಸ್ಯ

ಔರಂಗಾಬಾದ್: 

              ದೇಶವೂ ರಾಜಕೀಯ ಅಜಾತಶತ್ರುವಾದ  ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ನಿಧನಕ್ಕೆ ಸಂತಾಪ ಸೂಚಿಸುತ್ತಿದ್ದರೆ. ಇಲ್ಲೋಬ್ಬ ಅಜಾತಶತ್ರುವಿಗೆ ಶ್ರದ್ಧಾಂಜಲಿ ಸಲ್ಲಿಸಲು ಎಐಎಂಐಎಂ(All India Majlis-e-Ittehadul Muslimeen) ಸದಸ್ಯನೊಬ್ಬ ಒಲ್ಲೆ ಎಂದಿದ್ದಕ್ಕಾಗಿ ಧರ್ಮದೇಟು ತಿಂದ ಘಟನೆ ಮಹಾರಾಷ್ಟ್ರದ ಔರಂಗಾಬಾದ್ ನಲ್ಲಿ ನಡೆದಿದೆ.

            ಮಹಾನಗರಪಾಲಿಕೆ ಸಭೆಯಲ್ಲಿ ದೇಶದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಆವರಿಗೆ ಶ್ರದ್ಧಾಂಜಲಿ ಅರ್ಪಿಸಲು ಬಿಜೆಪಿ ಮುಖಂಡರು ಮುಂದಾದರು. ಇದೇ ಸಂದರ್ಭದಲ್ಲಿ ತಾನು ಶ್ರದ್ಧಾಂಜಲಿ ಅರ್ಪಿಸುವುದಿಲ್ಲಾ ಎಂದು ಸಯ್ಯದ್ ಮತೀನ್ ಎಂಬುವವರು ಹೇಳಿದ ಕಾರಣಕ್ಕೆ  ಏಟು ತಿಂದ ಘಟನೆ ನಡೆಯಿತು.ಶ್ರೀ ವಾಜಪೇಯಿ ಜೀ ಅವರು ಯಾವುದೇ ಒಂದುದ ಪಕ್ಷಕ್ಕೆ ಸೀಮಿತವಾದ ನಾಯಕ ಎಂಬಂತೆ ನೋಡಬೇಡಿ. ಅವರು ಪ್ರಧಾನಿಯಾಗಿದ್ದವರು, ಅವರ ನಿಧನಕ್ಕೆ ಇಡೀ ವಿಶ್ವವೇ ಮರುಗಿದೆ, ಅವರೊಬ್ಬ ಅಜಾತ ಶತ್ರು ಎಂಬುದನ್ನು ಬಿಜೆಪಿ ಸದಸ್ಯರು ಎಐಎಂಐಎಂ ಸದಸ್ಯನಿಗೆ ತಿಳಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page like ಮಾಡಿ

Recent Articles

spot_img

Related Stories

Share via
Copy link